ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತೇಶ್ವರ್ ಪೂಜಾರ ಸತತ 2ನೇ ಏಕದಿನ ಕ್ರಿಕೆಟ್ ಶತಕ: 131 ಎಸೆತಗಳಲ್ಲಿ 171 ರನ್

Cheteshwar pujara

ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಶತಕದ ಮೇಲೆ ಶತಕ ದಾಖಲಿಸುತ್ತಿರುವ ಟೀಂ ಇಂಡಿಯಾ ಬ್ಯಾಟರ್ ಚೇತೇಶ್ವರ್ ಪೂಜಾರ ಅಬ್ಬರ ಮುಂದುವರಿದಿದೆ. ಸಸೆಕ್ಸ್ ಪರ ಆಗಸ್ಟ್‌ 12ರಂದು ಶತಕ ದಾಖಲಿಸಿದ್ದ ಪೂಜಾರ, ಮತ್ತೊಂದು ಅಬ್ಬರದ ಶತಕ ದಾಖಲಿಸುವ ಮೂಲಕ ರನ್ ಮಶೀನ್‌ರಂತೆ ಕಾಣಿಸಿಕೊಂಡಿದ್ದಾರೆ.

ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ ಮುಂದುವರಿಸಿದ ಚೇತೇಶ್ವರ ಪೂಜಾರ, ಪ್ರಸ್ತುತ ನಡೆಯುತ್ತಿರು ರಾಯಲ್ ಲಂಡನ್ ಒನ್‌ ಡೇ ಕಪ್‌ನಲ್ಲಿ ಮಿಂಚಿನ ಆಟವಾಡುವ ಮೂಲಕ 131 ಎಸೆತಗಳಲ್ಲಿ ಭರ್ಜರಿ 174ರನ್ ಕಲೆಹಾಕುವ ಮೂಲಕ ತಂಡವು ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದಾರೆ.

103 ಎಸೆತಗಳಲ್ಲಿ ಶತಕ ಸಿಡಿಸಿದ ಪೂಜಾರ

103 ಎಸೆತಗಳಲ್ಲಿ ಶತಕ ಸಿಡಿಸಿದ ಪೂಜಾರ

ತಂಡದ ನಾಯಕ ಟಾಮ್ ಹೈನ್ಸ್‌ ಅನುಪಸ್ಥಿತಿಯಲ್ಲಿ ಸಸೆಕ್ಸ್ ತಂಡವನ್ನ ಮುನ್ನಡೆಸುತ್ತಿರುವ ಚೇತೇಶ್ವರ ಪೂಜಾರ ಸಸೆಕ್ಸ್‌ ತಂಡದ ಸ್ಕೋರ್ 3.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 9 ರನ್ ಕಲೆಹಾಕಿದ್ದ ವೇಳೆಯಲ್ಲಿ ಕ್ರೀಸ್‌ಗಿಳಿದರು. ಸರ್ರೆ ತಂಡವು ನೀಡಿದ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ತಂಡಕ್ಕೆ ನೆರವಾದ ಭಾರತದ ಬ್ಯಾಟರ್ ಮೂರನೇ ವಿಕೆಟ್‌ಗೆ ಟಾಮ್ ಕ್ಲಾರ್ಕ್ ಜೊತೆಗೂಡಿ ದ್ವಿಶತಕದ ಜೊತೆಯಾಟವಾಡಿದರು.

ರಿಷಭ್ ಪಂತ್ vs ಊರ್ವಶಿ ರೌಟೆಲಾ: ಇಬ್ಬರ ಒಟ್ಟು ಆಸ್ತಿ ಮೊತ್ತವೆಷ್ಟು? ಯಾರು ಹೆಚ್ಚು ಸಿರಿವಂತರು?

ಮೂರನೇ ವಿಕೆಟ್‌ ಟಾಮ್ ಜೊತೆಗೆ 205ರನ್‌ಗಳ ಅಮೋಘ ಜೊತೆಯಾಟವಾಡಿದ ಚೇತೇಶ್ವರ್ ಪೂಜಾರ 103 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ಒನ್‌ಡೇ ಟೂರ್ನಿಯಲ್ಲಿ ಸತತ ಎರಡನೇ ಶತಕ ದಾಖಲಿಸಿದರು.

ಒಂದೆಡೆ ಉತ್ತಮ ಸಾಥ್ ನೀಡಿದ್ದ ಟಾಮ್ ಕ್ಲಾರ್ಕ್‌ 104 ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕವೂ ಚೇತೇಶ್ವರ್ ಪೂಜಾರ್ ಭರ್ಜರಿ ಆಟ ಮುಂದುವರಿಯಿತು. 103 ಎಸೆತದಲ್ಲಿ ಮೂರಂಕಿ ಗಡಿದಾಟಿದ ಬಳಿಕ ಪೂಜಾರ ಗೇರ್ ಶಿಫ್ಟ್ ಮಾಡಿದರು.

28 ಎಸೆತಗಳಲ್ಲಿ 74 ರನ್ ಚಚ್ಚಿದ ಟೆಸ್ಟ್ ಸ್ಪೆಷಲಿಸ್ಟ್‌

28 ಎಸೆತಗಳಲ್ಲಿ 74 ರನ್ ಚಚ್ಚಿದ ಟೆಸ್ಟ್ ಸ್ಪೆಷಲಿಸ್ಟ್‌

ಚೇತೇಶ್ವರ್ ಪೂಜಾರ ಈ ಮಟ್ಟಿಗೂ ಅಬ್ಬರದ ಬ್ಯಾಟಿಂಗ್ ಮಾಡಬಹುದು ಎಂಬುದಕ್ಕೆ ಇಂಗ್ಲೆಂಡ್ ಸಾಕ್ಷಿಯಾಗಿದೆ. ಮೂರಂಕಿ ಗಡಿದಾಟಿದ ಬಳಿಕ ಪೂಜಾರ ತನ್ನ ಮತ್ತೊಂದು ರೂಪವನ್ನ ಜಗಕ್ಕೆ ತೆರೆದಿಟ್ಟಿದ್ದಾರೆ. ಕೇವಲ 28 ಎಸೆತಗಳಲ್ಲಿ 74 ರನ್ ಚಚ್ಚಿದ ಚೇತೇಶ್ವರ್ ಪೂಜಾರ 131 ಎಸೆತಗಳಲ್ಲಿ 171 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ. ಇವರ ಅದ್ಭುತ ಇನ್ನಿಂಗ್ಸ್‌ 48 ಓವರ್‌ನಲ್ಲಿ ಕೊನೆಗೊಂಡಿತು. ಈತನ ಅದ್ಭುತ ಆಟದಲ್ಲಿ 20 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಸಹ ಒಳಗೊಂಡಿದ್ದವು.

ಚೇತೇಶ್ವರ್ ಪೂಜಾರ ಅಮೋಘ ಆಟದಿಂದಾಗಿ ಸಸೆಕ್ಸ್‌ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 378ರನ್‌ಗಳ ಬೃಹತ್ ಮೊತ್ತಕಲೆಹಾಕಿತು. ಸರ್ರೆ ಪರ ಕಾನರ್ ಮೆಕೆರ್ ಎರಡು ವಿಕೆಟ್ ಪಡೆದ್ರೆ, ಟಾಮ್ ಲಾವ್ಸ್, ಮ್ಯಾಟ್ ಡನ್, ಅಮರ್ ವಿರ್ಡಿ ಮತ್ತು ಯೂಸೆಫ್ ಮಜಿದ್ ತಲಾ ಒಂದು ವಿಕೆಟ್ ಪಡೆದರು.

ಹೋವ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಸರ್ರೆ ಪಂದ್ಯ ಗೆಲ್ಲಲು 379 ರನ್ ಕಲೆಹಾಕಿದೆ.

ಭಾರತ-ಪಾಕಿಸ್ತಾನ ತಂಡಗಳ ಬಲದಲ್ಲಿ ಈ ಒಂದು ವ್ಯತ್ಯಾಸವಿದೆ ಎಂದ ಪಾಕ್ ಮಾಜಿ ಕ್ರಿಕೆಟರ್

ಆಗಸ್ಟ್‌ 12ರಂದು ಅಬ್ಬರದ ಆಟವಾಡಿದ್ದ ಚೇತೇಶ್ವರ ಪೂಜಾರ

ಆಗಸ್ಟ್‌ 12ರಂದು ಅಬ್ಬರದ ಆಟವಾಡಿದ್ದ ಚೇತೇಶ್ವರ ಪೂಜಾರ

ಈ ಅಮೋಘ ಆಟಕ್ಕೂ ಮೊದಲು ಚೇತೇಶ್ವರ್ ಪೂಜಾರ ಕಳೆದ ಆಗಸ್ಟ್‌ 12ರಂದು ನಡೆದ ಪಂದ್ಯದಲ್ಲೂ ಮಿಂಚಿದ್ದರು. 79 ಎಸೆತಗಳಲ್ಲಿ 107 ರನ್ ಕಲೆಹಾಕಿದ್ದ ಚೇತೇಶ್ವರ ಪೂಜಾರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 2 ಅಮೋಘ ಸಿಕ್ಸರ್ ಒಳಗೊಂಡಿದ್ದವು. ಅದ್ರಲ್ಲೂ ಆತನ ಕೇವಲ ಒಂದು ಓವರ್‌ನಲ್ಲಿ 22 ರನ್ ಸಿಡಿಸಿದ್ದನ್ನ ಮರೆಯಲು ಸಾಧ್ಯವಿಲ್ಲ.

Story first published: Sunday, August 14, 2022, 20:04 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X