ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ದಾಖಲೆ: ಕೊಹ್ಲಿ, ಗೌತಮ್ ಗಂಭೀರ್ ಹಿಂದಿಕ್ಕಿದ ಸುರೇಶ್ ರೈನಾ

Suresh Raina surpasses Virat Kohli, Gautam Gambhir in elite IPL list

ಚೆನ್ನೈ, ಮೇ 2: ಐಪಿಎಲ್‌ನಲ್ಲಿ ಅತೀ ಹೆಚ್ಚಿನಸಾರಿ ಅರ್ಧ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರನ್ನು ಸುರೇಶ್ ರೈನಾ ಹಿಂದಿಕ್ಕಿದ್ದಾರೆ. ಬುಧವಾರ (ಮೇ 1) ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ರೈನಾ ಈ ಸಾಧನೆ ಮೆರೆದರು.

ಐಪಿಎಲ್: ಡೆಲ್ಲಿ ಕಾಡಿದ ಧೋನಿ-ತಾಹಿರ್-ಜಡೇಜಾ, ಚೆನ್ನೈಗೆ ಸುಲಭ ಜಯಐಪಿಎಲ್: ಡೆಲ್ಲಿ ಕಾಡಿದ ಧೋನಿ-ತಾಹಿರ್-ಜಡೇಜಾ, ಚೆನ್ನೈಗೆ ಸುಲಭ ಜಯ

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 50ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕಣಕ್ಕಿಳಿದಿದ್ದ ಚೆನ್ನೈ ಪರ ರೈನಾ 37 ಎಸೆತಗಳಿಗೆ 59 ರನ್ ಬಾರಿಸಿದರು. ಈ ಪಂದ್ಯದಲ್ಲಿ ಚೆನ್ನೈ ಭರ್ಜರಿ 80 ರನ್‌ಗಳ ಗೆಲುವು ದಾಖಲಿಸಿತು.

ಪಂದ್ಯದಲ್ಲಿ ಐಪಿಎಲ್ 37ನೇ ಅರ್ಧ ಶತಕ ಬಾರಿಸಿದ ರೈನಾ ಅತೀ ಹೆಚ್ಚಿನ ಅರ್ಧ ಶತಕಕ್ಕಾಗಿ ಶಿಖರ್ ಧವನ್ ಜೊತೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಧವನ್-ರೈನಾ ಇಬ್ಬರೂ 37 ಐಪಿಎಲ್ ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದೇ ಸಾಧನೆಗಾಗಿ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ.

ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ತಲಾ 36 ಅರ್ಧ ಶತಕಗಳಿಂದ ಈ ಯಾದಿಯಲ್ಲಿ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಐಪಿಎಲ್ ವೃತ್ತಿ ಜೀವನದಲ್ಲಿ ಒಟ್ಟು 44 ಸಾರಿ ಅರ್ಧಶತಕ ಬಾರಿಸಿರುವ ಸನ್ ರೈಸರ್ಸ್ ಹೈದರಾಬಾದ್ ದಾಂಡಿಗ ಡೇವಿಡ್ ವಾರ್ನರ್ ನಂ.1 ಸ್ಥಾನ ಕಾಯ್ದಿರಿಸಿಕೊಂಡಿದ್ದಾರೆ.

Story first published: Thursday, May 2, 2019, 0:08 [IST]
Other articles published on May 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X