ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ರದ್ದಾಗಿದ್ದು ಆರ್ಥಿಕ ಬಿಕ್ಕಟ್ಟೇನಲ್ಲ: ಗಂಗೂಲಿ

ನವದೆಹಲಿ, ಆಗಸ್ಟ್ 9: ಇಂಡಿಯನ್ ಪ್ರೀಮಿಯರ್ ಲೀಗ್‌ನ ಟೈಟಲ್ ಸ್ಪಾನ್ಸರ್‌ಶಿಪ್‌ನಿಂದ ಚೀನಾ ಮೂಲದ ಮೊಬೈಲ್ ಫೋನ್ ಕಂಪನಿ ವಿವೋ ಹಿಂದೆ ಸರಿದಿರುವುದು ನಮಗೆ ಸಣ್ಣ ಹಿನ್ನಡೆ ಅನ್ನೋದು ಬಿಟ್ಟರೆ ಅದೇನೂ ಆರ್ಥಿಕ ಬಿಕ್ಕಟ್ಟಲ್ಲ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!

ಲಡಾಕ್ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ಬಳಿಕ ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಐಪಿಎಲ್‌ ಟೈಟಲ್ ಪ್ರಾಯೋಜಕತ್ವ ನೀಡುತ್ತಿದ್ದ ವಿವೋ ಜೊತೆಗಿನ ಒಪ್ಪಂದ ಮುರಿದುಕೊಳ್ಳಲು ವಿವೋ ಮತ್ತು ಬಿಸಿಸಿಐ ನಿರ್ಧರಿಸಿತ್ತು.

ಎಂಗೇಜ್ಮೆಂಟ್ ಫೋಟೋ ಹಂಚಿಕೊಂಡ ಸ್ಪಿನ್ನರ್ ಯುಜುವೇಂದ್ರ ಚಾಹಲ್

'ನಾನಿದನ್ನು ಆರ್ಥಿಕ ಬಿಕ್ಕಟ್ಟು ಎಂದು ಕರೆಯಲಾರೆ. ಇದೊಂದು ಸಣ್ಣ ಹಿನ್ನಡೆಯಷ್ಟೆ. ಆಟ, ಆಟಗಾರರು, ಆಡಳಿತ ಇಂಥ ವಿಚಾರಗಳಲ್ಲೆಲ್ಲ ಬಿಸಿಸಿಐ ಬಲಿಷ್ಠ ಅಡಿಪಾಯವನ್ನು ಹೊಂದಿದೆ. ಹೀಗಾಗಿ ಇಂಥ ಹಿನ್ನಡೆಗಳನ್ನೆಲ್ಲಾ ನಿಭಾಯಿಸಲು ಬಿಸಿಸಿಐ ಶಕ್ತವಾಗಿದೆ,' ಎಂದು ಗಂಗೂಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಅದೊಂದೇ ಬಾರಿ ಉದ್ದೇಶಪೂರ್ವಕವಾಗಿ ಆ ತಪ್ಪನ್ನು ಮಾಡಿದ್ದೆ: ಧೋನಿಯನ್ನು ಉದ್ದೇಶಿಸಿ ಅಖ್ತರ್ ಹೇಳಿಕೆ

ಮಾತು ಮುಂದುವರೆಸಿದ ಗಂಗೂಲಿ, 'ಪ್ರತೀ ಸಮಸ್ಯೆಗಳಿಗೂ ಎರಡನೇ ದಾರಿ ಇದ್ದೇ ಇರುತ್ತದೆ. ಸಂವೇದನಾಶೀಲ ಜನ, ಸಂವೇದನಾಶೀಲ ಬ್ರ್ಯಾಂಡ್‌ಗಳು ಮತ್ತು ಸಂವೇದನಾಶೀಲ ಕಾರ್ಪೊರೇಟ್‌ಗಳು ಪ್ಲ್ಯಾನ್ 'ಬಿ'ಗೆ ಕೈ ಜೋಡಿಸಬಲ್ಲದು,' ಎಂದು ಟೀಮ್ ಇಂಡಿಯಾ ಮಾಜಿ ನಾಯಕ ದಾದಾ ಹೇಳಿದ್ದಾರೆ. ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಐಪಿಎಲ್ ನಡೆಯುವುದರಲ್ಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, August 9, 2020, 12:32 [IST]
Other articles published on Aug 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X