ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಟುಂಬದಲ್ಲಾದ ಭಯಾನಕ ಘಟನೆ ಬಗ್ಗೆ ಮೌನ ಮುರಿದ ಸುರೇಶ್ ರೈನಾ: ದುರ್ಘಟನೆಗೆ 2ನೇ ಬಲಿ!

Suresh Raina Tweet About What Happened To His Family In Punjab

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಸುರೇಶ್ ರೈನಾ ಸಾಮಾಜಿಕ ಜಾಲತಾಣದಲ್ಲಿ ಕುಟುಂಬದಲ್ಲಿ ನಡೆದ ಭಯಾನಕ ಘಟನೆಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಈ ಟ್ವೀಟ್‌ಲ್ಲಿ ಸುರೇಶ್ ರೈನಾ ದುರ್ಘಟನೆಯಲ್ಲಿ ಎರಡನೇ ಸಾವು ಸಂಭವಿಸಿರುವುದನ್ನು ಬಹಿರಂಗಪಡಿಸಿದ್ದಾರೆ.

ಕ್ವಾರಂಟೈನ್‌ನಲ್ಲಿದ್ದ ಸುರೇಶ್ ರೈನಾ ಕಳೆದ ವಾರಾಂತ್ಯದಲ್ಲಿ ಇದ್ದಕ್ಕಿದ್ದಂತೆ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂಬ ಸಂಗತಿಯನ್ನು ಸಿಎಸ್‌ಕೆ ಫ್ರಾಂಚೈಸಿ ಬಹಿರಂಗಗೊಳಿಸಿತ್ತು. ಅದಾದ ಬಳಿಕ ಸುರೇಶ್ ರೈನಾ ಕುಟುಂಬದಲ್ಲಿ ಆಗಿರುವ ದುರ್ಘಟನೆ ಬಹಿರಂಗಗೊಂಡಿತ್ತು. ಇದೀಗ ಒಟ್ಟಾರೆ ಘಟನೆಯ ಬಗ್ಗೆ ಸುರೇಶ್ ರೈನಾ ಮೌನ ಮುರಿದಿದ್ದು ಟ್ವಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮಾವನ ಸಾವಿನ ಬಳಿಕ ಸೋದರ ಸಂಬಂಧಿ ಸಾವು!

ಮಾವನ ಸಾವಿನ ಬಳಿಕ ಸೋದರ ಸಂಬಂಧಿ ಸಾವು!

ಆಗಂತುಕರು ಸುರೇಶ್ ರೈನಾ ಅವರ ಪಂಜಾಬ್‌ನ ಮಾವನ ಮನೆಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಕುಟುಂಬಸ್ಥರ ಮೇಲೆ ಭೀಕರ ದಾಳಿಯನ್ನು ನಡೆಸಿದ್ದರು. ಈ ಘಟನೆಯಲ್ಲಿ ಸುರೇಶ್ ರೈನಾ ಮಾವ ಅಂದೇ ಮೃತಪಟ್ಟಿದ್ದರು. ಈಗ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂದಿದ್ದ ಇನ್ನೊಬ್ಬ ಸೋದರ ಸಂಬಂಧಿ ಮೃತಪಟ್ಟಿರುವುದನ್ನು ಸುರೇಶ್ ರೈನಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮೊದಲ ಬಾರಿಗೆ ರೈನಾ ಪ್ರತಿಕ್ರಿಯೆ

ಮೊದಲ ಬಾರಿಗೆ ರೈನಾ ಪ್ರತಿಕ್ರಿಯೆ

ದುರ್ಘನೆಯ ನಂತರ ಸುರೇಶ್ ರೈನಾ ತವರಿಗೆ ಮರಳುವ ನಿರ್ಧಾರವನ್ನು ಮಾಡಿದ್ದರು. ಹೀಗಾಗಿ ಹಠಾತ್ ಆಗಿ ಸುರೇಶ್ ರೈನಾ ತವರಿಗೆ ಮರಳಿದ್ದರು. ಆದರೆ ಘಟನೆಯ ಬಗ್ಗೆ ಯಾವುದೇ ಸಂಗತಿಯನ್ನು ಹಂಚಿಕೊಂಡಿರಲಿಲ್ಲ. ಆದರೆ ಇದೀಗ ಸುರೇಶ್ ರೈನಾ ಕುಟುಂಬದಲ್ಲಾಗಿರುವ ದುರಂತದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಭಯಾನಕತೆಯನ್ನು ಮೀರಿದ ದುರ್ಘಟನೆ

ಭಯಾನಕತೆಯನ್ನು ಮೀರಿದ ದುರ್ಘಟನೆ

ಟ್ವೀಟ್‌ನಲ್ಲಿ ರೈನಾ "ನನ್ನ ಕುಟುಂಬಕ್ಕೆ ಏನಾಯಿತು ಎಂಬುದು ಪಂಜಾಬ್ ಭಯಾನಕತೆಯನ್ನು ಮೀರಿದೆ. ನನ್ನ ಅಂಕಲ್‌ನನ್ನು ಕೊಲ್ಲಲಾಯಿತು. ನನ್ನ ಅತ್ತೆ ಮತ್ತು ನನ್ನ ಸೋದರಸಂಬಂಧಿಗಳಿಗೆ ತೀವ್ರವಾದ ಗಾಯಗಳಾದ್ದು, ದುರದೃಷ್ಟವಶಾತ್ ನನ್ನ ಸೋದರಸಂಬಂಧಿ ಕೂಡ ಕಳೆದ ರಾತ್ರಿ ಜೀವನ್ಮರಣದ ಹೋರಾಟದ ನಂತರ ನಿಧನರಾಗಿದ್ದಾರೆ. ನನ್ನ ಚಿಕ್ಕಮ್ಮನ ಸ್ಥಿತಿಯೂ ಚಿಂತಾಜನಕವಾಗಿದ್ದು ಜೀವರಕ್ಷಕಗಳಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ" ಎಂದು ತಿಳಿಸಿದ್ದಾರೆ.

ಪಂಜಾಬ್ ಪೊಲೀಸರಲ್ಲಿ ರೈನಾ ಮನವಿ

ಪಂಜಾಬ್ ಪೊಲೀಸರಲ್ಲಿ ರೈನಾ ಮನವಿ

"ಈ ಕ್ಷಣದವರೆಗೂ ಆ ರಾತ್ರಿ ಅಂದು ನಿಖರವಾಗಿ ಏನಾಯಿತು, ಯಾರು ಇದಕ್ಕೆ ಕಾರಣ ಎಂದು ತಿಳಿದು ಬಂದಿಲ್ಲ. ಪಂಜಾಬ್ ಪೋಲೀಸರಿಗೆ ನಾನು ಈ ಪ್ರಕರಣದ ಬಗ್ಗೆ ಗಮನ ನೀಡಲು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಘೋರ ಕೃತ್ಯವನ್ನು ಯಾರು ಮಾಡಿದ್ದಾರೆಂದು ತಿಳಿಯಲು ನಾವು ತಿಳಿಯಬೇಕಿದೆ. ಆ ದುಷ್ಕರ್ಮಿಗಳಿಂದ ಹೆಚ್ಚಿನ ಅಪರಾಧ ನಡೆಯಲು ಬಿಡಬಾರದು" ಎಂದು ಮತ್ತೊಂದಿ ಟ್ವೀಟ್ ಮಾಡಿದ್ದಾರೆ ಸುರೇಶ್ ರೈನಾ

Story first published: Tuesday, September 1, 2020, 15:29 [IST]
Other articles published on Sep 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X