ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯಗಳು ಸ್ಥಳಾಂತರ?

Syed mushaq ali t20

ರಾಷ್ಟ್ರ ರಾಜಧಾನಿಯು ಗಂಭೀರ ಸ್ವರೂಪದಲ್ಲಿ ವಾಯುಮಾಲಿನ್ಯ ಎದುರಿಸುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ನ. 13) ತುರ್ತು ಸಭೆ ಕರೆದಿದ್ದಾರೆ. ಸೈಯದ್ ಮಷ್ತಾಕ್ ಅಲಿ ಟಿ20 ಟೂರ್ನಿಯ ಪ್ರಿ ಕ್ವಾರ್ಟರ್ ಹಾಗೂ ಕ್ವಾರ್ಟರ್ ಫೈನಲ್ ಪಂದ್ಯಗಳ ಕುರಿತು ವೇಳಾಪಟ್ಟಿ ಪ್ರಕಟಗೊಂಡಿದ್ದು, ದೆಹಲಿಯಲ್ಲೇ ಎಲ್ಲಾ ಪಂದ್ಯಗಳು ನಡೆಯಲಿರುವುದು ಆಟಗಾರರ ಆತಂಕ ಹೆಚ್ಚಿಸಿದೆ.

ವಾಯುಮಾಲಿನ್ಯ ವಿಪರೀತ ಮಟ್ಟಕ್ಕೆ ತಲುಪಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ವಾಹನಗಳು, ಪಟಾಕಿಗಳು, ಕೈಗಾರಿಕೆಗಳು ಹಾಗೂ ಧೂಳಿನಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಲು ಎರಡು ದಿನಗಳ ಲಾಕ್‌ಡೌನ್ ಘೋಷಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯವನ್ನು ಪ್ರಸ್ತುತ "ತೀವ್ರ" ಮಟ್ಟದಿಂದ ತಗ್ಗಿಸಲು ಕೆಲವು ತಕ್ಷಣದ ಕ್ರಮಗಳನ್ನು ಪರಿಗಣಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ತಿಳಿಸಿದೆ.

ಕೋವಿಡ್-19 ಲಸಿಕೆ ಪಡೆಯಲು ಹಿಂಜರಿದ ಮುರಳಿ ವಿಜಯ್: ತಮಿಳುನಾಡು ಟೀಮ್‌ನಿಂದ ಹೊರಕ್ಕೆ!ಕೋವಿಡ್-19 ಲಸಿಕೆ ಪಡೆಯಲು ಹಿಂಜರಿದ ಮುರಳಿ ವಿಜಯ್: ತಮಿಳುನಾಡು ಟೀಮ್‌ನಿಂದ ಹೊರಕ್ಕೆ!

ಈ ಹಿನ್ನೆಲೆಯಲ್ಲಿ ಇಷ್ಟು ಹದಗೆಟ್ಟಿರುವ ನಗರದಲ್ಲಿ ನಿಜಕ್ಕೂ ಟೂರ್ನಮೆಂಟ್‌ನ ಪಂದ್ಯಗಳು ನಡೆಯಬೇಕಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದ್ದು, ಆಟಗಾರರು ಸಹ ವಿಷಪೂರಿತ ಗಾಳಿ ಸೇವನೆ ಮಾಡಿಕೊಂಡು ಪಂದ್ಯಗಳನ್ನಾಡಲು ಹಿಂದೇಟು ಹಾಕಿದ್ದಾರೆ.

ದೆಹಲಿಯಲ್ಲಿ 10 ಪಂದ್ಯಗಳು ನಡೆಯಲಿವೆ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಒಟ್ಟು 10 ಪಂದ್ಯಗಳು ನಡೆಯಲಿವೆ. 3 ಪ್ರಿ-ಕ್ವಾರ್ಟರ್ ಫೈನಲ್ , 4 ಕ್ವಾರ್ಟರ್ ಫೈನಲ್ , 2 ಸೆಮಿ-ಫೈನಲ್ ಮತ್ತು 1 ಫೈನಲ್. ಕ್ವಾರ್ಟರ್ ಫೈನಲ್‌ನ ಮೊದಲ ಪಂದ್ಯವು ಪ್ರೀ ಕ್ವಾರ್ಟರ್ ಫೈನಲ್ ರೂಪದಲ್ಲಿ ಮಹಾರಾಷ್ಟ್ರ ಮತ್ತು ವಿದರ್ಭ ನಡುವೆ ನಡೆಯಲಿದೆ. ಎರಡನೇ ಸೆಮಿಫೈನಲ್ ಹಿಮಾಚಲ ಪ್ರದೇಶ ಮತ್ತು ಕೇರಳ ನಡುವೆ ನಡೆಯಲಿದೆ. ಮೂರನೇ ಪ್ರೀ ಕ್ವಾರ್ಟರ್ ಫೈನಲ್ ಕರ್ನಾಟಕ ಮತ್ತು ಸೌರಾಷ್ಟ್ರ ನಡುವೆ ನಡೆಯಲಿದೆ. ಎಲ್ಲಾ ಮೂರು ಪಂದ್ಯಗಳು ನವೆಂಬರ್ 16 ರಿಂದ ನಡೆಯಲಿವೆ.

ಸೆಮಿಫೈನಲ್ ನಂತರ ಒಂದು ದಿನದ ವಿರಾಮವಿದೆ. ಇದರ ನಂತರ ನವೆಂಬರ್ 18 ರಿಂದ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಪ್ರಿ-ಕ್ವಾರ್ಟರ್-ಫೈನಲ್‌ನಿಂದ ಕ್ವಾರ್ಟರ್-ಫೈನಲ್‌ವರೆಗೆ ಮೂರು ತಂಡಗಳಾದ ಬಂಗಾಳ, ಗುಜರಾತ್ ಮತ್ತು ಹೈದರಾಬಾದ್ ತಂಡಗಳು ಭಾಗವಹಿಸಲಿವೆ. ಅವರು ಸೆಮಿಫೈನಲ್‌ಗೆ ಟಿಕೆಟ್‌ಗಾಗಿ ಹೋರಾಡುತ್ತಿರುವುದನ್ನು ಕಾಣಬಹುದು. ಟೂರ್ನಿಯ ಎರಡನೇ ಸೆಮಿಫೈನಲ್‌ಗೆ ಲೈನ್ ಅಪ್ ಸಿದ್ಧವಾಗಿದ್ದು, ನವೆಂಬರ್ 18 ರಂದು ಮಧ್ಯಾಹ್ನ 1 ಗಂಟೆಗೆ ಗುಜರಾತ್ ಮತ್ತು ಹೈದರಾಬಾದ್ ಮುಖಾಮುಖಿಯಾಗಲಿವೆ.

ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ದೆಹಲಿಯಲ್ಲೇ ನಡೆಯಲಿದೆ!
ದೆಹಲಿಯ ವಾಯುಮಾಲಿನ್ಯ ತೀವ್ರ ಸ್ವರೂಪ ಒಂದೆಡೆಯಾದ್ರೆ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಗಳಷ್ಟೇ ಅಲ್ಲದೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಇಲ್ಲಿಯೇ ನಡೆಯಲಿದೆ. ಮೊದಲ ಸೆಮಿಫೈನಲ್ ಪಂದ್ಯ ನವೆಂಬರ್ 20ರಂದು ಬೆಳಿಗ್ಗೆ 8.30ರ ನಡೆದರೆ, ಎರಡನೇ ಸೆಮಿಫೈನಲ್ ಪಂದ್ಯ ಅದೇ ದಿನ ಮಧ್ಯಾಹ್ನ 1 ಗಂಟೆಗೆ ಆರಂಭಗೊಳ್ಳಲಿದೆ.

ಇನ್ನು ಫೈನಲ್ ಪಂದ್ಯವು ನವೆಂಬರ್ 22ರಂದು ಸೋಮವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಾರಂಭಗೊಳ್ಳಲಿದೆ.

Story first published: Saturday, November 13, 2021, 18:49 [IST]
Other articles published on Nov 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X