ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಷ್ತಾಕ್ ಅಲಿ ಟ್ರೋಫಿ: ಅಭ್ಯಾಸ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್

Suryakumar blistering knock, hits 44-ball century in practice game

ಈ ಬಾರಿಯ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿಯೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು ಸೂರ್ಯ ಕುಮಾರ್ ಯಾದವ್. ಈಗ ಅವರು ತನ್ನ ಅದ್ಭುತ ಪ್ರದರ್ಶನವನ್ನು ದೇಶೀಯ ಟಿ20 ಟೂರ್ನಮೆಂಟ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಮುಂದುವರಿಸುವ ಮುನ್ಸೂಚನೆಯನ್ನು ನೀಡಿದ್ದಾರೆ. ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅಬ್ಬರದ ಶತಕವನ್ನು ಬಾರಿಸಿ ಎದುರಾಳಿಗಳಿಗೆ ಸಂದೇಶವನ್ನು ರವಾನಿಸಿದ್ದಾರೆ.

ದೇಶೀಯ ಟೂರ್ನಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ಆಂತರಿಕ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದರು. ಟೀಮ್ 'ಬಿ' ಹಾಗೂ ಟೀಮ್ 'ಡಿ' ನಡುವೆ ಅಭ್ಯಾಸ ಪಂದ್ಯವನ್ನು ಏರ್ಪಡಿಸಲಾಗಿತ್ತು. ಈ ಪಂದ್ಯದಲ್ಲಿ 47 ಎಸೆತವನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ ಭರ್ಜರಿ 120 ರನ್ ಬಾರಿಸಿ ಮಿಂಚುಹರಿಸಿದ್ದಾರೆ.

ಧೋನಿ ಪಾದಾರ್ಪಣೆಯ ದಿನವಿದು: MSD ವಿಶೇಷ ದಾಖಲೆಗಳ ಪಟ್ಟಿಧೋನಿ ಪಾದಾರ್ಪಣೆಯ ದಿನವಿದು: MSD ವಿಶೇಷ ದಾಖಲೆಗಳ ಪಟ್ಟಿ

ಸೂರ್ಯಕುಮಾರ್ ಯಾದವ್ ಬಿ ತಂಡವನ್ನು ಮುನ್ನಡೆಸಿದ್ದು ಈ ಇನ್ನಿಂಗ್ಸ್‌ನಲ್ಲಿ ಹತ್ತು ಬೌಂಡರಿ ಹಾಗೂ 9 ಸಿಕ್ಸರ್ ಚಚ್ಚಿದ್ದರು. 255.32ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟ್ ಬೀಸಿದ್ದು ಎದುರಾಳಿ ತಂಡದ ಎಲ್ಲಾ ಬೌಲರ್‌ಗಳನ್ನೂ ಸರಿಯಾಗಿಯೇ ದಂಡಿಸಿದರು.

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಎಸೆದ ಒಂದು ಓವರ್‌ನಲ್ಲಿ ಯಾದವ್ ಭರ್ಜರಿ 21 ರನ್ ಚಚ್ಚಿದ್ದಾರೆ. ಅರ್ಜುನ್ ಎಸೆದ ಮೂರನೇ ಓವರ್‌ನಲ್ಲಿ ಈ ಪ್ರಮಾಣದ ರನ್ ಕದಿಯುವಲ್ಲಿ ಯಶಸ್ವಿಯಾದರು. ಅರ್ಜುನ್ ಮೊದಲ ಎರಡು ಓವರ್‌ಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದರು. ಸೂರ್ಯ ಕುಮಾರ್ ಯಾದವ್ ಅವರ ಈ ಬ್ಯಾಟಿಂಗ್ ಅಬ್ಬರದ ಕಾರಣದಿಂದ ತಂಡ ನಿಗದಿತ 20 ಓವರ್‌ಗಳಲ್ಲಿ 213 ರನ್‌ಗಳಿಸಿತ್ತು.

2021ರ ಟಿ20ಐ ವಿಶ್ವಕಪ್‌ಗೆ ತಾಣಗಳ ಘೋಷಿಸಿದ ಬಿಸಿಸಿಐ2021ರ ಟಿ20ಐ ವಿಶ್ವಕಪ್‌ಗೆ ತಾಣಗಳ ಘೋಷಿಸಿದ ಬಿಸಿಸಿಐ

ಈ ಬಾರಿಯ ಐಪಿಎಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಪ್ರದರ್ಶನ ಸಾಕಷ್ಟು ಗಮನ ಸೆಳೆದಿತ್ತು. 30ರ ಹರೆಯದ ಸೂರ್ಯಕುಮಾರ್ ಯಾದವ್ ಯುಎಇನಲ್ಲಿ ನಡದ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ ಆಡಿ 480 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಇದು ನಾಲ್ಕನೇ ಅತಿ ಹೆಚ್ಚಿನ ಸ್ಕೋರ್ ಆಗಿತ್ತು. 4 ಅರ್ಧ ಶತಕಗಳನ್ನು ಸಿಡಿಸಿದ್ದ ಯಾದವ್ 40ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರು. ಇದೇ ಪ್ರದರ್ಶನ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಮುಂದುವರಿಸುವ ಮುನ್ಸೂಚನೆ ನೀಡಿದ್ದಾರೆ ಸೂರ್ಯಕುಮಾರ್ ಯಾದವ್.

Story first published: Wednesday, December 23, 2020, 15:01 [IST]
Other articles published on Dec 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X