ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇಸಿ ಕ್ರಿಕೆಟ್‌ನಲ್ಲಿ ರೈನಾ ಉತ್ತಮ ಫಾರ್ಮ್ ತೋರಿಸಿಲ್ಲ: ಎಂಎಸ್‌ಕೆ ಪ್ರಸಾದ್

Suresh Raina didnt show form in domestic cricket, says MSK Prasad

ನವದೆಹಲಿ, ಮೇ 5: ಟೀಮ್ ಇಂಡಿಯಾದ ಆಕರ್ಷಣೀಯ ಬ್ಯಾಟ್ಸ್‌ಮನ್ ಸುರೇಶ್ ರೈನಾ ರಾಷ್ಟ್ರೀಯ ತಂಡಕ್ಕೆ ವಾಪಸ್ಸಾಗೋದು ದೂರದ ಮಾತು ಅನ್ನಿಸಿದೆ. ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂಎಸ್ ಪ್ರಸಾದ್ ಕೂಡ 2018-19ರ ದೇಶಿ ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಉತ್ತಮ ಪಾರ್ಮ್ ತೋರಿಸಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್‌ ಭೀತಿ ಮಧ್ಯೆ ಪ್ರಮೂಖ ಕ್ರಿಕೆಟ್ ಲೀಗ್ ಟೂರ್ನಿಯ ದಿನಾಂಕ ಘೋಷಣೆ!ಕೊರೊನಾ ವೈರಸ್‌ ಭೀತಿ ಮಧ್ಯೆ ಪ್ರಮೂಖ ಕ್ರಿಕೆಟ್ ಲೀಗ್ ಟೂರ್ನಿಯ ದಿನಾಂಕ ಘೋಷಣೆ!

33ರ ಹರೆಯದ ಸುರೇಶ್ ರೈನಾ ಭಾರತ ತಂಡದ ಪರ 226 ಏಕದಿನ ಪಂದ್ಯಗಳು, 78 ಟಿ20ಐ ಪಂದ್ಯಗಳು, 18 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಜುಲೈ 2018ರಲ್ಲಿ ರೈನಾ ಇಂಗ್ಲೆಂಡ್‌ ವಿರುದ್ಧ ಕಡೇಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ದುರ್ಬಲ ಫಾರ್ಮ್‌ನಿಂದಾಗಿ ತಂಡದಿಂದ ಕೈಬಿಡಲ್ಪಟ್ಟಿದ್ದ ರೈನಾ ಗಾಯಕ್ಕೂ ತುತ್ತಾಗಿದ್ದರು.

ಭಾರತಕ್ಕೆ ಬೌಲಿಂಗ್ ಕೋಚ್ ಆಗಲು ರೆಡಿ: ಪಾಕ್ ವೇಗಿ ಶೋಯೆಬ್ ಅಖ್ತರ್ಭಾರತಕ್ಕೆ ಬೌಲಿಂಗ್ ಕೋಚ್ ಆಗಲು ರೆಡಿ: ಪಾಕ್ ವೇಗಿ ಶೋಯೆಬ್ ಅಖ್ತರ್

ಗಾಯಕ್ಕೀಡಾಗಿದ್ದ ರೈನಾ, ಕಳೆದ ವರ್ಷ ನೆದರ್ಲ್ಯಾಂಡ್‌ನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಈಗ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ. ಐಪಿಎಲ್‌ನಲ್ಲಿ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡೋದನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಟೂರ್ನಿಯೇ ಮುಂದೂಡಲ್ಪಟ್ಟಿದೆ.

ತೆಂಡೂಲ್ಕರ್, ಕೊಹ್ಲಿ ನಡುವಿನ ವ್ಯತ್ಯಾಸ ವಿವರಿಸಿದ ಸುರೇಶ್ ರೈನಾತೆಂಡೂಲ್ಕರ್, ಕೊಹ್ಲಿ ನಡುವಿನ ವ್ಯತ್ಯಾಸ ವಿವರಿಸಿದ ಸುರೇಶ್ ರೈನಾ

'ವಿವಿಎಸ್ ಲಕ್ಷ್ಮಣ್ ಅವರನ್ನೇ ನೋಡಿ, 1999ರಲ್ಲಿ ಅವರನ್ನು ಭಾರತ ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ಆದರೆ ದೇಸಿ ಕ್ರಿಕೆಟ್‌ನಲ್ಲಿ 1400 ರನ್ ಬಾರಿಸಿದ ಲಕ್ಷ್ಮಣ್ ರಾಷ್ಟ್ರೀಯ ತಂಡಕ್ಕೆ ಆರಿಸಲೇಬೇಕಾದ ಒತ್ತಡ ಸೃಷ್ಟಿಸಿದ್ದರು. ಹಿರಿಯ ಆಟಗಾರರಿಂದ ನಾವಿದನ್ನೇ ಬಯಸುತ್ತೇವೆ,' ಎಂದು ಪಿಟಿಐ ಜೊತೆ ಮಾತನಾಡುತ್ತ ಎಂಎಸ್‌ಕೆ ಹೇಳಿದ್ದಾರೆ.

ಧೋನಿ ಅಲ್ಲ ಯುವರಾಜ್ ಅಲ್ಲ: 2011ರ ವಿಶ್ವಕಪ್ ಗೆಲ್ಲಲು ಈತನೇ ಕಾರಣ ಎಂದ ರೈನಾಧೋನಿ ಅಲ್ಲ ಯುವರಾಜ್ ಅಲ್ಲ: 2011ರ ವಿಶ್ವಕಪ್ ಗೆಲ್ಲಲು ಈತನೇ ಕಾರಣ ಎಂದ ರೈನಾ

2018-19 ಸೀಸನ್‌ನಲ್ಲಿ ರೈನಾ ಐದು ರಣಜಿ ಪಂದ್ಯಗಳಲ್ಲಿ 243 ರನ್ ಬಾರಿಸಿದ್ದರು. ಇದರಲ್ಲಿ ಎರಡು ಅರ್ಧ ಶತಕಗಳು ಸೇರಿದ್ದವು. ಐಪಿಎಲ್‌ನಲ್ಲಿ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಆಗಿರುವ ರೈನಾ, 2019ರ ಸೀಸನ್‌ನಲ್ಲಿ ಸಿಎಸ್‌ಕೆ ಪರ 17 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 383 ರನ್ ಮಾತ್ರ.

Story first published: Tuesday, May 5, 2020, 17:02 [IST]
Other articles published on May 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X