2006ರಲ್ಲಿ ಹಿಡಿದ ಅದ್ಭುತ ಕ್ಯಾಚ್ ಅನ್ನು ಮತ್ತೆ ಹಿಡಿದು ಮಿಂಚಿದ ಸುರೇಶ್‌ ರೈನಾ: ವೀಡಿಯೋ ವೈರಲ್‌

ಟೀಂ ಇಂಡಿಯಾ ಮಾಜಿ ಆಟಗಾರ, ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್‌ ರೈನಾ, ಫೀಲ್ಡಿಂಗ್ ವಿಚಾರಕ್ಕೆ ಬಂದ್ರೆ ವರ್ಲ್ಡ್‌ ಕ್ಲಾಸ್‌ ಅನ್ನೋದ್ರಲ್ಲಿ ಅನುಮಾನವಿಲ್ಲ. ಸ್ಫೋಟಕ ಬ್ಯಾಟಿಂಗ್ ಜೊತೆಗೆ ಆಧುನಿಕ ಕ್ರಿಕೆಟ್ ಕಡಂತಹ ಬೆಸ್ಟ್ ಫೀಲ್ಡರ್‌ಗಳಲ್ಲಿ ಒಬ್ಬಾತ.

ಭಾರತದ ಮಾಜಿ ಆಟಗಾರ ಸುರೇಶ್‌ ರೈನಾ ತನ್ನ ಅದ್ಭುತ ಫಿಲ್ಡಿಂಗ್ ಅನ್ನು ನೆನಪಿಸುವಂತೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರೋಡ್‌ ಸೇಫ್ಟಿ ವರ್ಲ್ಡ್ ಲೆಜೆಂಡ್ಸ್ ಸೀರಿಸ್‌ನಲ್ಲಿ ಇಂಡಿಯಾ ಲೆಜೆಂಡ್ಸ್‌ ಪರ ಆಡುತ್ತಿರುವ ರೈನಾ ಇತ್ತೀಚಿನ ಪಂದ್ಯವೊಂದರಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಹಳೆಯ ನೆನಪನ್ನ ಮರುಕಳಿಸಿದ್ದಾರೆ. ಆಸ್ಟ್ರೇಲಿಯಾ ಲೆಜೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಲ್ಲಿಯಲ್ಲಿದ್ದ ರೈನಾ ಬೆನ್ ಡಂಕ್‌ ಕ್ಯಾಚ್ ಹಿಡಿದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಸುರೇಶ್ ರೈನಾ

ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಸುರೇಶ್ ರೈನಾ

ಆಸ್ಟ್ರೇಲಿಯಾ ಲೆಜೆಂಡ್ಸ್ ವಿರುದ್ಧದ ಅಪೂರ್ಣ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಪಂದ್ಯದಲ್ಲಿ, ಸುರೇಶ್ ರೈನಾ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಆಸ್ಟ್ರೇಲಿಯಾ ಲೆಜೆಂಡ್ಸ್ ಬ್ಯಾಟರ್ ಬೆನ್ ಡಂಕ್ ಕ್ರ್ಯಾಕ್ ಶಾಟ್ ಹೊಡೆದರು. 46 ರನ್ ಮತ್ತು 176 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಡಂಕ್ ಅನ್ನು ಔಟ್ ಮಾಡಲು ಸುರೇಶ್ ರೈನಾ ತನ್ನ ಸಂಪೂರ್ಣ ಪ್ರಯತ್ನ ಮಾಡಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಮಿಂಚಿದರು ರೈನಾ ಅವರು ಕ್ರಿಕೆಟ್ ಆಟದ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರು ಎಂದು ಕರೆಯುತ್ತಾರೆ ಮತ್ತು ಅವರು ಈ ವಯಸ್ಸಿನಲ್ಲಿಯೂ ಅದನ್ನು ತನ್ನ ಫೀಲ್ಡಿಂಗ್ ಕೌಶಲ್ಯವನ್ನ ಮತ್ತೆ ತೋರಿಸುತ್ತಿದ್ದಾರೆ.

ಸೂರ್ಯಕುಮಾರ್ ಅಬ್ಬರ, ಗಬ್ಬರ್ ಹೆಸರಲ್ಲಿದ್ದ ಈ ದಾಖಲೆ ನೆಲಸಮ, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್

2006ರ ಕ್ಯಾಚ್ ಅನ್ನು ಮರುಕಳಿಸಿದ ಸುರೇಶ್ ರೈನಾ

2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದ ಟೀಂ ಇಂಡಿಯಾ ಆಸ್ಟ್ರೇಲಿಯಾವ ವಿರುದ್ಧ ಏಕದಿನ ಸರಣಿಯಲ್ಲಿ ಸುರೇಶ್ ರೈನಾ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಆಸಿಸ್ ಎಡಗೈ ಬ್ಯಾಟರ್ ಕ್ರ್ಯಾಕಿಂಗ್ ಶಾಟ್ ಅನ್ನು ಸುರೇಶ್ ರೈನಾ ಗಾಳಿಯಲ್ಲಿ ಜಿಗಿದು ಹಿಡಿದಿದ್ದರು.

ಇದೀಗ ಅಂತಹದ್ದೇ ಕ್ಯಾಚ್ ಅನ್ನು ಸುರೇಶ್ ರೈನಾ ರೋಡ್‌ ಸೇಫ್ಟಿ ವರ್ಲ್ಡ್ ಲೆಜೆಂಡ್ಸ್ ಸೀರಿಸ್‌ನಲ್ಲಿ ಹಿಡಿಯುವ ಮೂಲಕ 16 ವರ್ಷಗಳ ಹಿಂದಿನ ಕ್ಯಾಚ್ ಅನ್ನು ನೆನಪಿಸುವಂತೆ ಮಾಡಿದ್ದಾರೆ. ರೈನಾ ಹಿಡಿದ ಕ್ಯಾಚ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಎರಡು ಕ್ಯಾಚ್‌ಗಳ ವೀಡಿಯೋವನ್ನ ಶೇರ್ ಮಾಡಿದ್ದಾರೆ. ಜೊತೆಗೆ ಸಾರ್ವಕಾಲಿಕ ಶ್ರೇಷ್ಟ ಫೀಲ್ಡರ್ ಎಂದು ಹೊಗಳಿದ್ದಾರೆ.

ರೋಜರ್ ಫೆಡರರ್‌ಗೆ ವಿಡಿಯೋ ಮೂಲಕ ಶುಭಹಾರೈಸಿದ ವಿರಾಟ್ ಕೊಹ್ಲಿ

ಸುರೇಶ್ ರೈನಾ ಹೆಸರಲ್ಲಿದೆ ಅನೇಕ ದಾಖಲೆಗಳು

ಸುರೇಶ್ ರೈನಾ ಹೆಸರಲ್ಲಿದೆ ಅನೇಕ ದಾಖಲೆಗಳು

ಟಿ20 ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಅನೇಕ ದಾಖಲೆಗಳ ಒಡೆಯನಾಗಿದ್ದಾನೆ. ಅದ್ರಲ್ಲೂ ಐಪಿಎಲ್‌ನಲ್ಲಂತೂ ಈತ ಸಾರ್ವಕಾಲಿಕ ಬೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬಾತ. ನಾಲ್ಕು ಬಾರಿ ಐಪಿಎಲ್ ಟ್ರೋಫಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸದಸ್ಯರಾಗಿದ್ದರು.

ಅವರು ತಮ್ಮ ಟಿ20 ವೃತ್ತಿಜೀವನದಲ್ಲಿ 6000 ಮತ್ತು 7000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಐಪಿಎಲ್‌ನಲ್ಲಿ 5,000 ರನ್ ಪೂರೈಸಿದ ಮೊದಲ ಕ್ರಿಕೆಟಿಗ. 205
ಐಪಿಎಲ್ ಪಂದ್ಯಗಳಲ್ಲಿ 5528 ರನ್ ಕಲೆಹಾಕಿರುವ ರೈನಾ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಜೊತೆಗೆ 39 ಅರ್ಧಶತಕ ಹಾಗೂ ಒಂದು ಶತಕ ಈತನ ಹೆಸರಿನಲ್ಲಿದೆ.

ಐಪಿಎಲ್‌ನ ಮೊದಲ ಏಳು ಸೀಸನ್‌ಗಲ್ಲಿ ಸ್ಥಿರವಾಗಿ 400ಕ್ಕೂ ಹೆಚ್ಚು ರನ್ ಕಲೆಹಾಕಿರುವ ಸುರೇಶ್ ರೈನಾ, ಮಿಸ್ಟರ್ ಐಪಿಎಲ್ ಎಂಬ ಬಿರುದನ್ನ ಸಹ ಪಡೆದಿದ್ದಾರೆ. ಹೀಗಿರುವಾಗ 35 ವರ್ಷದ ರೈನಾ ಮುಂಬರುವ ಸೀಸನ್‌ನಲ್ಲಿ ಐಪಿಎಲ್‌ಗೆ ಕಂಬ್ಯಾಕ್ ಮಾಡಲಿದ್ದಾರಾ? ಅಥವಾ ವಿಶ್ವದ ಬೇರೆ ಟಿ20 ಲೀಗ್‌ನಲ್ಲಿ ಆಡಲಿದ್ದಾರ? ಎಂಬುದು ಸಹ ಇನ್ನೂ ಉತ್ತರ ಸಿಗದ ಪ್ರಶ್ನೆಯಾಗಿದೆ. ಆದ್ರೆ ಪ್ರಸ್ತುತ ಅವರ ಫೀಲ್ಡಿಂಗ್ ವೈಖರಿ ನೋಡಿದ್ರೆ, ಹಳೆಯ ಖದರ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂಬುದನ್ನ ಕಾಣಬಹುದು.

For Quick Alerts
ALLOW NOTIFICATIONS
For Daily Alerts
Story first published: Thursday, September 29, 2022, 16:53 [IST]
Other articles published on Sep 29, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X