ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Syed Mushtaq Ali: ಐಪಿಎಲ್ ಹರಾಜಿಗೂ ಮುನ್ನ ಮಿಂಚಿದ 5 ಆಟಗಾರರು

Syed Mushtaq Ali Trophy: Players who impressed before IPL auction

ಬೆಂಗಳೂರು, ಡಿಸೆಂಬರ್ 3: ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20, ವಿಜಯ್ ಹಜಾರೆ ಮತ್ತು ರಣಜಿ ಟ್ರೋಫಿ ಪಂದ್ಯಗಳು, ಇಂಡಿಯನ್ ಪ್ರೀಮಿಯರ್ ಲೀಗ್‌ಗೂ (ಐಪಿಎಲ್) ಮುನ್ನ ದೇಸಿ ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುತ್ತಿವೆ. ಐಪಿಎಲ್ ಆಟಗಾರರ ಹರಾಜಿನ ವೇಳೆ ಪ್ರತಿಭಾವಂತ ಆಟಗಾರರನ್ನು ಆರಿಸಲೂ ಈ ದೇಸಿ ಟೂರ್ನಿಗಳು ನೆರವಾಗುತ್ತಿವೆ.

ಈ ತಂಡ ಮಾತ್ರ ಆಸ್ಟ್ರೇಲಿಯಾ ನೆಲದಲ್ಲಿ ಅದಕ್ಕೆ ಚಾಲೆಂಜ್ ಮಾಡಲು ಸಾಧ್ಯ: ಮೈಕಲ್ ವಾನ್ಈ ತಂಡ ಮಾತ್ರ ಆಸ್ಟ್ರೇಲಿಯಾ ನೆಲದಲ್ಲಿ ಅದಕ್ಕೆ ಚಾಲೆಂಜ್ ಮಾಡಲು ಸಾಧ್ಯ: ಮೈಕಲ್ ವಾನ್

ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ಐಪಿಎಲ್ 2020ರ ಸೀಸನ್‌ಗಾಗಿ ಆಟಗಾರರ ಹರಾಜು ನಡೆಯಲಿದೆ. ಹರಾಜಿನ ವೇಳೆ ಫ್ರಾಂಚೈಸಿಗಳು ತಮ್ಮ ತಮ್ಮ ತಂಡ ಬಲ ಪಡಿಸಿಕೊಳ್ಳಲು ಆಟಗಾರರನ್ನು ಹೆಚ್ಚು ಹುಡುಕಾಡಬೇಕಿಲ್ಲ. ಯಾಕೆಂದರೆ ಇತ್ತೀಚೆಗಷ್ಟೇ ಮುಗಿದಿರುವ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ, ದೇಸಿ ಆಟಗಾರರ ಸಾಮರ್ಥ್ಯದ ಬಗ್ಗೆ ತಕ್ಕ ಮಟ್ಟಿನ ಚಿತ್ರಣ ನೀಡಿದೆ.

ಮನೀಶ್ ಪಾಂಡೆಗೆ ಮಡದಿಯಾದ ಮಂಗಳೂರಿನ ಮದಿಮಾಲ್: ಚಿತ್ರಗಳುಮನೀಶ್ ಪಾಂಡೆಗೆ ಮಡದಿಯಾದ ಮಂಗಳೂರಿನ ಮದಿಮಾಲ್: ಚಿತ್ರಗಳು

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚಿದ, ಐಪಿಎಲ್ ಹರಾಜಿನ ವೇಳೆ ಫ್ರಾಂಚೈಸಿಗಳ ಗಮನ ಸೆಳೆಯಬಲ್ಲ 5 ಆಟಗಾರರ ಪಟ್ಟಿ ಇಂತಿವೆ (ಟೂರ್ನಿಯಲ್ಲಿ ಆಟಗಾರರು ಶಕ್ತಿ ಪ್ರದರ್ಶಿಸಿದರ ಅಂಕಿ ಅಂಶಗಳೂ ಇವೆ).

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್

ಕರ್ನಾಟಕದ ಬ್ಯಾಟಿಂಗ್ ಆರ್ಡರ್ ನಲ್ಲಿ ಕೆಎಲ್ ರಾಹುಲ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಇದ್ದರೂ 19ರ ಹರೆಯದ ದೇವದತ್ ಪಡಿಕ್ಕಲ್, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಟಾಪ್ ರನ್ ಸರದಾರನಾಗಿ ಮಿಂಚಿದ್ದರು. ಟೂರ್ನಿಯ ಅಂತಿಮ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಜೊತೆ ಆರಂಭಿಕರಾಗಿ ಇಳಿಯಲಾರಂಭಿಸಿದ ಪಡಿಕ್ಕಲ್, ತಂಡ ಪ್ರಶಸ್ತಿ ಗೆಲ್ಲುವಲ್ಲಿನ ಪ್ರಮುಖ ಆಟಗಾರರೂ ಹೌದು.
M (ಪಂದ್ಯ): 12, R (ರನ್): 580, HS (ಅತ್ಯಧಿಕ ರನ್): 122*, Ave (ಸರಾಸರಿ): 64.44, SR (ಸ್ಟ್ರೈಕ್ ರೇಟ್): 175.75, 100s/50s (ಶತಕ/ಅರ್ಧ ಶತಕ): 1/5.

ಆರ್ ಸಾಯ್ ಕಿಶೋರ್

ಆರ್ ಸಾಯ್ ಕಿಶೋರ್

ಸ್ಪಿನ್ನರ್ ಒಬ್ಬ ಹೊಸ ಬಾಲ್‌ನಲ್ಲಿ ಅದೂ ಪವರ್ ಪ್ಲೇನಲ್ಲಿ ಚೆಂಡು ಎಸೆಯೋದು ಸುಲಭವಿಲ್ಲ. ಆದರೆ 23ರ ಹರೆಯದ ಎಡಗೈ ಸ್ಪಿನ್ನರ್ ರವಿಶ್ರೀನಿವಾಸನ್ ಸಾಯ್ ಕಿಶೋರ್ ತಮಿಳು ನಾಡಿಗೆ ಬಲ ತುಂಬಿದ್ದರು. ಪವರ್ ಪ್ಲೇ ವೇಳೆಯೂ ವಿಕೆಟ್‌ ಪಡೆಯುತ್ತ ಎದುರಾಳಿಯನ್ನು ನಿಯಂತ್ರಿಸುತ್ತಿದ್ದ ಆರ್ ಸಾಯ್ ಕಿಶೋರ್, ತಮಿಳುನಾಡಿ ತಂಡದಲ್ಲಿ ಉದಯೋನ್ಮುಖ ಆಟಗಾರನಾಗಿ ಗಮನ ಸೆಳೆದಿದ್ದರು.
M (ಪಂದ್ಯ): 12, W (ವಿಕೆಟ್): 20, BB (ಬೆಸ್ಟ್ ಬೌಲಿಂಗ್): 4/6, Ave (ಸರಾಸರಿ): 10.40, Eco (ಎಕಾನಮಿ): 4.6, SR (ಸ್ಟ್ರೈಕ್ ರೇಟ್): 13.4

ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್

ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ಮುಂಬೈ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ ಈ ಬಾರಿಯ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಯುವ ಆಟಗಾರನಾದರೂ ಪ್ರೌಢ ಆಟವನ್ನು ಟೂರ್ನಿ ವೇಳೆ ಪ್ರದರ್ಶಿಸಿದ್ದರು. ಸೂರ್ಯಕುಮಾರ್ ಪ್ರತಿಭೆಯನ್ನು ಅರಿತೇ ಮುಂಬೈ ಇಂಡಿಯನ್ಸ್ ತಂಡ ಅವರನ್ನು ತನ್ನ ತಂಡದಲ್ಲೇ ಉಳಿಸಿಕೊಂಡಿದೆ.
M: 11, R: 392, HS: 94*, Ave: 56.00, SR: 168.96, 100s/50s: 0/4

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್ ಒಬ್ಬ ಬೌಲರ್ ಅನ್ನೋದು ಹೆಚ್ಚಿನವರಿಗೆ ಗೊತ್ತು. ಆದರೆ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಹರ್ಯಾಣ ಪರ ಆಡಿದ್ದ ಪಟೇಲ್ ಬ್ಯಾಟಿಂಗ್‌ನಲ್ಲೂ ತನ್ನ ಕೌಶಲ ಪ್ರದರ್ಶಿಸಿದ್ದರು. ಟೂರ್ನಿಯಲ್ಲಿ ಎರಡನೇ ಅತ್ಯಧಿಕ ವಿಕೆಟ್ ಸಾಧಕನಾಗಿ ಮತ್ತು ನಾಲ್ಕನೇ ಅತ್ಯಧಿಕ ರನ್ ಸಾಧಕನಾಗಿ ಗುರುತಿಸಿಕೊಂಡಿರುವ ಹರ್ಷಲ್, ಬೆಸ್ಟ್ ಆಲ್ ರೌಂಡರ್ ಆಟಗಾರನಾಗಿ ಗಮನ ಸೆಳೆದಿದ್ದಾರೆ.
M: 12, R: 374, HS: 82, Ave: 31.16, SR: 165.48, 100s/50s: 0/2. W: 19, BB: 3/14, Ave: 15.94, Eco: 7.04, SR: 13.5.

ರುತುರಾಜ್ ಗಾಯಕ್ವಾಡ್

ರುತುರಾಜ್ ಗಾಯಕ್ವಾಡ್

ಭಾರತ 'ಎ' ತಂಡದಲ್ಲಿರುವ, ಮಹಾರಾಷ್ಟ್ರ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಎರಡನೇ ಅತ್ಯಧಿಕ ರನ್ ಸಾಧಕನಾಗಿ ಗಮನ ಸೆಳೆದಿದ್ದರು. ಶ್ರೀಲಂಕಾ 'ಎ' ವಿರುದ್ಧ ಮತ್ತು ವೆಸ್ಟ್ ಇಂಡೀಸ್ 'ಎ' ವಿರುದ್ಧ ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ಗಾಯಕ್ವಾಡ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
M: 11, R: 419, HS: 82*, Ave: 41.90, SR: 146.50, 100s/50s: 0/3.

Story first published: Tuesday, December 3, 2019, 13:29 [IST]
Other articles published on Dec 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X