ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸುದೀರ್ಘ 7 ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳಿದ ಶ್ರೀಶಾಂತ್: ವಿಡಿಯೋ

Syed Mushtaq Ali Trophy: After 7 long years, Sreesanth is back in to cricket

ತಿರುವನಂತಪುರಂ: ಮ್ಯಾಚ್ ಫಿಕ್ಸಿಂಗ್‌ ಆರೋಪದಡಿಯಲ್ಲಿ ಸುಮಾರು 7 ವರ್ಷಗಳ ಕಾಲ ನಿಷೇಧಿಸಲ್ಪಟ್ಟು ಕ್ರಿಕೆಟ್‌ನಿಂದ ದೂರ ಉಳಿದಿದ್ದ ಎಸ್‌ ಶ್ರೀಶಾಂತ್ ಮತ್ತು ಕ್ರಿಕೆಟ್‌ಗೆ ಮರಳಿದ್ದಾರೆ. ಮುಂಬರಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಶ್ರೀಶಾಂತ್ ಅವರು ಕೇರಳ ತಂಡದ ಪರ ಆಡಲಿದ್ದಾರೆ.

3ನೇ ಟೆಸ್ಟ್‌ಗೆ ಆಸೀಸ್ ತಂಡ ಪ್ರಕಟ, ಭಾರತದಲ್ಲೂ ಪ್ರಮುಖ ಬದಲಾವಣೆ!3ನೇ ಟೆಸ್ಟ್‌ಗೆ ಆಸೀಸ್ ತಂಡ ಪ್ರಕಟ, ಭಾರತದಲ್ಲೂ ಪ್ರಮುಖ ಬದಲಾವಣೆ!

ಶ್ರೀಶಾಂತ್‌ ಅವರು ಕೇರಳ ಕ್ರಿಕೆಟ್‌ ತಂಡದಲ್ಲಿ ಆಡೋದು ಪಕ್ಕಾ ಆಗಿದೆ. ಹೀಗಾಗಿ ಕೇರಳ ಅಭ್ಯಾಸ ತಂಡದಲ್ಲಿ ಶ್ರೀಶಾಂತ್‌ ಕೂಡ ಸೇರಿಕೊಂಡಿದ್ದಾರೆ. ಡಿಸೆಂಬರ್ 30ರ ಬುಧವಾರ ಶ್ರೀಶಾಂತ್ ಅವರನ್ನು ಕೇರಳ ತಂಡಕ್ಕೆ ಕ್ಯಾಪ್‌ ನೀಡಿ ಬರ ಮಾಡಿಕೊಳ್ಳಲಾಗಿದೆ. ಹೀಗಾಗಿ ಶ್ರೀಶಾಂತ್‌ಗೆ 2020ರ ವರ್ಷ ಅವಿಸ್ಮರಣೀಯವೆನಿಸಲಿದೆ.

ಯುವರಾಜ್ ಸಿಂಗ್ ಕಮ್‌ಬ್ಯಾಕ್‌ ಆಲೋಚನೆಗೆ ತಣ್ಣೀರೆರಚಿದ ಬಿಸಿಸಿಐ!ಯುವರಾಜ್ ಸಿಂಗ್ ಕಮ್‌ಬ್ಯಾಕ್‌ ಆಲೋಚನೆಗೆ ತಣ್ಣೀರೆರಚಿದ ಬಿಸಿಸಿಐ!

2013ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ ಆರೋಪದಲ್ಲಿ ಶ್ರೀಶಾಂತ್ ಆಜೀವ ನಿಷೇಧಕ್ಕೀಡಾಗಿದ್ದರು. ಆದರೆ ಆ ಬಳಿಕ ಮತ್ತೆ ವಿಚಾರಣೆ ವೇಳೆ ಶ್ರೀಶಾಂತ್ ನಿಷೇಧ ಕಡಿತಗೊಳಿಸಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಶ್ರೀಶಾಂತ್‌ ಮೇಲಿನ ನಿಷೇಧ ಕೊನೆಗೊಂಡಿತ್ತು.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಜನವರಿ 10ಕ್ಕೆ ಆರಂಭಗೊಂಡು ಜನವರಿ 31ರ ವರೆಗೆ ನಡೆಯಲಿದೆ. ಕೇರಳ ತಂಡದಲ್ಲಿ ಶ್ರೀಶಾಂತ್ ಅವರು ಸಂಜು ಸ್ಯಾಮ್ಸನ್ ನಂತ ಆಟಗಾರರ ಜೊತೆ ಮೈದಾನಕ್ಕಿಳಿಯಲಿದ್ದಾರೆ. 37ರ ಹರೆಯದ ಶ್ರೀಶಾಂತ್‌ 2023ರ ವಿಶ್ವಕಪ್‌ನಲ್ಲಿ ಭಾಗವಹಿಸೋದೇ ನನ್ನ ಅಂತಿಮ ಗುರಿ ಎಂದಿದ್ದಾರೆ.

Story first published: Thursday, December 31, 2020, 10:26 [IST]
Other articles published on Dec 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X