ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈತ ವಿಶ್ವದ ದಿಗ್ಗಜ ಆಟಗಾರರನ್ನೂ ಮೀರಿಸಲಿದ್ದಾನೆ ಎಂದ ಡ್ಯಾನಿಶ್ ಕನೇರಿಯಾ

Suryakumar Yadav Will Surpass Babar And Kohli For Become Great Batter In T20I: Danish Kaneria

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 36 ಎಸೆತಗಳಲ್ಲಿ 69 ರನ್‌ಗಳನ್ನು ಸಿಡಿಸುವ ಮೂಲಕ ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

IND Vs SA : ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾ ಆಟಗಾರರುIND Vs SA : ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾ ಆಟಗಾರರು

ಸೂರ್ಯಕುಮಾರ್, ವಿರಾಟ್ ಕೊಹ್ಲಿ ಜೊತೆಯಲ್ಲಿ 104 ರನ್‌ಗಳ ಜೊತೆಯಾಟ ಆಡಿದರು. ಟೀಮ್ ಇಂಡಿಯಾ ಆರು ವಿಕೆಟ್‌ಗಳು ಬಾಕಿ ಇರುವಂತೆಯೇ 187 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿದರು. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಸದ್ಯ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ, ಆಸ್ಟ್ರೇಲಿಯಾ ವಿರುದ್ಧದ ಅವರ ಇನ್ನಿಂಗ್ಸ್ ಅವರನ್ನು ಇನ್ನಷ್ಟು ಜನಪ್ರಿಯ ಆಟಗಾರನನ್ನಾಗಿ ಮಾಡಿದೆ.

ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಸೂರ್ಯಕುಮಾರ್ ಬ್ಯಾಟಿಂಗ್ ಬಗ್ಗೆ ಹೊಗಳಿದ್ದಾರೆ ಮತ್ತು ಆತ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಲು ಎಂತಹ ದಿಗ್ಗಜ ಆಟಗಾರರನ್ನೂ ಕೂಡ ಮೀರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲರನ್ನೂ ಮೀರಿಸುವ ಆಟಗಾರ ಅವನು

ಎಲ್ಲರನ್ನೂ ಮೀರಿಸುವ ಆಟಗಾರ ಅವನು

ನಾನು ಇದನ್ನು ಸ್ವಲ್ಪ ಸಮಯದಿಂದ ಹೇಳುತ್ತಿದ್ದೇನೆ, ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು. ಅವರ 360 ಡಿಗ್ರಿ ಬ್ಯಾಟ್ ಮಾಡುವ ಸಾಮರ್ಥ್ಯ ಅತ್ಯುತ್ತಮವಾಗಿದೆ. ಅವರು ಬ್ಯಾಟಿಂಗ್ ಮಾಡುವ ರೀತಿ, ಅದು ಅವರೇ ಘೋಷಿಸುವಂತಿದೆ. ಅವರು ಮೂರನೇ ಟಿ20 ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದರು ಎಂದು ಕನೇರಿಯಾ ಹೇಳಿದ್ದಾರೆ.

ಅವರು ವಿಭಿನ್ನ ರೀತಿಯಲ್ಲಿ ಆಡುತ್ತಾರೆ ಮತ್ತು ಆತ ಖಂಡಿತವಾಗಿಯೂ ದೊಡ್ಡ ಆಟಗಾರರಾಗುತ್ತಾರೆ, ಅವರು ಬ್ಯಾಟಿಂಗ್ ಮಾಡುವ ರೀತಿ, ಅವರು ಇತರ ಎಲ್ಲಾ ಬ್ಯಾಟಿಂಗ್ ದಿಗ್ಗಜರನ್ನು ಜನರು ಹಿಂದಿಕ್ಕುತ್ತಾರೆ. ವಿರಾಟ್ ಕೊಹ್ಲಿ ಸಾಕಷ್ಟು ಸ್ಕೋರ್ ಮಾಡುತ್ತಾರೆ ಬಾಬರ್ ಅಜಂ ಅತ್ಯಂತ ಯಶಸ್ವಿಯಾಗುತ್ತಾನೆ, ಆದರೆ ಸೂರ್ಯಕುಮಾರ್ ಯಾದವ್ ಇವರನ್ನು ಹಿಂದಿಕ್ಕುತ್ತಾರೆ ಎಂದು ಕನೇರಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಆತ ವಿಶ್ವಶ್ರೇಷ್ಠ ಟಿ20 ಬ್ಯಾಟರ್ ಆಗಲು ಹೀಗೆ ಮಾಡಬೇಕಿದೆ ಎಂದ ಸಬಾ ಕರೀಂ

ಕೊಹ್ಲಿಯ ಜವಾಬ್ದಾರಿಯುತ ಆಟಕ್ಕೆ ಮೆಚ್ಚುಗೆ

ಕೊಹ್ಲಿಯ ಜವಾಬ್ದಾರಿಯುತ ಆಟಕ್ಕೆ ಮೆಚ್ಚುಗೆ

ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ವಿಕೆಟ್‌ಗಳನ್ನು ಕಳೆದುಕೊಂಡಿರುವ ನಿರ್ಣಾಯಕ ಸಮಯದಲ್ಲಿ ಸೂರ್ಯಕುಮಾರ್ ಅವರೊಂದಿಗೆ ಸ್ಥಿರ ಜೊತೆಯಾಟವನ್ನು ಕಾಯ್ದುಕೊಂಡಿದ್ದಕ್ಕಾಗಿ ಕೊಹ್ಲಿಯನ್ನು ಕನೇರಿಯಾ ಶ್ಲಾಘಿಸಿದರು.

ವಿರಾಡ್ ಕೊಹ್ಲಿ ಆಡಮ್ ಝಂಪಾ ಅವರ ವಿರುದ್ಧ ಬೇಗನೆ ಔಟಾಗುತ್ತಾರೆ ಎಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ, ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಝಂಪಾ ಬೌಲಿಂಗ್‌ನಲ್ಲಿ ಕೊಹ್ಲಿ ಎರಡು ಭರ್ಜರಿ ಸಿಕ್ಸರ್ ಹೊಡೆದರು. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಬೇಗನೆ ಔಟಾದರೆ, ಕೊಹ್ಲಿ ಮತ್ತು ಯಾದವ್ ಸ್ಥಿರವಾದ ಪ್ರದರ್ಶನ ನೀಡಿದರು. ಈ ಇಬ್ಬರು ಬ್ಯಾಟರ್‌ಗಳ ವಿರುದ್ಧ ಆಸ್ಟ್ರೇಲಿಯಾದ ಬೌಲರ್‌ಗಳ ಆಟ ನಡೆಯಲಿಲ್ಲ, ಅವರು ಈ ರೀತಿ ಬ್ಯಾಟಿಂಗ್ ಮುಂದುವರಿಸಿದರೆ, ಭಾರತವು ಟಿ20 ವಿಶ್ವಕಪ್‌ನಲ್ಲಿ ಖಂಡಿತವಾಗಿಯೂ ಪ್ರತಿ ತಂಡವನ್ನು ಸೋಲಿಸುತ್ತದೆ ಎಂದು ಕನೇರಿಯಾ ಹೇಳಿದರು.

ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ

ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ

187 ರನ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ಆಸರೆಯಾದರು. ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ 69 ರನ್ ಗಳಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 7ನೇ ಅರ್ಧಶತಕವನ್ನು ದಾಖಲಿಸಿದರು. ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ 63 ರನ್ ಗಳಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 33ನೇ ಅರ್ಧಶತಕವನ್ನು ಪೂರೈಸಿದರು.

ಇದಕ್ಕೂ ಮೊದಲು ಟಿಮ್ ಡೇವಿಡ್ ಮತ್ತು ಕ್ಯಾಮರೂನ್ ಗ್ರೀನ್ ಕ್ರಮವಾಗಿ 54 ಮತ್ತು 52 ರನ್ ಗಳಿಸಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 186/7 ಗಳಿಸಲು ನೆರವಾದರು. ಭಾರತದ ಪರ ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು.

ಸೆಪ್ಟೆಂಬರ್ 28 ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲನೇ ಪಂದ್ಯವನ್ನಾಡಲಿದೆ. ತಿರುವನಂತಪುರದ ಗ್ರೀನ್‌ಫೀಲ್ಡ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಯುಜವೇಂದ್ರ ಚಹಾಲ್, ರಿಷಬ್ ಪಂತ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್,

Story first published: Tuesday, September 27, 2022, 16:12 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X