ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯ್ಯದ್ ಮುಷ್ತಾಕ್ ಅಲಿ: ಕರುಣ್ ಅರ್ಧ ಶತಕ, ಬಿಹಾರ ಮಣಿಸಿದ ಕರ್ನಾಟಕ

Syed Mushtaq Ali Trophy: Karnataka won by 9 wickets

ವಿಶಾಖಪಟ್ನಂ, ನವೆಂಬರ್ 16: ವಿಶಾಖಪಟ್ನಂನಲ್ಲಿರುವ ಡಾ. ವೈಎಸ್ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20, ರೌಂಡ್ 6, ಗ್ರೂಪ್ 'ಎ' ಪಂದ್ಯದಲ್ಲಿ ಕರ್ನಾಟಕ ತಂಡ, ಬಿಹಾರ ವಿರುದ್ಧ 9 ವಿಕೆಟ್ ಸುಲಭ ಜಯಗಳಿಸಿದೆ.

ಸೆಹ್ವಾಗ್ ಶೈಲೀಲಿ ಸಿಕ್ಸ್ ಚಚ್ಚಿ ದ್ವಿಶತಕ ಬಾರಿಸಿ ದಾಖಲೆಗಳ ಬರೆದ ಮಯಾಂಕ್!ಸೆಹ್ವಾಗ್ ಶೈಲೀಲಿ ಸಿಕ್ಸ್ ಚಚ್ಚಿ ದ್ವಿಶತಕ ಬಾರಿಸಿ ದಾಖಲೆಗಳ ಬರೆದ ಮಯಾಂಕ್!

ಕರುಣ್ ನಾಯಕರ್ ಅರ್ಧ ಶತಕ ಮತ್ತು ದೇವದತ್ ಪಡಿಕ್ಕಲ್ ದಿಟ್ಟ ಬ್ಯಾಟಿಂಗ್, ಬೌಲರ್‌ಗಳ ನೆರವಿನಿಂದ ರಾಜ್ಯ ತಂಡ 4ನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಅಂಕಪಟ್ಟಿಯಲ್ಲಿ ಗ್ರೂಪ್ 'ಬಿ'ನಲ್ಲಿರುವ ಕರ್ನಾಟಕ 2ನೇ ಸ್ಥಾನದಲ್ಲಿದೆ.

ಇಂದೋರ್‌ನಲ್ಲಿ ಸೊನ್ನೆ ಸುತ್ತಿದ ದಾಖಲೆವೀರ : ಕೊಹ್ಲಿ ಡಕ್‌ಔಟ್‌ ಬಗ್ಗೆ ನಿಮಗೆಷ್ಟು ಗೊತ್ತು?ಇಂದೋರ್‌ನಲ್ಲಿ ಸೊನ್ನೆ ಸುತ್ತಿದ ದಾಖಲೆವೀರ : ಕೊಹ್ಲಿ ಡಕ್‌ಔಟ್‌ ಬಗ್ಗೆ ನಿಮಗೆಷ್ಟು ಗೊತ್ತು?

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಬರೋಡಾ ತಂಡ, ಬಬುಲ್ ಕುಮಾರ್ 41, ಎಂಡಿ ರಹಮತುಲ್ಲ 23, ಅಶುತೋಷ್ ಅಮನ್ 21 ಗಮನಾರ್ಹ ರನ್ ಕೊಡುಗೆಯೊಂದಿಗೆ 19.3 ಓವರ್‌ಗೆ ಸರ್ವ ಪತನ ಕಂಡು, 106 ರನ್ ಪೇರಿಸಿತು. ಕರ್ನಾಟಕದ ರೋನಿತ್ ಮೋರೆ, ವಿ ಕೌಶಿಕ್, ಪ್ರವೀಣ್ ದೂಬೆ ಮತ್ತು ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು. ಜಗದೀಶ್ ಸುಚಿತ್‌ಗೆ 1 ವಿಕೆಟ್ ಲಭಿಸಿತು.

ಅಫ್ಘಾನಿಸ್ತಾನ ಎದುರು 30 ರನ್‌ನಿಂದ ಗೆದ್ದು ದಾಖಲೆ ಬರೆದ ವೆಸ್ಟ್ ಇಂಡೀಸ್!ಅಫ್ಘಾನಿಸ್ತಾನ ಎದುರು 30 ರನ್‌ನಿಂದ ಗೆದ್ದು ದಾಖಲೆ ಬರೆದ ವೆಸ್ಟ್ ಇಂಡೀಸ್!

ಚೇಸಿಂಗ್‌ಗೆ ಇಳಿದ ಕರ್ನಾಟಕ, ಕೆಎಲ್ ರಾಹುಲ್ 2, ದೇವದತ್ ಪಡಿಕ್ಕಲ್ 37 (28), ಕರುಣ್ ನಾಯರ್ 65 (36) ರನ್‌ನೊಂದಿಗೆ 11.2 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 107 ರನ್ ಮಾಡಿತು. ಸದ್ಯ ಅಂಕಪಟ್ಟಿಯಲ್ಲಿ 6ರಲ್ಲಿ 5 ಪಂದ್ಯ ಗೆದ್ದಿರುವ ಬರೋಡಾ, 5ರಲ್ಲಿ 4 ಪಂದ್ಯ ಗೆದ್ದಿರುವ ಕರ್ನಾಟಕ ಮತ್ತು 5ರಲ್ಲಿ 3 ಪಂದ್ಯ ಗೆದ್ದಿರುವ ಆಂಧ್ರ ಮೊದಲ 3 ಸ್ಥಾನಗಳಲ್ಲಿವೆ.

Story first published: Saturday, November 16, 2019, 11:09 [IST]
Other articles published on Nov 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X