ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಆಲ್ ರೌಂಡರ್ ಸುರೇಶ್ ರೈನಾ

Suresh Raina set to return to competitive cricket, says report

ನವದೆಹಲಿ: ಕಳೆದ ಆಗಸ್ಟ್ 15ರಂದು ಭಾರತದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ರೈನಾ ಕೂಡ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದರು.

ಇಂಗ್ಲೆಂಡ್ ವಿರುದ್ಧ ಮೊಟೆರಾದಲ್ಲಿ ಡೇ-ನೈಟ್ ಟೆಸ್ಟ್: ಬೃಹತ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯವ ಬಗ್ಗೆ ಜಯ್ ಶಾ ಮಾಹಿತಿಇಂಗ್ಲೆಂಡ್ ವಿರುದ್ಧ ಮೊಟೆರಾದಲ್ಲಿ ಡೇ-ನೈಟ್ ಟೆಸ್ಟ್: ಬೃಹತ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯವ ಬಗ್ಗೆ ಜಯ್ ಶಾ ಮಾಹಿತಿ

ಅಂತಾರಾಷ್ಟ್ರೀಯ ನಿವೃತ್ತಿಯ ಬಳಿಕ ಆಲ್ ರೌಂಡರ್ ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಮೈದಾನಕ್ಕಿಳಿಯುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ವೈಯಕ್ತಿಕ ಕಾರಣ ನೀಡಿದ್ದ ರೈನಾ 2020ರ ಐಪಿಎಲ್‌ನಲ್ಲಿ ಆಡಿರಲಿಲ್ಲ. ಇತ್ತ ಸಿಎಸ್‌ಕೆ ಕೂ ಅತೀ ಕೆಟ್ಟ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದೊಂದಿಗೆ ಟೂರ್ನಿ ಮುಗಿಸಿತ್ತು.

ಆದರೆ ಇತ್ತೀಚಿನ ವರದಿಯೊಂದು ರೈನಾ ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಎನ್ನುತ್ತಿದೆ. ಸ್ಪರ್ಧಾತ್ಮಕ ಕ್ರಿಕೆಟ್ ಅಥವಾ ದೇಸಿ ಕ್ರಿಕೆಟ್‌ನಲ್ಲಿ ರೈನಾ ಆಡಲಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ರೈನಾ ಅವರು ಉತ್ತರಪ್ರದೇಶದ ಪರ ಆಡಲಿದ್ದಾರೆ ಎಂದು ವರದಿಯೊಂದು ಹೇಳಿದೆ.

ಬಾಕ್ಸಿಂಗ್‌ ಡೇ ಟೆಸ್ಟ್ ವೇಳೆ 30,000 ಅಭಿಮಾನಿಗಳಿಗೆ ವೀಕ್ಷಿಸಲು ಅನುಮತಿಬಾಕ್ಸಿಂಗ್‌ ಡೇ ಟೆಸ್ಟ್ ವೇಳೆ 30,000 ಅಭಿಮಾನಿಗಳಿಗೆ ವೀಕ್ಷಿಸಲು ಅನುಮತಿ

ದೈನಿಕ್ ಜಾಗ್ರಣ್ ವರದಿಯಲ್ಲಿ ರೈನಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಲಿದ್ದಾರೆ ಎಂದಿದೆ. ಶನಿವಾರ ರೈನಾ ಅವರು ಖಾನ್‌ಪುರ್‌ಗೆ ತೆರಳಿ ಉತ್ತರ ಪ್ರದೇಶ ಕ್ರಿಕೆಟ್‌ನ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 13 ಮತ್ತು 15ರಂದು ಅಭ್ಯಾಸ ಪಂದ್ಯ ಆಡಲಿದ್ದಾರೆ ಎಂದೂ ದೈನಿಕ್ ಜಾಗ್ರಣ್‌ನಲ್ಲಿ ತಿಳಿಸಲಾಗಿದೆ.

Story first published: Friday, December 11, 2020, 9:54 [IST]
Other articles published on Dec 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X