ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವೇಗದ ಅರ್ಧಶತಕ ಚಚ್ಚಿದ 3 ಮುಂಬೈ ಇಂಡಿಯನ್ಸ್ ಆಟಗಾರರಿವರು!

Suryakumar Yadav, Ishan Kishan and Krunal Pandya scored fastest fifty in their maiden internationals

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅತೀ ಬಲಿಷ್ಠ ತಂಡ. ಹಾಲಿ ಚಾಂಪಿಯನ್ಸ್ ಆಗಿರುವ ಮುಂಬೈ ಈವರೆಗೆ ಒಟ್ಟು ಐದು ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ. ಇದಕ್ಕೆ ಕಾರಣ ಅದರಲ್ಲಿರುವ ಸ್ಫೋಟಕ, ಕೌಶಲಭರಿತ, ಬಲಿಷ್ಠ ಆಟಗಾರರು. ಎಂಐನಲ್ಲಿ ಪ್ರತಿಭಾನ್ವಿತರ ದೊಡ್ಡ ಬಳಗವೇ ಇದೆ. ಇದೇ ಕಾರಣಕ್ಕೆ ಮುಂಬೈ ಐಪಿಎಲ್ ಇತಿಹಾಸದಲ್ಲೇ ಅತೀ ಯಶಸ್ವಿ ತಂಡವಾಗಿ ಮಿನುಗಿದೆ.

ಕೃನಾಲ್-ಕರನ್ ಮಧ್ಯೆ ಮಾತಿನ ಚಕಮಕಿ, ಗಡ್ಡ ಎಳೆದ ಕೊಹ್ಲಿ: ವಿಡಿಯೋಕೃನಾಲ್-ಕರನ್ ಮಧ್ಯೆ ಮಾತಿನ ಚಕಮಕಿ, ಗಡ್ಡ ಎಳೆದ ಕೊಹ್ಲಿ: ವಿಡಿಯೋ

ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಕ್ವಿಂಟನ್ ಡಿ ಕಾಕ್, ಕ್ರಿಸ್ ಲಿನ್, ಜೇಮ್ಸ್ ನೀಶಮ್, ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್ ಇಂಥ ಅನೇಕ ಅಪಾಯಕಾರಿ ಆಟಗಾರರು ಎಂಐನಲ್ಲಿದ್ದಾರೆ. ಅಷ್ಟೇ ಯಾಕೆ, ತೀರಾ ಇತ್ತೀಚೆಗೆ ಭಾರತೀಯ ಮೂವರು ಬ್ಯಾಟ್ಸ್‌ಮನ್‌ಗಳು ಆಡಿದ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೇಗದ ಅರ್ಧ ಶತಕ ಚಚ್ಚಿದ್ದರು. ಇವರೆಲ್ಲರೂ ಎಂಐನವರು ಅನ್ನೋದು ವಿಶೇಷ.

1. ಇಶಾನ್ ಕಿಶನ್

1. ಇಶಾನ್ ಕಿಶನ್

ಭಾರತ vs ಇಂಗ್ಲೆಂಡ್ ಟಿ20ಐ ಸರಣಿಯಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್‌, ಮುಂಬೈ ಇಂಡಿಯನ್ಸ್‌ನ ಇಶಾನ್ ಕಿಶಾನ್ ಪಾದಾರ್ಪಣೆ ಮಾಡಿದ್ದರು. ಅಹ್ಮದಾಬಾದ್‌ನಲ್ಲಿ ನಡೆದಿದ್ದ ದ್ವಿತೀಯ ಟಿ20ಐ ಪಂದ್ಯದಲ್ಲಿ ಶಿಖರ್ ಧವನ್ ಬದಲಿಗೆ ಕಿಶನ್‌ಗೆ ಅವಕಾಶ ನೀಡಲಾಗಿತ್ತು. ಅಂದು ಭಾರತ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದ ಕಿಶನ್ 32 ಎಸೆತಗಳಲ್ಲಿ 56 ರನ್ ಸಿಡಿಸಿದ್ದರು. ಇದರಲ್ಲಿ 5 ಫೋರ್ಸ್, 4 ಸಿಕ್ಸರ್ ಸೇರಿತ್ತು. ಅಷ್ಟೇ ಅಲ್ಲ ಕೇವಲ 28 ಎಸೆತಗಳಲ್ಲಿ ಕಿಶನ್ ಅರ್ಧ ಶತಕ ಚಚ್ಚಿದ್ದರು.

2. ಸೂರ್ಯಕುಮಾರ್ ಯಾದವ್

2. ಸೂರ್ಯಕುಮಾರ್ ಯಾದವ್

ಭಾರತ ತಂಡದಲ್ಲಿ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಲಾರಂಭಿಸಿ ಬಹು ಕಾಲದ ಬಳಿಕ ಕಡೇಗೂ ಸೂರ್ಯಕುಮಾರ್ ಯಾದವ್ ಭಾರತ ತಂಡದ ಪರ ಕಣಕ್ಕಿಳಿದಿದ್ದರು. ಇಂಗ್ಲೆಂಡ್ ಸರಣಿಯ 4ನೇ ಟಿ20ಐನಲ್ಲಿ ಯಾದವ್ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಈ ವೇಳೆ 31 ಎಸೆತಗಳಲ್ಲಿ 57 ರನ್ ಕೊಡುಗೆ ತಂಡಕ್ಕೆ ನೀಡಿದ್ದರು. ಇದರಲ್ಲಿ 6 ಫೋರ್ಸ್, 3 ಸಿಕ್ಸರ್ ಸೇರಿತ್ತು. ಅಲ್ಲದೆ, ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಯಾದವ್ 28 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದರು.

3. ಕೃನಾಲ್ ಪಾಂಡ್ಯ

3. ಕೃನಾಲ್ ಪಾಂಡ್ಯ

ಭಾರತದ ಆಲ್ ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಇಬ್ಬರೂ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ. ತಮ್ಮ ಹಾರ್ದಿಕ್ ಏಕದಿನದಲ್ಲಿ ಕಾಣಿಸಿಕೊಂಡ ಎಷ್ಟೋ ಸಮಯದ ಬಳಿಕ ಅಣ್ಣ ಕೃನಾಲ್ ಏಕದಿನ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡಿದ್ದರು. ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕೃನಾಲ್ 31 ಎಸೆತಗಳಿಗೆ ಅಜೇಯ 58 ರನ್ ಬಾರಿಸಿದ್ದರು (7 ಫೋರ್, 2 ಸಿಕ್ಸರ್). ಕೃನಾಲ್ ಕೂಡ ಈ ಪಂದ್ಯದಲ್ಲಿ 26 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದರು.

Story first published: Wednesday, March 24, 2021, 17:04 [IST]
Other articles published on Mar 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X