ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಷ್ತಾಕ್ ಅಲಿ ಫೈನಲ್: ತಮಿಳುನಾಡಿಗೆ 181 ರನ್ ಟಾರ್ಗೆಟ್ ನೀಡಿದ ಕರ್ನಾಟಕ

syed-mushtaq-ali-trophy-2019-final-match

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಪಿಯ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಖಾಮುಖಿಯಾಗಿದೆ. ಸೂರತ್‌ನಲ್ಲಿ ನಡೆದ ಫೈನಲ್‌ಪಂದ್ಯದಲ್ಲಿ ತಮಿಳುನಾಡು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಮಿಳುನಾಡಿಗೆ 181 ರನ್‌ಗಳ ಸವಾಲಿನ ಗುರಿ ನೀಡಿದೆ.

ಕರ್ನಾಟಕ ಈ ಪಂದ್ಯದಲ್ಲೂ ಕೂಡ ಎಂದಿನಂತೇ ಸ್ಪೋಟಕ ಆರಂಭವನ್ನೇ ಪಡೆದುಕೊಂಡಿತು. ಓಪನರ್‌ಗಳಾದ ಕೆಎಲ್‌ರಾಹುಲ್(22 ರನ್ 15 ಎಸೆತ) ಮತ್ತು ದೇವ್‌ದತ್‌ ಪಡಿಕಲ್ (32 ರನ್ 23 ಎಸೆತ) ಉತ್ತಮ ಆರಂಭ ಒದಗಿಸಿದರೂ ಬೇಗನೆ ವಿಕೆಟ್ ಕಳೆದುಕೊಂಡರು. ಆರ್. ಅಶ್ವಿನ್ ಮತ್ತು ವಾಶಿಂಗ್ಟನ್ ಸುಂದರ್ ಕ್ರಮವಾಗಿ ಇಬ್ಬರನ್ನೂ ಬಲಿಪಡೆದುಕೊಂಡರು.

ಬಳಿಕ ಬಂದ ಮಯಾಂಕ್ ಅಗರ್ವಾಲ್ ಡಕ್‌ಔಟ್‌ ಆಗಿ ಫೆವಿಲಿಯನ್ ಸೇರಿಕೊಂಡರು. ಈ ಸಂದರ್ಭದಲ್ಲಿ ಜೊತೆಯಾದ ನಾಯಕ ಮನೀಶ್ ಪಾಂಡೆ ಮತ್ತು ರೋಹನ್ ಕದಮ್ ಕರ್ನಾಟಕ ಉತ್ತಮ ಮೊತ್ತಗಳಿಸುವಲ್ಲಿ ಕಾರಣರಾದರು. ಇಬ್ರೂ ಅರ್ಧ ಶತಕದ ಜೊತೆಯಾಟವನ್ನು ನೀಡಿದರು. 28 ಎಸೆತದಲ್ಲಿ 35ರನ್ ಸಿಡಿಸಿದ ರೋಹನ್ ಕದಮ್ ಎಂ.ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು.

ನಾಯಕ ಮನೀಶ್ ಪಾಂಡೆ ಸ್ಪೋಟಕ 60ರನ್(45 ಎಸೆತ) ನೆರವಿನಿಂದ 180 ರನ್ ಗಳಿಸಿ ತಮಿಳುನಾಡಿಗೆ ಸವಾಲಿನ ಗುರಿ ನೀಡಿದೆ.

Story first published: Sunday, December 1, 2019, 20:57 [IST]
Other articles published on Dec 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X