ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋವಿಡ್-19 ಲಸಿಕೆ ಪಡೆಯಲು ಹಿಂಜರಿದ ಮುರಳಿ ವಿಜಯ್: ತಮಿಳುನಾಡು ಟೀಮ್‌ನಿಂದ ಹೊರಕ್ಕೆ!

Murali vijay

ತಮಿಳುನಾಡಿದ ಹಿರಿಯ ಅನುಭವಿ ಕ್ರಿಕೆಟಿಗ ಮುರಳಿ ವಿಜಯ್ ಕೋವಿಡ್-19 ಲಸಿಕೆ ಪಡೆಯುವುದಕ್ಕೆ ಹಿಂದೇಟು ಹಾಕಿದ್ದಕ್ಕಾಗಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಿಂದ ಹೊರಬಿದ್ದಿದ್ದಾರೆ.

ಟೀಮ್ ಇಂಡಿಯಾ ಪರ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಬಲಗೈ ಬ್ಯಾಟ್ಸ್‌ಮನ್ ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಲು ಹಿಂಜರಿದರ ಜೊತೆಗೆ, ಬಬಲ್ ಲೈಫ್‌ಗೆ ಒಳಗಾಗಲು ಬಯಸದ ಕಾರಣ ನಿಯಮದಂತೆ ಮುಂದಿನ ಪಂದ್ಯಗಳಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ.

ಬಿಸಿಸಿಐ ನಿಯಮ ಏನು ಹೇಳಲಿದೆ?

ಬಿಸಿಸಿಐ ನಿಯಮ ಏನು ಹೇಳಲಿದೆ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಬಿಡುಗಡೆ ಮಾಡಿದೆ. ಇದನ್ನು ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಜಾರಿಗೆ ತರಲು ಆದೇಶಿಸಿದೆ. ಹೋಗಾಗಿ ಬಿಸಿಸಿಐ ಅಡಿಯಲ್ಲಿ ನಡೆಯುವ ಯಾವುದೇ ಟೂರ್ನಿಗಳು ಪ್ರಾರಂಭಗೊಳ್ಳುವ ಮೊದಲು ಆಟಗಾರನು ಒಂದು ವಾರಗಳ ಕಾಲ ಬಯೋ ಬಬಲ್‌ನಲ್ಲಿ ಇರಬೇಕು. ಇದರ ಜೊತೆಗೆ ಆತ ತಂಡದ ಭಾಗವಾಗಿರುವವರೆಗೆ ಬಬಲ್‌ನಲ್ಲಿ ಉಳಿಯಬೇಕು ಎಂದು ಕಡ್ಡಾಯಗೊಳಿಸಿದೆ.

ಪವರ್‌ಫುಲ್ ತಂಡವನ್ನ ಫೈನಲ್‌ನಲ್ಲಿ ಕಣಕ್ಕಿಳಿಸಲು ಯೋಜಿಸಿದೆ ನ್ಯೂಜಿಲೆಂಡ್: ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ

SOP ನಿಯಮ ಪಾಲಿಸಲು ಹಿಂಜರಿದ ವಿಜಯ್

SOP ನಿಯಮ ಪಾಲಿಸಲು ಹಿಂಜರಿದ ವಿಜಯ್

ಬಿಸಿಸಿಐಯ SOPಗಳನ್ನು ಅನುಸರಿಸಲು ಮುರಳಿ ವಿಜಯ್ ಉತ್ಸುಕರಾಗಿಲ್ಲ ಮತ್ತು ಇದರ ಪರಿಣಾಮವಾಗಿ, 37 ವರ್ಷ ವಯಸ್ಸಿನ ಅವರನ್ನು ತಮಿಳುನಾಡು ಪರ ಪಂದ್ಯಾವಳಿಗೆ ಆಯ್ಕೆ ಮಾಡಲು ಪರಿಗಣಿಸಲಾಗಿಲ್ಲ. ಪರಿಣಾಮ ಸೈಯದ್ ಅಲಿ ಮುಷ್ತಾಕ್ ಟೂರ್ನಮೆಂಟ್‌ನ ಮುಂದಿನ ಪಂದ್ಯಾವಳಿಗೆ ಅವರು ಭಾಗವಹಿಸುವಂತಿಲ್ಲ.

ಇದು ಆತನ ವೈಯಕ್ತಿಕ ನಿರ್ಧಾರ

ಇದು ಆತನ ವೈಯಕ್ತಿಕ ನಿರ್ಧಾರ

"ಇದು ಅವರ ವೈಯಕ್ತಿಕ ನಿರ್ಧಾರ. ಅವರು ಲಸಿಕೆ ತೆಗೆದುಕೊಳ್ಳಲು ಹಿಂಜರಿದಿದ್ದಾರೆ. ಬಿಸಿಸಿಐ SOP ಹೇಳುವಂತೆ, ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಆಟಗಾರನು ಒಂದು ವಾರದವರೆಗೆ ಬಯೋ ಬಬಲ್‌ನಲ್ಲಿ ಇರಬೇಕು ಮತ್ತು ನಂತರ ಅವನು ತಂಡದೊಂದಿಗೆ ಇರುವವರೆಗೆ ಆತ ಈ ನಿಯಮಕ್ಕೆ ಒಳಗಾಗಿರುತ್ತಾನೆ. ಆದರೆ ವಿಜಯ್ ಅದಕ್ಕೆ ಹೆಚ್ಚು ಒಲವು ತೋರಿಲ್ಲದ ಪರಿಣಾಮ ತಮಿಳುನಾಡು ಆಯ್ಕೆಗಾರರು ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ'' ಎಂದು ಮೂಲಗಳು ತಿಳಿಸಿವೆ.

''ಅಪ್ಪ, ನಾನು ಭಾರತದ ಪರ ಆಡ್ಬೇಕು'' : ಮಗನ ಮಹಾದಾಸೆಯನ್ನ ಬಿಚ್ಚಿಟ್ಟ ಉಮ್ರಾನ್ ಮಲಿಕ್ ತಂದೆ

ಕೋವಿಡ್-19 ಲಸಿಕೆ ತೆಗೆದುಕೊಂಡ್ರು ತಂಡಕ್ಕೆ ಸೇರಿಸಲ್ಲ!

ಕೋವಿಡ್-19 ಲಸಿಕೆ ತೆಗೆದುಕೊಂಡ್ರು ತಂಡಕ್ಕೆ ಸೇರಿಸಲ್ಲ!

ಮೂಲಗಳ ಪ್ರಕಾರ ಬಿಸಿಸಿಐ ನಿಯಮಗಳನ್ನು ಪಾಲಿಸಲು ನಿರಾಕರಿಸಿದ ಮುರಳಿ ವಿಜಯ್ ಕೋವಿಡ್-19 ಲಸಿಕೆ ಪಡೆಯಲು ಒಪ್ಪಿದರೂ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳದೆ ಇರುವ ಕುರಿತು ತಮಿಳುನಾಡು ಆಯ್ಕೆಗಾರರು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಇನ್ನು ಮುರಳಿ ವಿಜಯ್ ಹೆಸರನ್ನು ಆಯ್ಕೆಗಾರರ ಸಭೆಯಲ್ಲಿ ಚರ್ಚಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು 37 ವರ್ಷದ ಮುರಳಿ ವಿಜಯ್ ಅವರನ್ನು ಮತ್ತೆ ಆಯ್ಕೆಗೆ ಪರಿಗಣಿಸಲು ಅವರ ಫಿಟ್ನೆಸ್ ಸಾಭೀತುಪಡಿಸಬೇಕು ಎಂದು ಹೇಳುವ ಮೂಲಕ ತೀರ್ಮಾನ ತೆಗೆದುಕೊಳ್ಳಲಾಗಿದೆ.

"ಆಯ್ಕೆದಾರರು ಆತನ ಬಗ್ಗೆ ಆಯ್ಕೆ ಸಭೆಯಲ್ಲಿ ಚರ್ಚಿಸಿಲ್ಲ ಮತ್ತು ಅವರು ದೇಶೀಯ ಋತುವಿನ ಮೊದಲು ಆಯ್ಕೆ ಮಾಡಿದ ತಮಿಳುನಾಡು ಸಂಭಾವ್ಯರ ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿಲ್ಲ. ಆದ್ದರಿಂದ ಆತ ಏನಾದರೂ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ಸಿದ್ಧನಾಗಿದ್ದರೂ ಮತ್ತು ಪುನರಾಗಮನವನ್ನು ಮಾಡಲು ಬಯಸಿದರೂ, ಅದು ಅವನಿಗೆ ಕಷ್ಟಕರ ಹಾದಿಯಾಗಿದೆ. ಏಕೆಂದರೆ ಅವನನ್ನು ತಕ್ಷಣವೇ ಆಯ್ಕೆ ಮಾಡಲಾಗುವುದಿಲ್ಲ. ಅವರು ಮತ್ತೊಮ್ಮೆ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕು ಮತ್ತು ತಮಿಳುನಾಡಿಗೆ ಮತ್ತೆ ಆಯ್ಕೆಯಾಗಲು ಅವರ ಬೆಲ್ಟ್ ಅಡಿಯಲ್ಲಿ ಕೆಲವು ಪಂದ್ಯಗಳನ್ನು ಹೊಂದಿರಬೇಕು, "ಎಂದು ಮೂಲಗಳು ತಿಳಿಸಿವೆ.

ನಾನು ಬ್ಯಾಟಿಂಗ್ ಮಾಡಬಲ್ಲೇ ಎಂದು BCCI ಕಾಲೆಳೆದ ಜಯದೇವ್ ಉನಾದ್ಕಟ್: ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗದ ಕುರಿತು ಅಸಮಾಧಾನ

Story first published: Saturday, November 13, 2021, 18:47 [IST]
Other articles published on Nov 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X