ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ 2ನೇ ಏಕದಿನ: ಸೂರ್ಯಕುಮಾರ್ ಯಾದವ್ ಪದಾರ್ಪಣೆಗೆ ಸಜ್ಜು

Suryakumar Yadav set to make ODI debut in place of injured Shreyas Iyer

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಯುವ ಆಟಗಾರ ಶ್ರೇಯಸ್ ಐಯ್ಯರ್ ಅಲಭ್ಯರಾಗುವುದು ಖಚಿತವಾಗಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೂ ಪದಾರ್ಪಣೆ ಮಾಡುವ ಕಾಲ ಸನ್ನಿಹಿತವಾಗಿದೆ.

ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಕರೆಯನ್ನು ಸ್ವೀಕರಿಸಿದ್ದರು. ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡು ವೇಗವಾಗಿ ಅರ್ಧಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಈಗ ಏಕದಿನ ಸರಣಿಯಲ್ಲಿ ಅದೃಷ್ಟ ಪರೀಕ್ಷೆಗೆ ಸೂರ್ಯಕುಮಾರ್ ಯಾದವ್ ಒಳಗಾಗಲಿದ್ದಾರೆ.

ಭಾರತ ವಿರುದ್ಧದ ದ್ವಿತೀಯ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್‌ ಅನುಮಾನಭಾರತ ವಿರುದ್ಧದ ದ್ವಿತೀಯ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್‌ ಅನುಮಾನ

ಟಿ20ಗೆ ಭರ್ಜರಿ ಪದಾರ್ಪಣೆ ಮಾಡಿದ ಸೂರ್ಯ

ಟಿ20ಗೆ ಭರ್ಜರಿ ಪದಾರ್ಪಣೆ ಮಾಡಿದ ಸೂರ್ಯ

ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಸೂರ್ಯ 31 ಎಸೆತಗಳನ್ನು ಎದುರಿಸಿ 57 ರನ್‌ಗಳಿಸಿದ್ದರು. ವೇಗಿ ಜೋಫ್ರಾ ಆರ್ಚರ್ ಎಸೆತ ಪ್ರಥಮ ಎಸೆತವನ್ನು ಎದುರಿಸಿದ ಸೂರ್ಯಕುಮಾರ್ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ್ದರು. ಈ ಮೂಲಕ ಅದ್ಭುತ ಇನ್ನಿಂಗ್ಸ್ ಆರಂಭಿಸಿದ್ದರು.

ಭುಜಕ್ಕೆ ಗಾಯಮಾಡಿಕೊಂಡ ಐಯ್ಯರ್

ಭುಜಕ್ಕೆ ಗಾಯಮಾಡಿಕೊಂಡ ಐಯ್ಯರ್

ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್‌ನ 8 ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್ ಸಂದರ್ಭದಲ್ಲಿ ಬೌಂಡರಿ ಉಳಿಸಲು ಶ್ರೇಯಸ್ ಐಯ್ಯರ್ ಡೈವ್ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ಭುಜಕ್ಕೆ ಒತ್ತಡ ಬಿದ್ದು ಶ್ರೇಯಸ್ ಐಯ್ಯರ್ ನೋವಿಗೆ ಒಳಗಾದರು. ಬಳಿಕ ಫೀಲ್ಡಿಂಗ್ ಹೊರಗುಳಿದಿದ್ದರು. ಶುಬ್ಮನ್ ಗಿಲ್ ಬದಲಿಯಾಗಿ ಫಿಲ್ಡಿಂಗ್ ನಡೆಸಿದರು. ಈಗ ಶ್ರೇಯಸ್ ಐಯ್ಯರ್ ಮುಂದಿನ ಎರಡು ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಐಪಿಎಲ್‌ಗೂ ಅನುಮಾನ

ಐಪಿಎಲ್‌ಗೂ ಅನುಮಾನ

ಶ್ರೇಯಸ್ ಐಯ್ಯರ್ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದಲೂ ಹೊರಗುಳಿಯುವ ಸಂಭವವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಭುಜದ ಮೂಳೆಯಲ್ಲಿ ಸ್ಥಳಾಂತರ ಕಂಡುಬಂದಿರುವುದರಿಂದ ಶ್ರೇಯಸ್‌ಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎನ್ನಲಾಗುತ್ತಿದೆ.

Story first published: Wednesday, March 24, 2021, 21:30 [IST]
Other articles published on Mar 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X