ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಅಬ್ಬರ, ಗಬ್ಬರ್ ಹೆಸರಲ್ಲಿದ್ದ ಈ ದಾಖಲೆ ನೆಲಸಮ, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್

Suryakumar yadav

ತಿರುವನಂತಪುರದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿತು. ಟಾಸ್ ಗೆದ್ದು ಎದುರಾಳಿಯನ್ನ 106 ರನ್‌ಗಳಿಗೆ ಕಟ್ಟಿಹಾಕಿದ ರೋಹಿತ್ ಪಡೆ 16.4 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ ಸರಣಿಯಲ್ಲಿ ಗೆಲುವಿನ ಆರಂಭ ಪಡೆದಿದೆ.

ಪವರ್‌ಪ್ಲೇ ಓವರ್‌ಗಳಲ್ಲಿ ಬೊಂಬಾಟ್ ಬೌಲಿಂಗ್‌ ಮಾಡಿದ ಅರ್ಷ್‌ದೀಪ್ ಸಿಂಗ್ ಹಾಗೂ ದೀಪಕ್ ಚಹಾರ್ ಅದ್ಭುತ ಬೌಲಿಂಗ್ ಮಾಡಿದ್ದರ ಜೊತೆಗೆ, ಸೂರ್ಯಕುಮಾರ್ ಯಾದವ್ ಮತ್ತು ಕೆ.ಎಲ್ ಕ್ಲಾಸ್ ಬ್ಯಾಟಿಂಗ್ ನೆರವಿನಿಂದ ಭಾರತ ಇನ್ನೂ 20 ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ತಲುಪಿದೆ.

ಈ ಪಂದ್ಯದಲ್ಲಿ ಎದುರಾಳಿ ಬ್ಯಾಟರ್‌ಗಳು ಬ್ಯಾಟ್ ಬೀಸಲು ಹೆಣಗಾಡುತ್ತಿದ್ದರು, ಆದ್ರೆ ಭಾರತದ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಎಂದಿನಂತೆ ತನ್ನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ರು. ಅರ್ಧಶತಕ ದಾಖಲಿಸುವುದರ ಜೊತೆಗೆ ಸೂರ್ಯ, ಶಿಖರ್ ಧವನ್ ಹೆಸರಿನಲ್ಲಿದ್ದ ಅಮೋಘ ದಾಖಲೆ ನೆಲಸಮಗೊಳಿಸಿದ್ರು.

ಸೂರ್ಯ ಬ್ಯಾಟಿಂಗ್ ಅಬ್ಬರ, ಅಜೇಯ ಅರ್ಧಶತಕ

ಸೂರ್ಯ ಬ್ಯಾಟಿಂಗ್ ಅಬ್ಬರ, ಅಜೇಯ ಅರ್ಧಶತಕ

107ರನ್‌ಗಳ ಗುರಿ ಬೆನ್ನತ್ತಿದ ಭಾರತ ಪರ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಮೊದಲ ಓವರ್‌ ಮೇಡನ್ ಓವರ್‌ನಲ್ಲಿ ಮುಕ್ತಾಯಗೊಂಡ್ರೆ, ಮೂರನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಕಗಿಸೊ ರಬಾಡ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಇನ್ನು ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ ಆಟ ಕೇವಲ 3 ರನ್‌ಗೆ ಮುಕ್ತಾಯಗೊಂಡಿತು. ರೋಹಿತ್ ಶರ್ಮಾನಂತೆಯೇ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಕೊಹ್ಲಿ ವಿಕೆಟ್ ಒಪ್ಪಿಸಿದ್ರು.

ಹೀಗೆ ಒಂದೆಡೆ ವಿಕೆಟ್ ಉರುಳಿದ್ರೆ ಕೆ.ಎಲ್ ರಾಹುಲ್ ತಾಳ್ಮೆಯ ಬ್ಯಾಟಿಂಗ್ ಮೂಲಕ ಭಾರತದ ಗೆಲುವಿಗೆ ಕೊಡುಗೆ ನೀಡಿದ್ರು. ಮತ್ತೊಂದೆಡೆ ಸೂರ್ಯಕುಮಾರ್ ಎಂದಿನಂತೆ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 33 ಎಸೆತಗಳಲ್ಲಿ ಅರ್ಧಶತಕದ ಗಡಿದಾಟಿದ್ರು. 151.22ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಅಜೇಯ 50 ರನ್‌ಗಳ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳಿದ್ದವು.

ಸೂರ್ಯಕುಮಾರ್ ಜೊತೆಗೆ ತಾಳ್ಮೆಯುತ ಆಟವಾಡಿದ ಕೆ.ಎಲ್ ರಾಹುಲ್ 16.4ನೇ ಎಸೆತಗಳಲ್ಲಿ ಸ್ವಿಪ್‌ ಮೂಲಕ ಸಿಕ್ಸರ್‌ ಸಿಡಿದ್ದಲ್ಲದೆ ತಂಡಕ್ಕೆ ಗೆಲುವು ತಂದುಕೊಟ್ಟರು. ಹಾಗೆಯೇ 56 ಎಸೆತದಲ್ಲಿ ರಾಹುಲ್ ಅರ್ಧಶತಕದ ಗಡಿದಾಟಿದ್ರು.

ಶಿಖರ್ ಧವನ್ ದಾಖಲೆಯನ್ನ ಮುರಿದ ಸೂರ್ಯಕುಮಾರ್

ಶಿಖರ್ ಧವನ್ ದಾಖಲೆಯನ್ನ ಮುರಿದ ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಶಿಖರ್ ಧವನ್ ದಾಖಲೆಯನ್ನು ಸಹ ನೆಲಸಮಗೊಳಿಸಿದ್ರು. ಶಿಖರ್ ಧವನ್ 2018ರಲ್ಲಿ 17 ಇನ್ನಿಂಗ್ಸ್‌ಗಳಲ್ಲಿ 689 ರನ್ ಕಲೆಹಾಕಿದ್ದರು. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಟೀಂ ಇಂಡಿಯಾ ಬ್ಯಾಟರ್ ಎಂಬ ಸಾಧನೆ ಮಾಡಿದ್ರು.

6 ಅರ್ಧಶತಕ ದಾಖಲಿಸಿದ್ದ ಶಿಖರ್ ಧವನ್ ಗರಿಷ್ಠ 92ರನ್‌ಗಳ ಜೊತೆಗೆ 147.22ರ ಸ್ಟ್ರೈಕ್‌ರೇಟ್‌ನಲ್ಲಿ 40.52ರ ಬ್ಯಾಟಿಂಗ್ ಸರಾಸರಿಯಲ್ಲಿ 70 ಬೌಂಡರಿ ಮತ್ತು 25 ಸಿಕ್ಸರ್‌ ಸಿಡಿಸಿದ್ರು.

ಆದ್ರೆ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 50 ರನ್‌ ಕಲೆಹಾಕಿದ್ದರ ಜೊತೆಗೆ ಗಬ್ಬರ್ ದಾಖಲೆ ಮುರಿದಿದ್ದಾರೆ. ಸೂರ್ಯ 2022ರಲ್ಲಿ 21 ಇನ್ನಿಂಗ್ಸ್‌ಗಳಲ್ಲಿ 40.66ರ ಬ್ಯಾಟಿಂಗ್ ಸರಾಸರಿಯಲ್ಲಿ 732 ರನ್ ಕಲೆಹಾಕಿದ್ದಾರೆ. 180.29ರ ಅಮೋಘ ಸ್ಟ್ರೈಕ್‌ರೇಟ್‌ ಜೊತೆಗೆ 1 ಶತಕ ಹಾಗೂ 5 ಅರ್ಧಶತಕ ದಾಖಲಿಸಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 45 ಸಿಕ್ಸರ್ ಮತ್ತು 63 ಬೌಂಡರಿಗಳಿವೆ.

Ind vs SA 1st T20I: ಬೌಲಿಂಗ್ ವೇಳೆ ಅರ್ಷ್‌ದೀಪ್‌ಗೆ ಅಂಪೈರ್ ವಾರ್ನಿಂಗ್‌

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು T20I ರನ್ ಗಳಿಸಿದ ಭಾರತ ಬ್ಯಾಟರ್ಸ್

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು T20I ರನ್ ಗಳಿಸಿದ ಭಾರತ ಬ್ಯಾಟರ್ಸ್

ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತರಾಷ್ಟ್ರೀಯ ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿರುವ ಟೀಂ ಇಂಡಿಯಾ ಬ್ಯಾಟರ್‌ಗಳನ್ನ ಈ ಕೆಳಗೆ ಕಾಣಬಹುದಾಗಿದೆ.

1. ಸೂರ್ಯಕುಮಾರ್ ಯಾದವ್- 2022 ರಲ್ಲಿ 732* ರನ್ (ಚಾಲ್ತಿಯಲ್ಲಿದೆ)
2. ಶಿಖರ್ ಧವನ್ - 2018 ರಲ್ಲಿ 689 ರನ್
3. ವಿರಾಟ್ ಕೊಹ್ಲಿ - 2016 ರಲ್ಲಿ 649 ರನ್
4. ರೋಹಿತ್ ಶರ್ಮಾ - 2018 ರಲ್ಲಿ 590 ರನ್
5. ರೋಹಿತ್ ಶರ್ಮಾ- 2016 ಮತ್ತು 2022 ರಲ್ಲಿ 497 ರನ್* (ಚಾಲ್ತಿಯಲ್ಲಿದೆ)

ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಗೆಲುವು, ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ

ಸೂರ್ಯಕುಮಾರ್ ಯಾದವ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಭಾರತದ ಬ್ಯಾಟ್ಸ್‌ಮನ್ ಎಂಬ ದಾಖಲೆಯ ಜೊತೆಗೆ ಇದೇ ಅವಧಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಮಾಡಿದ್ದಾರೆ.

ಪಾಕಿಸ್ತಾನದ ಸ್ಟಾರ್ ಓಪನ್ ಮೊಹಮ್ಮದ್ ರಿಜ್ವಾನ್ ಹೆಸಿನಲ್ಲಿದ್ದ 42 ಸಿಕ್ಸರ್‌ಗಳ ದಾಖಲೆಯನ್ನ ಮುರಿದಿರುವ ಸೂರ್ಯಕುಮಾರ್ ಯಾದವ್ ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ 45 ಸಿಕ್ಸರ್ ಸಿಡಿಸಿ ಅಗ್ರಸ್ಥಾನಕ್ಕೇರಿದ್ದಾರೆ.


ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳು
45 - ಸೂರ್ಯಕುಮಾರ್ ಯಾದವ್ (ಭಾರತ) - 2022*
42 - ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) - 2021
41 - ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್) - 2021
39 - ಟಿಪಿ ಉರಾ (ಉಗಾಂಡಾ) - 2022
38 - ಮುಹಮ್ಮದ್ ವಸೀಮ್ (ಯುಎಇ) - 2022
37 - ಎವಿನ್ ಲೆವಿಸ್ (ವೆಸ್ಟ್ ಇಂಡೀಸ್) - 2021
36 - ಕೆವಿನ್ ಒ'ಬ್ರೇನ್ (ಐರ್ಲೆಂಡ್) - 2019
36 - ರೋವ್ಮನ್ ಪೊವೆಲ್ (ವೆಸ್ಟ್ ಇಂಡೀಸ್) - 2022
35 - ಕಾಲಿನ್ ಮುನ್ರೊ (ನ್ಯೂಜಿಲೆಂಡ್) - 2018
34 - ಜಾರ್ಜ್ ಮುನ್ಸಿ (ಸ್ಕಾಟ್ಲೆಂಡ್) - 2019

Story first published: Thursday, September 29, 2022, 10:43 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X