ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಯ್ಯದ್ ಮುಷ್ತಾಕ್ ಅಲಿ: ಮುಂಬೈಗೆ ಪಾದಾರ್ಪಣೆ ಮಾಡಿದ ಸಚಿನ್ ಪುತ್ರ

Syed Mushtaq Ali: Arjun Tendulkar makes debut for Mumbai

ಮುಂಬೈ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಮುಂಬೈ ತಂಡಕ್ಕೆ ಪಾದಾರ್ಪಣೆ ಮಾಡಿ 32 ವರ್ಷಗಳ ಬಳಿಕ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಅರ್ಜುನ್, ಮುಂಬೈ ಕ್ಯಾಪ್ ಧರಿಸಿ ಮೈದಾನಕ್ಕಿಳಿದಿದ್ದಾರೆ.

ಆಸ್ಟ್ರೇಲಿಯಾ ಮಾಧ್ಯಮಗಳ ಅಸಲಿಯತ್ತು ಬಿಚ್ಚಿಟ್ಟ ಕೆವಿನ್ ಪೀಟರ್ಸನ್!ಆಸ್ಟ್ರೇಲಿಯಾ ಮಾಧ್ಯಮಗಳ ಅಸಲಿಯತ್ತು ಬಿಚ್ಚಿಟ್ಟ ಕೆವಿನ್ ಪೀಟರ್ಸನ್!

ಶುಕ್ರವಾರ (ಜನವರಿ 15) ನಡೆದ ಮುಂಬೈಯ ಬಾಂದ್ರಾ ಕರ್ತಾ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ನಡೆದ ಮುಂಬೈ ಮತ್ತು ಹರ್ಯಾಣ ನಡುವಿನ ಗ್ರೂಪ್‌ 'ಇ' ಕದನದಲ್ಲಿ 21ರ ಹರೆಯದ ಅರ್ಜುನ್ ತೆಂಡೂಲ್ಕರ್ ಆಡಿದ್ದಾರೆ. 3 ಓವರ್ ಎಸೆದಿದ್ದ ಎಡಗೈ ಮಧ್ಯಮ ವೇಗಿ ಅರ್ಜುನ್ 34 ರನ್ ನೀಡಿ 1 ವಿಕೆಟ್ ಪಡೆದಿದ್ದರು.

11ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿದ್ದ ಅರ್ಜುನ್‌ಗೆ ಬ್ಯಾಟಿಂಗ್‌ ಅವಕಾಶ ಸಿಗಲಿಲ್ಲ. ಬ್ಯಾಟಿಂಗ್‌ಗೆ ಬಂದಿದ್ದರಾದರೂ ಒಂದು ಎಸೆತ ಎದುರಿಸುವ ಮುನ್ನವೇ ಮುಂಬೈ ಎಲ್ಲಾ ವಿಕೆಟ್‌ಗಳನ್ನು ಕಳೆದು ಇನ್ನಿಂಗ್ಸ್ ಮುಗಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಮುಂಬೈ 19.3 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 143 ರನ್ ಬಾರಿಸಿತ್ತು.

ಬ್ರಸ್ಬೇನ್‌ನಲ್ಲೂ ಭಾರತೀಯ ಆಟಗಾರರ ಮೇಲೆ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ: ವರದಿಬ್ರಸ್ಬೇನ್‌ನಲ್ಲೂ ಭಾರತೀಯ ಆಟಗಾರರ ಮೇಲೆ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ: ವರದಿ

ಮುಂಬೈ ಪರ ಯಶಸ್ವಿ ಜೈಸ್ವಾಲ್ 35, ಸರ್ಫರಾಝ್ ಖಾನ್ 30, ಅಥರ್ವಾ ಅಂಕೋಲೆಕರ್ 37 ರನ್ ಗಳಿಸಿದ್ದೇ ಹೆಚ್ಚು. 144 ರನ್ ಗುರಿ ಬೆನ್ನಟ್ಟಿದ ಹರ್ಯಾಣ ತಂಡ, ಅರುಣ್ ಚಾಪ್ರಣ 19, ಹಿಮಾಂಶು ರಾಣಾ ಅಜೇಯ 75, ಶಿವಂ ಚೌಹಾಣ್ ಅಜೇಯ 43 ರನ್‌ನೊಂದಿಗೆ 17.4 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 144ರನ್ ಬಾರಿಸಿ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿತು. ಹರ್ಯಾಣದ ಅರುಣ್ ಚಾಪರ್ಣ 3, ಜಯಂತ್ ಯಾದವ್ 4 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Saturday, January 16, 2021, 9:19 [IST]
Other articles published on Jan 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X