ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ರೋಚಕ ಗೆಲುವು

Syed Mushtaq Ali Trophy-Karnataka won against Uttar Pradesh

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೋಮವಾರ ಉತ್ತರ ಪ್ರದೇಶ ಹಾಗೂ ಕರ್ನಾಟಕ ತಂಡಗಳು ಮುಖಾಮುಖಿಯಾಗಿದ್ದು ಕರ್ನಾಟಕ ತಂಡ 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ ಉತ್ತರ ಪ್ರದೇಶವನ್ನು 132 ರನ್‌ಗಳಿಗೆ ಕಟ್ಟಿ ಹಾಕಲು ಯಶಸ್ವಿಯಾಯಿತು. ಅದ್ಭುತ ಆರಂಭದ ಹೊರತಾಗಿಯೂ ಉತ್ತರ ಪ್ರದೇಶ ತಂಡ ದೊಡ್ಡ ಮೊತ್ತದ ಗುರಿ ನೀಡಲು ವಿಫಲವಾಯಿತು.

ಉತ್ತರ ಪ್ರದೇಶ ತಂಡದ ಆರಂಭಿಕ ಆಟಗಾರರಾದ ಅಭಿಷೇಕ್ ಗೋಸ್ವಾಮಿ 47 ರನ್ ಹಾಗೂ ಕರಣ್ ಶರ್ಮಾ 41 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 8.2 ಓವರ್‌ಗಳಲ್ಲಿ 69 ರನ್‌ಗಳನ್ನು ಪೇರಿಸುವಲ್ಲಿ ಯಶಸ್ವಿಯಾಯಿತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಉತ್ತರ ಪ್ರದೇಶ ಕುಸಿತದ ಹಾಡಿ ಹಿಡಿಯಿತು. ಬಳಿಕ ಬಂದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಎರಡಂಕಿ ದಾಟಲು ವಿಫಲರಾದರು.

ನೀವೂ ಕೋಟ್ಯಾಧಿಪತಿಯಾಗಬಹುದು; ಹಣ ಗಳಿಸಲು ಇಲ್ಲಿದೆ ಸುಲಭ ದಾರಿ!ನೀವೂ ಕೋಟ್ಯಾಧಿಪತಿಯಾಗಬಹುದು; ಹಣ ಗಳಿಸಲು ಇಲ್ಲಿದೆ ಸುಲಭ ದಾರಿ!

ಕರ್ನಾಟಕ ತಂಡದ ಪರವಾಗಿ ಸುಜಿತ್ ಹಾಗೂ ಪ್ರವೀಣ್ ದುಬೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಸುಜಿತ್ 4 ಓವರ್‌ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದರೆ ಪ್ರವೀಣ್ ದುಬೆ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಈ ಮೂಲಕ ಉತ್ತರ ಪ್ರದೇಶವನ್ನು 132 ರನ್‌ಗಳಿಗೆ ನಿಯಂತ್ರಿಸಿದರು.

ಉತ್ತರ ಪ್ರದೇಶ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕಕ್ಕೆ ದೇವದರ್ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರು. 19 ಎಸೆತಗಳಲ್ಲಿ ಪಡಿಕ್ಕಲ್ 34 ರನ್ ಗಳಿಸಿದರು. ಇನ್ನೋರ್ವ ಆರಂಭಿಕ ಆಟಗಾರ ರೋಹನ್ ಕದಮ್ 5 ರನ್ ಗಳಿಸಲಷ್ಟೇ ಶಕ್ತರಾದರು. ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ ವಿಕೆಟ್ ಒಪ್ಪಿಸಿದ ಬಳಿಕ ಕೆಎಲ್ ಶ್ರೀಜಿತ್ ಕೂಡ ಶೂನ್ಯಕ್ಕೆ ಫೆವಿಲಿಯನ್ ಸೇರಿಕೊಂಡ ಬಳಿಕ ಕರ್ನಾಟಕ ತಂಡದ ನಾಯಕ ಕರುಣ್ ನಾಯಯರ್ ಹಾಗೂ ಅನಿರುಧ್ ಎಚ್ಚರಿಕೆಯ ಆಟವನ್ನು ಆಡಿದರು.

ಬಳಿಕ ಶ್ರೇಯಸ್ ಗೋಪಾಲ್ ಕ್ರೀಸ್‌ಗೆ ಇಳಿದು ಸ್ಪೋಟಕ ಆಟವನ್ನು ಪ್ರದರ್ಶಿಸಿದರು. 28 ಎಸೆತಗಳಲ್ಲಿ 47 ರನ್ ಸಿಡಿಸುವ ಮೂಲಕ ಶ್ರೇಯಸ್ ಗೋಪಾಲ್ ಇನ್ನೂ ಮೂರು ಎಸೆತಗಳು ಇರುವಂತೆ ಗೆಲುವನ್ನು ತಂದೀಯುವಲ್ಲಿ ಯಶಸ್ವಿಯಾದರು. ಈ ಮೂಲಕ ಕರ್ನಾಟಕ ಉತ್ತರ ಪ್ರದೇಶ ವಿರುದ್ಧ ಗೆದ್ದು ಬೀಗಿದೆ.

Story first published: Tuesday, January 19, 2021, 9:44 [IST]
Other articles published on Jan 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X