ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಂಸ್ಟರ್‌ಡ್ಯಾಮ್ ಆಸ್ಪತ್ರೆಯಲ್ಲಿದ್ದಾರೆ ಸ್ಫೋಟಕ ಬ್ಯಾಟ್ಸ್ಮನ್ ಸುರೇಶ್ ರೈನಾ

Suresh Raina undergoes knee surgery, out for better part of domestic season

ಆ್ಯಂಸ್ಟರ್‌ಡ್ಯಾಮ್, ಆಗಸ್ಟ್ 10: ಭಾರತದ ಸ್ಫೋಟಕ ಬ್ಯಾಟ್ಸ್ಮನ್, ಅತ್ಯುತ್ತಮ ಫೀಲ್ಡರ್ ಸುರೇಶ್ ರೈನಾ ಶುಕ್ರವಾರ (ಆಗಸ್ಟ್ 9) ನೆದರ್ಲೆಂಡ್ಸ್‌ನ ಆ್ಯಂಸ್ಟರ್‌ಡ್ಯಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊಣಕಾಲು ನೋವಿನ ಸಮಸ್ಯೆ ಎದುರಿಸುತ್ತಿರುವ ರೈನಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮಿಮಿಕ್ ಮಾಡಿದ ರವೀಂದ್ರ ಜಡೇಜಾ: ಗಮ್ಮತ್ತಿನ ವಿಡಿಯೋವಿರಾಟ್ ಕೊಹ್ಲಿ ಮಿಮಿಕ್ ಮಾಡಿದ ರವೀಂದ್ರ ಜಡೇಜಾ: ಗಮ್ಮತ್ತಿನ ವಿಡಿಯೋ

32ರ ಹರೆಯದ, ಎಡಗೈ ಬ್ಯಾಟ್ಸ್ಮನ್ ರೈನಾ, ಕಳೆದ ಕೆಲ ತಿಂಗಳಿನಿಂದ ಮೊಣಕಾಲು ಗಾಯದ ಸಮಸ್ಯೆಯಲ್ಲಿದ್ದರು. ಶಸ್ತ್ರ ಚಿಕಿತ್ಸೆ ನಡೆದಿದ್ದು, ರೈನಾ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ 6 ವಾರಗಳು ಬೇಕಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಬಿಸಿಸಿಐ ಕೂಡ ಟ್ವಿಟರ್‌ನಲ್ಲಿ ಈ ವಿಚಾರ ತಿಳಿಸಿದೆ.

'ಸುರೇಶ್ ರೈನಾ ಅವರು ಕಳೆದ ಕೆಲವು ತಿಂಗಳುಗಳಿಂದ ಮೊಣಕಾಲು ಗಾಯದ ಸಮಸ್ಯೆಯಲ್ಲಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಸಂಪೂರ್ಣ ಚೇತರಿಸಿಕೊಳ್ಳಲು 4-6 ವಾರಗಳು ಬೇಕಾಗಬಹುದು,' ಎಂದು ರೈನಾ ಅವರ ಡಚ್ ಸರ್ಜನ್, ಡಾ. ಎಚ್ ವ್ಯಾನ್ ಡೆರ್ ಹೋವೆನ್ ತಿಳಿಸಿದ್ದಾರೆ.

ಭಾರತ 'ಎ' vs ವೆಸ್ಟ್ ಇಂಡೀಸ್ 'ಎ': ಇತಿಹಾಸ ನಿರ್ಮಿಸಿದ ಶುಭ್‌ಮಾನ್‌ ಗಿಲ್ಭಾರತ 'ಎ' vs ವೆಸ್ಟ್ ಇಂಡೀಸ್ 'ಎ': ಇತಿಹಾಸ ನಿರ್ಮಿಸಿದ ಶುಭ್‌ಮಾನ್‌ ಗಿಲ್

ಕಾಲು ನೋವಿನ ಕಾರಣ ರೈನಾ ಈ ತಿಂಗಳಾಂತ್ಯದಿಂದ ಆಂಭವಾಗಲಿರುವ ದೇಸಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳದಂತಾಗಿದೆ. ರೈನಾ, 18 ಟೆಸ್ಟ್, 226 ಏಕದಿನ ಪಂದ್ಯ, 78 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಜುಲೈ 2018 ಇಂಗ್ಲೆಂಡ್‌ ವಿರುದ್ಧ ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ರೈನಾ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಆಡಿದ್ದರು.

Story first published: Saturday, August 10, 2019, 12:21 [IST]
Other articles published on Aug 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X