ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ವಿಶ್ವಶ್ರೇಷ್ಠ ಟಿ20 ಬ್ಯಾಟರ್ ಆಗಲು ಹೀಗೆ ಮಾಡಬೇಕಿದೆ ಎಂದ ಸಬಾ ಕರೀಂ

Suryakumar Yadav Need To Perform Well In T20 World Cup To Become A Best T20 Player: Saba Karim

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಪ್ರದರ್ಶನ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಹರ್ಷ ವ್ಯಕ್ತಪಡಿಸಿದ್ದಾರೆ. ಸೂರ್ಯ ಕುಮಾರ್ ಯಾದವ್ ಅವರ ಅದ್ಭುತ ಹೊಡೆತಗಳು, ಬಲವಾದ ಬೌಲಿಂಗ್ ಮತ್ತು ಫೀಲ್ಡಿಂಗ್ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಅವರ ಸಾಮರ್ಥ್ಯವನ್ನು ಶ್ಲಾಘಿಸಿದರು.

Ind vs SA ODI: ರಜತ್ ಪಾಟೀದಾರ್‌ಗೆ ಚೊಚ್ಚಲ ಅವಕಾಶ ಸಿಗುವ ಸಾಧ್ಯತೆInd vs SA ODI: ರಜತ್ ಪಾಟೀದಾರ್‌ಗೆ ಚೊಚ್ಚಲ ಅವಕಾಶ ಸಿಗುವ ಸಾಧ್ಯತೆ

ಸೂರ್ಯಕುಮಾರ್ ಯಾದವ್ ಭಾರತಕ್ಕೆ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಎಂದು ಮಾಜಿ ಭಾರತೀಯ ಆಯ್ಕೆಗಾರ ಸಬಾ ಕರೀಮ್ ಹೇಳಿದರು. ದೊಡ್ಡ ಪಂದ್ಯಾವಳಿಗಳಲ್ಲಿ ಗುಣಮಟ್ಟದ ತಂಡಗಳ ವಿರುದ್ಧ ಪ್ರದರ್ಶನ ನೀಡುವುದು ಸೂರ್ಯಕುಮಾರ್ ಮುಂದಿರುವ ನಿಜವಾದ ಪರೀಕ್ಷೆಯಾಗಿದೆ ಎಂದು ಕರೀಮ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 36 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಸಹಿತ 69 ರನ್ ಗಳಿಸಿದ್ದ ಅವರು, ಭಾರತ ತಂಡದ ಗೆಲುವಿನ ಹಾದಿಯನ್ನು ಸುಲಭಗೊಳಿಸಿದ್ದರು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿಂದಲೂ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಲೇ ಇದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಅವರ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಬಗ್ಗೆ ಸಬಾ ಕರೀಮ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ

ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಸಬಾ ಕರೀಂ, ಆತ ಭಾರತದ ಮ್ಯಾಚ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ ಎಂದು ಹೇಳಿದ್ದಾರೆ. ಆತ ಸದ್ಯ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಆತನ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆತನ ಆಟವನ್ನು ನೋಡಲು ಕಾಯುತ್ತಿದ್ದೇನೆ. ಅಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡುತ್ತಾರೆ ಎನ್ನುವ ಭರವಸೆ ಇದೆ ಎಂದು ಸಬಾ ಕರೀಂ ಹೇಳಿದ್ದಾರೆ.

ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್‌ಕ್ರಿಸ್ಟ್

ಟಿ20 ವಿಶ್ವಕಪ್‌ನಲ್ಲಿ ಪ್ರದರ್ಶನ ನೀಡಬೇಕು

ಟಿ20 ವಿಶ್ವಕಪ್‌ನಲ್ಲಿ ಪ್ರದರ್ಶನ ನೀಡಬೇಕು

"ಸೂರ್ಯಕುಮಾರ್ ಯಾದವ್, ದೊಡ್ಡ ಪಂದ್ಯಾವಳಿಯಲ್ಲಿ ಉತ್ತಮ ಗುಣಮಟ್ಟದ ಎದುರಾಳಿ ವಿರುದ್ಧ ದೊಡ್ಡ ಸ್ಕೋರ್ ಗಳಿಸಲು ನಾನು ಇನ್ನೂ ಕಾಯುತ್ತಿದ್ದೇನೆ. ಬಲಿಷ್ಠ ಎದುರಾಳಿಗಳ ಉತ್ತಮ ಪ್ರದರ್ಶನ ನೀಡಿದರೆ ಆಧುನಿಕ ದಿನದ ಕ್ರಿಕೆಟ್‌ನಲ್ಲಿ ನಾನು ಅವನನ್ನು ಅತ್ಯುತ್ತಮ ಟಿ20 ಕ್ರಿಕೆಟಿಗ ಎಂದು ಕರೆಯುತ್ತೇನೆ" ಎಂದು ಸಬಾ ಕರೀಮ್ ಹೇಳಿದ್ದಾರೆ.

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆ ಅವಕಾಶ ಸೂರ್ಯಕುಮಾರ್‌ಗೆ ಬರುತ್ತಿದೆ ಮತ್ತು ಅವರು ಟಿ20 ವಿಶ್ವಕಪ್‌ನಲ್ಲಿ ಅವರ ಫಾರ್ಮ್ ಅನ್ನು ಪುನರಾವರ್ತಿಸಬೇಕೆಂದು ನಾನು ಬಯಸುತ್ತೇನೆ, ಎಂದು ಸಬಾ ಕರೀಮ್ ಹೇಳಿದರು.

ಆತನ ಬ್ಯಾಟಿಂಗ್ ಕೌಶಲ್ಯ ಅಸಾಧಾರಣವಾಗಿದೆ

ಆತನ ಬ್ಯಾಟಿಂಗ್ ಕೌಶಲ್ಯ ಅಸಾಧಾರಣವಾಗಿದೆ

ಸೂರ್ಯಕುಮಾರ್ ಬ್ಯಾಟರ್‌ನಲ್ಲಿ ಅಗತ್ಯವಿರುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬಲವಾದ ಬೌಲಿಂಗ್ ಮತ್ತು ಫೀಲ್ಡಿಂಗ್ ದಾಳಿಯ ವಿರುದ್ಧ ಅವರು ರನ್ ಗಳಿಸಿದರು. ಅವರು ನಂಬಲಾಗದ ಶ್ರೇಣಿಯ ಹೊಡೆತಗಳನ್ನು ಹೊಂದಿದ್ದಾರೆ, ಆದರೆ ವಿಶ್ವ ದರ್ಜೆಯ ಬ್ಯಾಟರ್‌ ಎಂದು ಗುರುತಿಸಲು ಟಿ20 ವಿಶ್ವಕಪ್‌ನಲ್ಲಿ ಪ್ರದರ್ಶನ ನೀಡಬೇಕು ಎಂದು ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ವಿಶ್ವದ ಅತ್ಯುತ್ತಮ ಬೌಲರ್ ಗಳ ವಿರುದ್ಧ ಸೂರ್ಯಕುಮಾರ್ ರನ್ ಗಳಿಸಬೇಕು. ಆತನಲ್ಲಿ ಆ ಸಾಮರ್ಥ್ಯವಿದೆ ಎಂದು ನನಗೆ ತಿಳಿದಿದೆ ಎಂದು ಸಬಾ ಕರೀಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೌಲರ್ ಮೇಲೆ ಹೆಚ್ಚಿನ ಒತ್ತಡ

ಬೌಲರ್ ಮೇಲೆ ಹೆಚ್ಚಿನ ಒತ್ತಡ

ಒಂದೇ ಚೆಂಡಿನಲ್ಲಿ ಮೂರು ವಿಭಿನ್ನ ಹೊಡೆತಗಳನ್ನು ಆಡುವ ಸೂರ್ಯಕುಮಾರ್ ಯಾದವ್ ಅವರ ಅನನ್ಯ ಸಾಮರ್ಥ್ಯವನ್ನು ಕರೀಮ್ ಶ್ಲಾಘಿಸಿದರು. ಯಾವುದೇ ಬೌಲರ್‌ನನ್ನು ಒತ್ತಡಕ್ಕೆ ಸಿಲುಕಿಸಬಲ್ಲ ಅನಿರೀಕ್ಷಿತ ಬ್ಯಾಟರ್ ಎಂದು ಅವರು ಬಣ್ಣಿಸಿದರು.

"ಅವರು ಅನಿರೀಕ್ಷಿತ ಬ್ಯಾಟರ್ ಮತ್ತು ಅಂತಹ ಆಟಗಾರರಿಗೆ ಬೌಲ್ ಮಾಡುವುದು ಕಠಿಣವಾಗಿದೆ. ಒಬ್ಬ ಬ್ಯಾಟರ್ ಒಂದೇ ಎಸೆತದಲ್ಲಿ ಮೂರು ವಿಭಿನ್ನ ಹೊಡೆತಗಳನ್ನು ಆಡಬಹುದಾದರೆ, ಬೌಲರ್‌ನ ಮೇಲಿನ ಒತ್ತಡವನ್ನು ಊಹಿಸಬಹುದು" ಎಮಧು ಹೇಳಿದರು.

ಬುಧವಾರ (ಸೆಪ್ಟೆಂಬರ್ 28) ತಿರುವನಂತಪುರದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Story first published: Tuesday, September 27, 2022, 10:48 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X