ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಟೀಮ್ ಇಂಡಿಯಾದ ಭಾಗವಾಗಲು ಅರ್ಹ: ಬ್ರಿಯಾನ್ ಲಾರಾ

Suryakumar Yadav deserved to be a part of India squad: Brian Lara

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಗಮನ ಸೆಳೆದ ಸೂರ್ಯಕುಮಾರ್ ಈ ಬಾರಿ ಆಸ್ಟ್ರೆಲಿಯಾ ವಿರುದ್ದದ ಚುಟುಕು ಸರಣಿಗೆ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳದ್ದಾಗಿತ್ತು. ಆದರೆ ಸೂರ್ಯಕುಮಾರ್ ಯಾದವ್ ಈ ಬಹು ನಿರೀಕ್ಷಿತ ಟೂರ್ನಿಗೆ ಆಯ್ಕೆಯಾಗದೆ ಇದ್ದಾಗ ಸಾಕಷ್ಟು ಚರ್ಚೆಗಳು ನಡೆದವು. ಆಯ್ಕೆಗಾರರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಇದೀಗ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಕೂಡ ಸೂರ್ಯಕಮಾರ್ ಯಾದವ್ ಆಯ್ಕೆಯಾಗದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಬೇಕಿತ್ತು ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ. 30ರ ಹರೆಯದ ಮುಂಬೈ ಬ್ಯಾಟ್ಸ್‌ಮನ್‌ಗೆ ಅತ್ಯುತ್ತಮ ಬ್ಯಾಟ್ಸ್‌ಮನ್‌ಗೆ ಬೇಕಾದ ಎಲ್ಲಾ ಅರ್ಹತೆಗಳೂ ಇದೆ. ಆತ ಭಾರತೀಯ ತಂಡದ ಕರೆಗೆ ಸಂಪೂರ್ಭವಾಗಿ ಅರ್ಹನಾಗಿದ್ದಾನೆ ಎಂದು ಲಾರಾ ಹೇಳಿದ್ದಾರೆ.

ರೋಹಿತ್, ಇಶಾಂತ್ ಶೀಘ್ರ ಆಸ್ಟ್ರೇಲಿಯಾಕ್ಕೆ ಹೊರಡಬೇಕು: ರವಿ ಶಾಸ್ತ್ರಿರೋಹಿತ್, ಇಶಾಂತ್ ಶೀಘ್ರ ಆಸ್ಟ್ರೇಲಿಯಾಕ್ಕೆ ಹೊರಡಬೇಕು: ರವಿ ಶಾಸ್ತ್ರಿ

ಸೂರ್ಯಕುಮಾರ್ ಯಾದವ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹಾಗೂ ಐಪಿಎಲ್‌ನಲ್ಲಿ ರನ್ ಸುರಿಮಳೆಯೇ ಹರಿಸಿದ್ದಾರೆ. ಹಾಗಿದ್ದೃಊ ಭಾರತೀಯ ಕ್ರಿಕೆಟ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿಲ್ಲ. ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಸೂರ್ಯಕುಮಾರ್ ಯಾದವ್ ಸ್ಥಿರಪ್ರದರ್ಶನವೂ ಮುಕ್ಯಕಾರಣವಾಗಿತ್ತು. ಹೀಗಾಗಿ ಸೂರ್ಯಕುಮಾರ್ ಕಡೆಗಣನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

"ಖಂಡಿತವಾಗಿಯೂ ಆತನೋರ್ವ ಶಾಸ್ತ್ರೀಯ ಆಟಗಾರ. ಆಟಗಾರ ಗಳಿಸಿದ ರನ್‌ಗಳನ್ನು ಮಾತ್ರವೇ ನಾನು ಪರಿಗಣಿಸುತ್ತಿಲ್ಲ. ಆತನಲ್ಲಿನ ಕೌಶಲ್ಯ, ಒತ್ತಡದ ಸಂದರ್ಭದಲ್ಲಿ ಆತನ ಸಾಮರ್ಥ್ಯ ಇದನ್ನು ಗಮನಿಸಿ ಹೇಳುತ್ತಿದ್ದೇನೆ. ಮುಂಬೈ ಇಂಡಿಯನ್ಸ್ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಆತ ಬ್ಯಾಟಿಂಗ್‌ಗೆ ಇಳಿದಾಗ ತಂಡ ಯಾವಾಗಲೂ ಒತ್ತಡದಲ್ಲಿರುತ್ತಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಮಾಜಿ ಆಟಗಾರ ಬ್ರಿಯಾನ್ ಲಾರಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Monday, November 23, 2020, 14:49 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X