ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಸಿಎಸ್‌ಕೆ ಶಿಬಿರದಲ್ಲಿ ನನ್ನನ್ನು ನೀವು ಮತ್ತೆ ಕಾಣುವ ಸಾಧ್ಯತೆಯಿದೆ': ಸುರೇಶ್ ರೈನಾ ಅಚ್ಚರಿಯ ಹೇಳಿಕೆ

Suresh Raina Says You Might See Me In Csk Camp Again For Ipl 2020

ಕೌಟುಂಬಿಕ ಕಾರಣಗಳನ್ನು ನೀಡಿ ಹಠಾತ್ ಆಗಿ ತವರಿಗೆ ಮರಳಿದ ಸುರೇಶ್ ರೈನಾ ಸೆಪ್ಟೆಂಬರ್ 1 ರಂದು ಮೊದಲ ಬಾರಿಗೆ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿ ಕುಟುಂಬದಲ್ಲಾದ ದುರ್ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ಸುರೇಶ್ ರೈನಾ ಐಪಿಎಲ್ ವಿಚಾರವಾಗಿ ಹಾಗೂ ಕುಟುಂಬದ ಬಗ್ಗೆ ಕ್ರಿಕ್ ಬಜ್ ಜೊತೆಗೆ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಅದರಲ್ಲೂ ಸುರೇಶ್ ರೈನಾ ಹಠಾತ್ ನಿರ್ಗಮನ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್‌ಗೆ ಆಕ್ರೋಶವನ್ನು ತರಿಸಿದ್ದು ಸುದ್ದಿಸಂಸ್ಥೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಶ್ರೀನಿವಾಸನ್ ರೈನಾ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಇದರಿಂದಾಗಿ ಸಿಎಸ್‌ಕೆ ಪಾಳಯದಲ್ಲಿ ಏನು ನಡೆಯುತ್ತಿದೆ ಎಂಬ ಗೊಂದಲಕ್ಕೆ ಕಾರಣವಾಗಿತ್ತು. ಸುರೇಶ್ ರೈನಾ ಹಠಾತ್ ನಿರ್ಗಮನದ ಬಗ್ಗೆ ಸಾಕಷ್ಟು ಚರ್ಚೆಗೂ ನಾಂದಿಯಾಗಿತ್ತು.

ಸಿಎಸ್‌ಕೆಯಲ್ಲಿ ರೈನಾರ 3ನೇ ಕ್ರಮಾಂಕಕ್ಕೆ ಸೂಕ್ತರಾಗಬಲ್ಲ ಬ್ಯಾಟ್ಸ್‌ಮನ್‌ಗಳಿವರುಸಿಎಸ್‌ಕೆಯಲ್ಲಿ ರೈನಾರ 3ನೇ ಕ್ರಮಾಂಕಕ್ಕೆ ಸೂಕ್ತರಾಗಬಲ್ಲ ಬ್ಯಾಟ್ಸ್‌ಮನ್‌ಗಳಿವರು

ಆದರೆ ಈ ಎಲ್ಲಾ ವಿಚಾರವಾಗಿ ಸುರೇಶ್ ರೈನಾ ವಿವರವಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕ್ರಿಕ್‌ ಬಜ್‌ಗೆ ನೀಡಿದ ಸಂದರ್ಶನದ ಕನ್ನಡ ಅನುವಾದ ಮುಂದೆ ಓದಿ

ನನ್ನ ಕುಟುಂಬಕ್ಕಾಗಿ ನಾನು ಹಿಂದಿರುಗಬೇಕಾಗಿತ್ತು

ನನ್ನ ಕುಟುಂಬಕ್ಕಾಗಿ ನಾನು ಹಿಂದಿರುಗಬೇಕಾಗಿತ್ತು

ಪ್ರಶ್ನೆ:ತವರಿಗೆ ಮರಳಬೇಕೆಂದು ನಿಮಗೆ ಪ್ರೇರೇಪಿಸಿದ್ದು ಏನು? ನಿಜವಾಗಿಯೂ ಏನಾಯಿತು?

ಸುರೇಶ್ ರೈನಾ: ಅದು ನನ್ನ ವೈಯಕ್ತಿಕ ನಿರ್ಧಾರವಾಗಿತ್ತು. ನನ್ನ ಕುಟುಂಬಕ್ಕಾಗಿ ನಾನು ಹಿಂದಿರುಗಬೇಕಾಗಿತ್ತು. ಈ ಸಂದರ್ಭದಲ್ಲಿ ಕುಟುಂಬದತ್ತ ಗಮನಹರಿಸಲೇಬೇಕಾದ ಸ್ಥಿತಿಯತ್ತು. ಸಿಎಸ್‌ಕೆ ಕೂಡ ನನ್ನ ಕುಟುಂಬವೇ ಆಗಿದೆ. ಮಾಹಿ ಭಾಯ್ ನನಗೆ ಬಹಳ ಮುಖ್ಯ. ಹೀಗಾಗಿ ಈ ನಿರ್ಧಾರ ನನಗೆ ತುಂಬಾ ಕಠಿಣವಾಗಿತ್ತು. ಸಿಎಸ್‌ಕೆ ಹಾಗೂ ನನ್ನ ನಡುವೆ ಯಾವುದೇ ಸಮಸ್ಯೆಯಿಲ್ಲ. ಬಲವಾದ ಯಾವುದೇ ಕಾರಣಗಳು ಇಲ್ಲದೆ 12.5 ಕೋಟಿಯನ್ನು ಬಿಟ್ಟು ಯಾರೂ ತೆರಳಲಾರರು. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರಬಹುದು ಆದರೆ ನನ್ನ ವಯಸ್ಸಿನ್ನೂ ಚಿಕ್ಕದು. ಮುಂದಿನ ನಾಲ್ಕೈದು ವರ್ಷಗಳ ಕಾಲ ಸಿಎಸ್‌ಕೆ ಪರವಾಗಿ ಆಡಲು ಎದುರು ನೀಡುತ್ತಿದ್ದೇನೆ.

ಅವರು ನನಗೆ ತಂದೆಯ ಸಮಾನರು

ಅವರು ನನಗೆ ತಂದೆಯ ಸಮಾನರು

ಪ್ರಶ್ನೆ: ತಂಡದ ಮಾಲೀಕ ಎನ್ ಶ್ರೀನಿವಾಸನ್ ಅವರಿಂದ ಬಂದ ಕಟು ಮಾತುಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ?

ಸುರೇಶ್ ರೈನಾ:ಅವರು ನನಗೆ ತಂದೆಯ ಸಮಾನರು. ನನ್ನ ಜೊತೆಗೆ ಅವರು ಯಾವಾಗಲೂ ನಿಂತಿದ್ದಾರೆ ಹಾಗಾಗಿ ನನ್ನ ಹೃದಯಕ್ಕೆ ಹತ್ತಿರದ ವ್ಯಕ್ತಿ ಅವರು. ನನ್ನನ್ನು ಅವರು ಕಿರಿಯ ಮಗನಂತೆ ನೋಡಿಕೊಳ್ಳುತ್ತಾರೆ. ಅವರಾಡಿದ ಬಹುತೇಕ ಮಾತುಗಳನ್ನು ಬೇರೆಯದೇ ರಿತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಓರ್ವ ತಂದೆ ತನ್ನ ಮಗನಿಗೆ ಬಯ್ಯಬಹುದು. ಆದರೆ ಅವರು ಆ ರೀತಿ ಪ್ರತಿಕ್ರಿಯಿಸಿದಾಗ ನಾನು ಮರಳಿದ ಬಗ್ಗೆ ನಿಜವಾದ ಕಾರಣ ಅವರಿಗೆ ತಿಳಿದಿರಲಿಲ್ಲ. ಈಗ ಅವರಿಗೆ ಮಾಹಿತಿಯನ್ನು ನೀಡಲಾಗಿದೆ. ಅವರು ನನಗೆ ಸಂದೇಶವನ್ನು ಕೂಡ ಕಳುಹಿಸಿದ್ದಾರೆ. ಈ ಬಗ್ಗೆ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದು ಸಿಎಸ್‌ಕೆ ಮತ್ತು ನಾನು ಈ ಬಗ್ಗೆ ಜೊತೆಯಾಗಿ ಮುಂದುವರಿಯಲು ನಿರ್ಧರಿಸಿದ್ದೇವೆ.

ಮತ್ತೆ ಶಿಬಿರದಲ್ಲಿ ಕಾಣಿಸಿಕೊಳ್ಳಬಹುದು

ಮತ್ತೆ ಶಿಬಿರದಲ್ಲಿ ಕಾಣಿಸಿಕೊಳ್ಳಬಹುದು

ಪ್ರಶ್ನೆ:ಸಿಎಸ್‌ಗೆ ಜೊತೆ ನಿಮ್ಮ ಭವಿಷ್ಯವನ್ನು ನೀವು ಹೇಗೆ ನೋಡುತ್ತೀರಿ?

ಸುರೇಶ್ ರೈನಾ:ನಾನು ತಂಡದ ಜೊತೆಗೆ ಪ್ರತ್ಯೇಕವಾಗಿದ್ದಾಗಲೂ ನಾನು ತರಬೇತಿಯಲ್ಲಿಯೇ ಇದ್ದೆ. ನಿಮಗೆ ಅರಿವಿಲ್ಲ, ನಾನು ಅಲ್ಲಿ ಮತ್ತೆ ಶಿಬಿರದಲ್ಲಿ ಕಾಣಿಸಿಕೊಳ್ಳಬಹುದು.

ಶ್ಲಾಘನೀಯ ಕೆಲಸ ಮಾಡುತ್ತಿದ ಬಿಸಿಸಿಐ

ಶ್ಲಾಘನೀಯ ಕೆಲಸ ಮಾಡುತ್ತಿದ ಬಿಸಿಸಿಐ

ಪ್ರಶ್ನೆ: ಹಿಂದೆಂದೂ ಅನುಭವಿಸಿರದ ಬಯೋ ಬಬಲ್ ಹೇಗೆ ಸವಾಲಾಗಿತ್ತು?

ಸುರೇಶ್ ರೈನಾ: ಎಲ್ಲರನ್ನೂ ಸುರಕ್ಷಿತವಾಗಿಸಿಕೊಂಡು ನಿರ್ವಹಿಸಬೇಕಾಗಿದ್ದು ಬಿಸಿಸಿಐ ಬಹಳ ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ. ಇದನ್ನು ಹಿಂದೆಂದೂ ಮಾಡಿಲ್ಲ. ಎಲ್ಲರಿಗೂ ಇದು ಹೊಸ ಅನುಭವ. ಇದು ಹೆಚ್ಚು ಸುರಕ್ಷಿತ ವಾತಾವರಣ. ಬೇಕೆಂದರಲ್ಲಿ ಪ್ರವೇಶಮಾಡಲು ಅವಕಾಶವಿಲ್ಲ. ಯಾರ ಸಂಪರ್ಕ ಸಂವಹನವೂ ಇಲ್ಲದೆ ನಾವೆಲ್ಲರೂ ನಮ್ಮ ಕೋಣೆಗಳಲ್ಲಿ ಇದ್ದೆವು. ಎರಡು ದಿನಕ್ಕೊಮ್ಮೆ ಕೊರಿನಾ ಪರೀಕ್ಷೆ ನಡೆಯುತ್ತಿತ್ತು.

ಕುಟುಂಬದ ಬಗ್ಗೆ ಕಾಳಜಿಯಿತ್ತು

ಕುಟುಂಬದ ಬಗ್ಗೆ ಕಾಳಜಿಯಿತ್ತು

ಪ್ರಶ್ನೆ: ಅಲ್ಲಿನ ಜೈವಿಕ ಸುರಕ್ಷತಾ ಕ್ರಮಗಳ ಬಗ್ಗೆ ನಿಮಗೆ ಅಸಮಾಧಾನವುಂಟಾಗಿತ್ತು ಎಂಬ ವರದಿಗಳು ಬಂದಿದೆ

ಸುರೇಶ್ ರೈನಾ: ನಾನು ಪುಟ್ಟ ಕುಟುಂಬವನ್ನು ಹೊಂದಿದ್ದೇನೆ. ನನಗೆ ಏನಾದರು ಸಂಭವಿಸಿದಲ್ಲಿ ಅವರಿಗೆ ಏನಾಗಬಹುದು ಎಂಬ ಬಗ್ಗೆ ನನಗೆ ಕಾಳಜಿಯಿತ್ತು. ನನ್ನ ಕುಟುಂಬ ನನಗೆ ಬಹಳ ಮುಖ್ಯ. ಇಂತಾ ಸಂದರ್ಭದಲ್ಲಿ ನಾನು ಅವರ ಬಗ್ಗೆ ಖಂಡಿತಾ ಕಾಳಜಿ ವಹಿಸುತ್ತೇನೆ. ಕ್ವಾರಂಟೈನ್‌ಗೆ ಒಳಗಾದ ನಂತರ ಭಾರತಕ್ಕೆ ಮರಳಿದ ಬಳಿಕವೂ ಕಳೆದ 20 ದಿನಗಳಿಂದ ನಾನು ನನ್ನ ಮಕ್ಕಳನ್ನು ನೋಡಿಲ್ಲ.

ಕುಟುಂಬ ಸಾಕಷ್ಟು ಯಾತನೆಯಲ್ಲಿದೆ

ಕುಟುಂಬ ಸಾಕಷ್ಟು ಯಾತನೆಯಲ್ಲಿದೆ

ಪ್ರಶ್ನೆ: ಮಾವನ ಕುಟುಂಬದಲ್ಲಾದ ದುರ್ಘಟನೆ ಇದಕ್ಕೆಲ್ಲಾ ಎಷ್ಟು ಕಾರಣವಾಯಿತು?

ಸುರೇಶ್ ರೈನಾ: ಪಠಾಣ್‌ಕೋಟ್‌ನಲ್ಲಿ ನಡೆದ ಘಟನೆ ತುಂಬಾ ಭಯಾನಕವಾಗಿದ್ದು, ನಮ್ಮ ಕುಟುಂಬದ ಎಲ್ಲರಿಗೂ ನಿಜಕ್ಕೂ ಆತಂಕವನ್ನುಂಟು ಮಾಡಿದೆ. ಇಲ್ಲಿಗೆ ವಾಪಾಸ್ಸಾಗಿ ಎಲ್ಲರನ್ನೂ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಆದರೆ ನಾನು ಇಲ್ಲಿಗೆ ವಾಪಾಸಾದಾಗಿನಿಂದ ಕ್ವಾರಂಟೈನ್‌ನಲ್ಲಿದ್ದೇನೆ. ಆದರಿಂದ ನಾನು ಇನ್ನಷ್ಟೇ ನನ್ನ ಹೆತ್ತವರನ್ನು ಹಾಗೂ ನನ್ನ ಅತ್ತೆಯನ್ನು ಬೇಟಿಯಾಗಬೇಕಿದೆ. ಅವರು ಸಾಕಷ್ಟು ಯಾತನೆಯಲ್ಲಿದ್ದಾರೆ.

ಯಾರಿಗೆ ಬೇಕಾದರೂ ಕೊರೊನಾ ವೈರಸ್ ಬರಬಹುದು

ಯಾರಿಗೆ ಬೇಕಾದರೂ ಕೊರೊನಾ ವೈರಸ್ ಬರಬಹುದು

ಪ್ರಶ್ನೆ: ಸಿಎಸ್‌ಕೆ ಶಿಬಿರದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ನಿಮ್ಮ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತಾ?

ಸುರೇಶ್ ರೈನಾ: ಸಹಜವಾಗಿಯೇ ಅದು ಆಘಾತಕಾರಿ. ಅಷ್ಟೊಂದು ಪ್ರಮಾಣದಲ್ಲಿ ಮುನ್ನೆಚ್ಚರಿಕೆಯನ್ನು ವಹಿಸಿಕೊಂಡ ನಂತರವೂ ವೈರಸ್‌ಗೆ ತುತ್ತಾಗಿದ್ದಾರೆಂದರೆ ಅದು ಎಷ್ಟು ಕೆಟ್ಟದಾಗಿರಬಹುದು ಮತ್ತು ಯಾರಿಗೆ ಬೇಕಾದರೂ ಬರಬಹುದು. ಎಲ್ಲರೂ ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ

Story first published: Thursday, September 3, 2020, 16:28 [IST]
Other articles published on Sep 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X