ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜ.10 ರಿಂದ ದೇಶಿ ಕ್ರಿಕೆಟ್ ಹಬ್ಬ ಶುರು SMAT -2021 ಪೂರ್ತಿ ವಿವರ

Syed Mushtaq Ali Trophy 2020-21: Teams, squads, venues and other details in Kannada

ಭಾರತದಲ್ಲಿ ದೇಶಿ ಕ್ರಿಕೆಟ್ ಮತ್ತೆ ಮರಳುತ್ತಿದೆ. ಐಪಿಎಲ್ 14ನೇ ಆವೃತ್ತಿಗೂ ಮುನ್ನ ಭಾರತದಲ್ಲಿ ದೇಶಿ ಕ್ರಿಕೆಟ್ ಹಬ್ಬ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯೋಜಿಸಿದೆ. ಕೊವಿಡ್ 19 ನಡುವೆ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಮುಖ್ಯ ಟೂರ್ನಮೆಂಟ್ ಜನವರಿ 10ರಿಂದ ಆರಂಭವಾಗುತ್ತಿದೆ.

ಸುರೇಶ್ ರೈನಾ, ಇಶಾನ್ ಕಿಶಾನ್, ಕೃನಾಲ್ ಪಾಂಡೆ, ಸೂರ್ಯ ಕುಮಾರ್ ಯಾದವ್ ಸೇರಿದಂತೆ ಹಲವು ಜನಪ್ರಿಯ ಕ್ರಿಕೆಟರ್ ಗಳ ಜೊತೆಗೆ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯುತ್ತಿರುವ ಎಸ್ ಶ್ರೀಶಾಂತ್, ಚಾಂಪಿಯನ್ ತಂಡ ಕರ್ನಾಟಕದ ಪ್ರದರ್ಶನ ಈ ಬಾರಿ ಗಮನ ಸೆಳೆಯುವ ಸಾಧ್ಯತೆಯಿದೆ.

ಹಾಲಿ ಚಾಂಪಿಯನ್ ಕರ್ನಾಟಕ 2018-19 ಹಾಗೂ 2019-20 ರಲ್ಲಿ ಕಪ್ ಎತ್ತಿಹಿಡಿದಿದೆ. ಬರೋಡಾ ಹಾಗೂ ಗುಜರಾತ್ ಕೂಡಾ ಎರಡು ಬಾರಿ ಕಪ್ ಗೆದ್ದಿವೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021
* ಜನವರಿ 10, 2021ರಿಂದ ಟೂರ್ನಮೆಂಟ್ ಆರಂಭ. ಜನವರಿ 31ರಂದು ಫೈನಲ್ ಪಂದ್ಯ.
* ಒಟ್ಟು 38 ತಂಡಗಳಿವೆ. 5 ಎಲೈಟ್ ಗುಂಪು ಹಾಗೂ ಒಂದು ಪ್ಲೇಟ್ ಗುಂಪು
* ಬೆಂಗಳೂರು, ಕೋಲ್ಕತಾ, ವಡೋದರಾ, ಇಂದೋರ್, ಮುಂಬೈ ಹಾಗೂ ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವ್.
* ಅಹಮದಾಬಾದಿನ ಮೊಟೆರಾ ಕ್ರೀಡಾಂಗಣದಲ್ಲಿ ನಾಕೌಟ್ ಪಂದ್ಯಗಳು ನಡೆಯಲಿವೆ.
* ಮೊದಲ ಪಂದ್ಯ 12ಕ್ಕೆ ಆರಂಭ, ಸಂಜೆ ಪಂದ್ಯ7 ಗಂಟೆಗೆ ಶುರು.
* ಇ ಹಾಗೂ ಬಿ ಗುಂಪಿನ ಪಂದ್ಯಗಳು, ನಾಕೌಟ್ ಪಂದ್ಯಗಳು ಸ್ಟಾರ್ ಸ್ಫೋಟ್ಸ್ ನಲ್ಲಿ ನೇರ ಪ್ರಸಾರವಾಗಲಿವೆ.

ಯಾವ ಗುಂಪಿನಲ್ಲಿ ಯಾವ ತಂಡವಿದೆ?:
ಎಲೈಟ್ ಗುಂಪು ಎ: ಜಮ್ಮು ಮತ್ತು ಕಾಶ್ಮೀರ, ಉತ್ತರಪ್ರದೇಶ, ಪಂಜಾಬ್, ಕರ್ನಾಟಕ, ರೈಲ್ವೇಸ್, ತ್ರಿಪುರ

ಎಲೈಟ್ ಗುಂಪು ಬಿ: ಒಡಿಶಾ, ಬೆಂಗಾಳ, ಜಾರ್ಖಂಡ್, ತಮಿಳುನಾಡು, ಹೈದರಾಬಾದ್, ಅಸ್ಸಾಂ.

ಎಲೈಟ್ ಗುಂಪು ಸಿ: ಗುಜರಾತ್,ಮಹಾರಾಷ್ಟ್ರ, ಛತ್ತೀಸ್ ಗಢ, ಹಿಮಾಚಲ ಪ್ರದೇಶ, ಬರೋಡಾ, ಉತ್ತರಾಖಂಡ್.

ಎಲೈಟ್ ಗುಂಪು ಡಿ: ಸರ್ವೀಸಸ್, ಸೌರಾಷ್ಟ್ರ, ವಿದರ್ಭ, ರಾಜಸ್ಥಾನ, ಮಧ್ಯಪ್ರದೇಶ, ಗೋವಾ.

ಎಲೈಟ್ ಗುಂಪು ಇ: ಹರ್ಯಾಣ, ಆಂಧ್ರಪ್ರದೇಶ, ದೆಹಲಿ, ಮುಂಬೈ, ಕೇರಳ, ಪುದುಚೇರಿ

ಪ್ಲೇಟ್ ಗುಂಪು: ಮೇಘಾಲಯ, ಚಂದೀಗಢ, ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ

ತಂಡಗಳು:
ಕರ್ನಾಟಕ: ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ(ಉಪ ನಾಯಕ), ದೇವದತ್ ಪಡಿಕ್ಕಳ್, ರೋಹನ್ ಕದಂ, ಕೆವಿ ಸಿದ್ದಾರ್ಥ, ಕೆಎಲ್ ಶ್ರೀಜಿತ್, ಬಿಆರ್ ಶರತ್, ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೋಪಾಲ್, ಜಗದೀಶ ಸುಚಿತ್, ಪ್ರವೀಣ್ ದುಬೇ, ಅಭಿಮನ್ಯು ಮಿಥುನ್, ಪ್ರಸಿಧ್ ಕೃಷ್ಣ, ಪ್ರತೀಕ್ ಜೈನ್, ವಿ ಕೌಶಿಕ್, ರೋನಿತ್ ಮೋರೆ, ದರ್ಶನ್ ಎಂಬಿ, ಮನೋಜ್ ಭಾಂಡಗೆ, ಶುಭಾಂಗ್ ಹೆಗ್ಡೆ.

ಕರ್ನಾಟಕ ಮೂಲದ ಅಮಿತ್ ವರ್ಮಾ(ಗೋವಾ), ಗಣೇಶ್ ಸತೀಶ್ (ವಿದರ್ಭ), ರಾಬಿನ್ ಉತ್ತಪ್ಪ (ಗೋವಾ), ಕೆಬಿ ಪವನ್(ಮಿಜೋರಾಂ), ಆರ್ ಜೋನಾಥನ್ ಹಾಗೂ ಸ್ಟುವರ್ಟ್ ಬಿನ್ನಿ (ನಾಗಾಲ್ಯಾಂಡ್) ಅವರು ಬೇರೆ ರಾಜ್ಯದ ಪರ ಆಟವಾಡುತ್ತಿದ್ದಾರೆ. ಮಾಜಿ ಕ್ರಿಕೆಟರ್ ದೊಡ್ಡ ಗಣೇಶ್ ಅವರು ಗೋವಾ ತಂಡದ ಕೋಚ್ ಆಗಿದ್ದಾರೆ.

Story first published: Friday, January 8, 2021, 14:22 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X