ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಮಿಸ್ಟರ್ ಐಪಿಎಲ್‌' ಸುರೇಶ್ ರೈನಾ ಭಾರತ ಕಂಡ ಶ್ರೇಷ್ಠ ಎಡಗೈ ಬ್ಯಾಟರ್ : ಆಕಾಶ್ ಚೋಪ್ರಾ

ಭಾರತದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಸುರೇಶ್ ರೈನಾರನ್ನು ಹಾಡಿ ಹೊಗಳಿದ್ದಾರೆ. ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಎಡಗೈ ಆಟಗಾರರಲ್ಲಿ ಸುರೇಶ್ ರೈನಾ ಒಬ್ಬರು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಸೆಪ್ಟೆಂಬರ್ 6ರಂದು ಮಂಗಳವಾರ ಸುರೇಶ್ ರೈನಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸುರೇಶ್ ರೈನಾ ವಿದೇಶಿ ಲೀಗ್‌ಗಳಲ್ಲಿ ಆಡಬಹುದು ಎಂದು ಹೇಳಲಾಗುತ್ತಿದ್ದರು, ರೈನಾ ಇನ್ನೂ ಯಾವುದನ್ನೂ ಖಚಿತಪಡಿಸಿಲ್ಲ.

 Ind vs Afg: ಕೊಹ್ಲಿ ಚೊಚ್ಚಲ ಟಿ20 ಶತಕ, 212 ರನ್ ಕಲೆಹಾಕಿದ ಟೀಂ ಇಂಡಿಯಾ Ind vs Afg: ಕೊಹ್ಲಿ ಚೊಚ್ಚಲ ಟಿ20 ಶತಕ, 212 ರನ್ ಕಲೆಹಾಕಿದ ಟೀಂ ಇಂಡಿಯಾ

ಸುರೈಶ್‌ ರೈನಾರನ್ನು ಶ್ಲಾಘಿಸಿರುವ ಆಕಾಶ್ ಚೋಪ್ರಾ, ಭಾರತವನ್ನು ಪ್ರತಿನಿಧಿಸಿದ ಅತ್ಯುತ್ತಮ ಎಡಗೈ ಆಟಗಾರ ಎಂದು ಹಾಡಿ ಹೊಗಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸುರೇಶ್ ರೈನಾ ಕುರಿತಂತೆ ಮಾತನಾಡಿರುವ ಆಕಾಶ್ ಚೋಪ್ರಾ, "ಅವರು ಭಾರತಕ್ಕಾಗಿ ಆಟವಾಡಿದ ಅತ್ಯುತ್ತಮ ಎಡಗೈ ಆಟಗಾರರಲ್ಲಿ ಸುರೇಶ್ ರೈನಾ ಒಬ್ಬರು. ಭಾರತ ಪರ ಆಡಿದ ಕೆಲವು ಉತ್ತಮ ಎಡಗೈ ಬ್ಯಾಟರ್‌ಗಳು ಇದ್ದಾರೆ. ಅವರಿಗಿಂತ ಮೊದಲು ಸೌರವ್ ಗಂಗೂಲಿ ಮತ್ತು ವಿನೋದ್ ಕಾಂಬ್ಳಿ ಇದ್ದರು. ಶಿಖರ್ ಧವನ್ ಕೂಡ ಅತ್ಯುತ್ತಮವಾಗಿದ್ದಾರೆ ಮತ್ತು ಈಗ ರಿಷಬ್ ಪಂತ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

 2021ರಲ್ಲಿ ಕೊನೆಯ ಪಂದ್ಯವನ್ನಾಡಿದ್ದ ರೈನಾ

2021ರಲ್ಲಿ ಕೊನೆಯ ಪಂದ್ಯವನ್ನಾಡಿದ್ದ ರೈನಾ

35ನೇ ವಯಸ್ಸಿನ ಸುರೇಶ್ ರೈನಾ 2021ರ ಐಪಿಎಲ್‌ನಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು. 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ರೈನಾ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ್ದ ಪಂದ್ಯ ಕೊನೆಯದಾಗಿತ್ತು. ಆಗಸ್ಟ್ 2020 ರಲ್ಲಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವೇ ಆಗಿದ್ದ ರೈನಾ, ಐಪಿಎಲ್‌ನಲ್ಲಿ 205 ಪಂದ್ಯಗಳನ್ನಾಡಿದ್ದಾರೆ. 32.52 ಸರಾಸರಿ ಮತ್ತು 136.76 ಸ್ಟ್ರೈಕ್ ರೇಟ್‌ನಲ್ಲಿ 5528 ರನ್‌ ಗಳಿಸಿದ್ದಾರೆ. 39 ಅರ್ಧಶತಕ ಮತ್ತು ಒಂದು ಶತಕ ಗಳಿಸಿದ್ದಾರೆ.

ಆಸಿಫ್ ಅಲಿ ವರ್ತನೆ ಮೂರ್ಖತನ, ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳಿ ಎಂದ ಅಫ್ಘನ್ ಕ್ರಿಕೆಟರ್

 ರೈನಾ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ

ರೈನಾ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ

ಭಾರತೀಯ ಕ್ರಿಕೆಟ್‌ಗೆ ಎಡಗೈ ಆಟಗಾರನ ಪ್ರಾಮುಖ್ಯತೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಚೋಪ್ರಾ, ಸುರೇಶ್ ರೈನಾ ತಂಡಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿರುವ ಆಟಗಾರ ಎಂದು ಬಣ್ಣಿಸಿದ್ದಾರೆ.

"ಬಹಳಷ್ಟು ಬಾರಿ, ಸುರೇಶ್‌ ರೈನಾ ಸಣ್ಣ ಆದರೆ ಪರಿಣಾಮಕಾರಿ ಇನ್ನಿಂಗ್ಸ್ ಆಡಿದರು ಅದು ಪಂದ್ಯದ ಫಲಿತಾಂಶವನ್ನು ಬದಲಾಯಿಸಿದೆ. ಆಸ್ಟ್ರೇಲಿಯ ವಿರುದ್ಧ 2011ರ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ ಪಂದ್ಯ ನನಗೆ ನೆನಪಿದೆ. ಎಲ್ಲರ ಗಮನ ಯುವರಾಜ್ ಸಿಂಗ್ ಮೇಲಿತ್ತು, ಆದರೆ ರೈನಾ ಕೆಲವು ಪ್ರಮುಖ ಬೌಂಡರಿಗಳನ್ನು ಹೊಡೆದರು. ರೈನಾ ಕೆಲವು ಓವರ್‌ಗಳನ್ನೂ ಬೌಲ್ ಮಾಡಬಲ್ಲರು." ಎಂದು ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ 2011ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಐದು ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. 261 ರನ್‌ಗಳ ಬೆನ್ನತ್ತಿದ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್ ಅರ್ಧಶತಕಗಳ ಕೊಡುಗೆ ನೀಡಿದರೆ, ರೈನಾ 28 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿದರು.

ಮಿಸ್ಟರ್ ಐಪಿಎಲ್ ಸುರೇಶ್ ರೈನಾ

ಮಿಸ್ಟರ್ ಐಪಿಎಲ್ ಸುರೇಶ್ ರೈನಾ

ಐಪಿಎಲ್‌ನ ಎರಡು ಸೀಸನ್ ಹೊರತು ಪಡಿಸಿ 10 ಸೀಸನ್‌ಗಳಲ್ಲಿ ಸತತವಾಗಿ ಪ್ರತಿ ವರ್ಷ 400ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬೌಲಿಂಗ್ ಕೂಡ ಮಾಡುತ್ತಿದ್ದ ಅವರು, ಫೀಲ್ಡಿಂಗ್‌ನಲ್ಲಿ ಮಿಂಚುತ್ತಿದ್ದರು. ಸುರೇಶ್‌ ರೈನಾರನ್ನು ಮಿಸ್ಟರ್ ಐಪಿಎಲ್‌ ಎಂದು ಕರೆಯಲಾಗುತ್ತದೆ. 2015 ರ ಋತುವಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷಗಳ ಕಾಲ ಬ್ಯಾನ್‌ ಎದುರಿಸಿದಾಗ, ರೈನಾ ತಾತ್ಕಾಲಿಕ ಫ್ರಾಂಚೈಸಿ ಗುಜರಾತ್ ಲಯನ್ಸ್‌ಗೆ ನಾಯಕರಾಗಿದ್ದರು.

ನಂತರ ಕೂಡ ಸಿಎಸ್‌ಕೆ ತಂಡದ ಆಟಗಾರನಾಗಿ ಮುಂದುವರೆದ ಅವರು, 2021ರವರೆಗೆ ಚೆನ್ನೈ ತಂಡದ ಅವಿಭಾಜ್ಯ ಅಂಗವಾಗಿದ್ದರು. ಸಿಎಸ್‌ಕೆ ಅಭಿಮಾನಿಗಳು ರೈನಾರನ್ನು 'ಚಿನ್ನ ತಲಾ' ಎಂದು ಅಭಿಮಾನದಿಂದ ಕರೆಯುತ್ತಿದ್ದರು. 2022ರಲ್ಲಿ ಸಿಎಸ್‌ಕೆ ತಂಡ ರೈನಾರನ್ನು ಖರೀದಿಸದೆ ಇರುವುದು ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿತ್ತು.

Virat Kohli ಆಟ ನೋಡಿದ ಕೋಚ್ ಹಾಗು ಕ್ಯಾಪ್ಟನ್ ಮಾಡಿದ್ದೇನು | *Cricket | OneIndia Kannada
 ವಿದೇಶಿ ಲೀಗ್‌ಗಳಲ್ಲಿ ಆಡಲು ಇದೆ ಅವಕಾಶ

ವಿದೇಶಿ ಲೀಗ್‌ಗಳಲ್ಲಿ ಆಡಲು ಇದೆ ಅವಕಾಶ

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಸುರೇಶ್ ರೈನಾ ನಿವೃತ್ತಿ ಘೋಷಿಸಿರುವುದರಿಂದ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ಸಿಕ್ಕಂತಾಗಿದೆ. ಸ್ವದೇಶಿ ಲೀಗ್‌ಗಳಲ್ಲಿ ಆಡುವ ಆಟಗಾರರಿಗೆ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡುವುದಿಲ್ಲ. ರೈನಾಗೆ ಈಗ ಅವಕಾಶವಿದ್ದು, ಯಾವ ವಿದೇಶಿ ಲೀಗ್‌ನಲ್ಲಿ ಭಾಗವಹಿಸುತ್ತಾರೆ ಎಂದು ನೋಡಬೇಕಿದೆ.

ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಸುರೇಶ್‌ ರೈನಾ ಆಡಲಿದ್ದಾರೆ ಎಂದು ಹೇಳಲಾಗುತ್ತದ್ದು, ಸುರೇಶ್ ರೈನಾ ಈ ಬಗ್ಗೆ ಇನ್ನೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

Story first published: Thursday, September 8, 2022, 23:50 [IST]
Other articles published on Sep 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X