ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ 5,000 ರನ್ ಬಾರಿಸಿದ ಮೊದಲ ಬ್ಯಾಟ್ಸ್ಮನ್‌ ಸುರೇಶ್ ರೈನಾ!

ಯಾರು ಮಾಡದ ಸಾಧನೆ ಮಾಡಿದ ಸುರೇಶ್ ರೈನಾ..?
Suresh Raina Outpaces Virat Kohli To Become First To Score 5,000 IPL Runs

ಚೆನ್ನೈ, ಮಾರ್ಚ್ 23: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ 5,000 ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್‌ ಆಗಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡದ ಸುರೇಶ್ ರೈನಾ ಮಿಂಚಿದರು. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2019ರ ಆರಂಭಿಕ ಪಂದ್ಯದಲ್ಲೇ ರೈನಾ ಈ ಮೈಲಿಗಲ್ಲು ಸ್ಥಾಪಿಸಿದರು.

ಐಪಿಎಲ್ 2019: ಆರಂಭಿಕ ಪಂದ್ಯದಲ್ಲೇ ಚೆನ್ನೈಗೆ ತಲೆಬಾಗಿದ ಬೆಂಗಳೂರುಐಪಿಎಲ್ 2019: ಆರಂಭಿಕ ಪಂದ್ಯದಲ್ಲೇ ಚೆನ್ನೈಗೆ ತಲೆಬಾಗಿದ ಬೆಂಗಳೂರು

ಶನಿವಾರ (ಮಾರ್ಚ್ 23) ಚೆನ್ನೈನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಕಾದಾಡಿದ್ದವು. ಇದರಲ್ಲಿ ಚೆನ್ನೈ 7 ವಿಕೆಟ್ ಜಯ ಸಾಧಿಸಿತ್ತು. ಪಂದ್ಯದಲ್ಲಿ 19 ರನ್ ಗಳಿಸಿದ ರೈನಾ ಐಪಿಎಲ್‌ನಲ್ಲಿ ಅತ್ಯಧಿಕ ರನ್ ಜೊತೆಗೆ 5 ಸಾವಿರ ರನ್‌ಗಾಗಿ ಗಮನ ಸೆಳೆದರು.

ಉದ್ಘಾಟನಾ ಪಂದ್ಯ ಸೇರಿ ಒಟ್ಟು 173 ಇನ್ನಿಂಗ್ಸ್‌ಗಳಲ್ಲಿ ರೈನಾ 5,004 ರನ್ ಸಾಧನೆ ಮಾಡಿದ್ದಾರೆ. ರೈನಾಗಿಂತಲೂ ಮೊದಲು ಈ ಸಾಧನೆ ಮೆರೆಯುವ ಅವಕಾಶ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗಿತ್ತು. ಆದರೆ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿಯಿಂದ ಕೊಹ್ಲಿ 6 ರನ್ನಿಗೆ ವಿಕೆಟ್ ಒಪ್ಪಿಸಿ ಅವಕಾಶ ಕಳೆದುಕೊಂಡರು.

ಐಪಿಎಲ್ ಆರಂಭೋತ್ಸವದ ಹಣವನ್ನು ಭಾರತೀಯ ಸೇನೆಗೆ ನೀಡಿದ ಬಿಸಿಸಿಐಐಪಿಎಲ್ ಆರಂಭೋತ್ಸವದ ಹಣವನ್ನು ಭಾರತೀಯ ಸೇನೆಗೆ ನೀಡಿದ ಬಿಸಿಸಿಐ

ಕೊಹ್ಲಿ ಒಟ್ಟು 155 ಐಪಿಎಲ್ ಇನ್ನಿಂಗ್ಸ್‌ ಗಳಲ್ಲಿ 4,948 ರನ್‌ನೊಂದಿಗೆ ಅತ್ಯಧಿಕ ರನ್ ಸಾಧಕರಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಚೆನ್ನೈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ)ಗೆ 71 ರನ್ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಸಿಎಸ್‌ಕೆ, 17.4 ಓವರ್‌ಗೆ 3 ವಿಕೆಟ್ ಕಳೆದು 71 ರನ್ ಪೇರಿಸಿ ಗೆಲುವನ್ನಾಚರಿಸಿತು.

Story first published: Saturday, March 23, 2019, 23:54 [IST]
Other articles published on Mar 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X