ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SMAT: 5 ವಿಕೆಟ್ ಕಿತ್ತು ಮುಂಬೈಗೆ ಆಘಾತ ನೀಡಿದ ಪುದುಚೇರಿಯ 41ರ ಹರೆಯದ ಸಾಂತ ಮೂರ್ತಿ

Syed Mushtaq Ali Trophy: Santha Moorthy takes five wickets against Mumbai

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡ ಆಘಾತವನ್ನು ಅನುಭವಿಸಿದೆ. ಭಾನುವಾರ ಪುದುಚೇರಿ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಪುದುಚೇರಿ ಆಘಾತವನ್ನು ನೀಡಿತ್ತು. ಈ ಪಂದ್ಯದಲ್ಲಿ ಎದುರಾಳಿ ಪುದುಚೇರಿಗೆ ಆರು ವಿಕೆಟ್‌ಗಳಿಂದ ಮುಂಬೈ ತಂಡ ಶರಣಾಗಿದೆ.

ಪುದುಚೇರಿ ತಂಡದ ಈ ಗೆಲುವಿಗೆ ಪ್ರಮುಖ ಕಾರಣ ಬಲಗೈ ಮಧ್ಯಮ ವೇಗಿ ಸಾಂತಮೂರ್ತಿ. ಮುಂಬೈ ತಂಡದ ಪ್ರಮುಖ ಐದು ವಿಕೆಟ್ ಕೀಳುವ ಮೂಲಕ ಸಾಂತಮೂರ್ತಿ ದೊಡ್ಡ ಆಘಾತವನ್ನು ನೀಡಿದರು. ಈ ಅದ್ಭುತ ಪ್ರದರ್ಶನಕ್ಕೆ ಕಂಗೆಟ್ಟ ಮುಂಬೈ ಕೇವಲ 94 ರನ್ ಗಳಿಸಲಷ್ಟೇ ಶಕ್ತವಾಯಿತು.

ನೀವೂ ಕೋಟ್ಯಾಧಿಪತಿಯಾಗಬಹುದು; ಹಣ ಗಳಿಸಲು ಇಲ್ಲಿದೆ ಸುಲಭ ದಾರಿ!ನೀವೂ ಕೋಟ್ಯಾಧಿಪತಿಯಾಗಬಹುದು; ಹಣ ಗಳಿಸಲು ಇಲ್ಲಿದೆ ಸುಲಭ ದಾರಿ!

ಈಗ 41ರ ಹರೆಯದಲ್ಲಿರುವ ಸಾಂತಮೂರ್ತಿ ಕಳೆದ ವರ್ಷವಷ್ಟೇ ತಮ್ಮ 40ನೇ ವಯಸ್ಸಿನಲ್ಲಿ ಪ್ರಥಮದರ್ಜೆ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದಾರೆ. ಮುಂಬೈ ವಿರುದ್ಧ ಅವರು ನೀಡಿದ ಪ್ರದರ್ಶನ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯಾಗಿ ಪರಿಣಮಿಸಿದೆ.

ಟಿ20 ಕ್ರಿಕೆಟ್‌ನಲ್ಲಿ 5 ವಿಕೆಟ್‌ಗಳ ಗೊಂಚಲನ್ನು ಪಡೆದ ಹಿರಿಯ ಆಟಗಾರ ಎಂಬ ದಾಖಲೆಗೆ ಸಾಂತ ಕುಮಾರ್ ಪಾತ್ರರಾಗಿದ್ದಾರೆ. ಈ ದಾಖಲೆ ಮಾಡುವ ಸಂದರ್ಭದಲ್ಲಿ ಅವರು 41 ವರ್ಷ 129 ದಿನ. ನಾಲ್ಕು ಓವರ್‌ಗಳ ಬೌಲಿಂಗ್‌ ಸಂದರ್ಭದಲ್ಲಿ ಸಾಂತಮೂರ್ತಿ ಕೇವಲ 20 ರನ್ ನೀಡಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿತಾದರು.

ಸಾಂತಮೂರ್ತಿ ಅವರ ಈ ಅದ್ಭುತವಾದ ಬೌಲಿಂಗ್ ಸಾಹಸದಿಂದ ಪುದುಚೇರಿ ಸುಲಭವಾದ ಗುರಿಯನ್ನು ಪಡೆಯಿತು. 95 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪುದುಚೇರಿ ಇನ್ನೂ ಒಂದು ಓವರ್‌ ಉಳಿದಿರುವಂತೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತ್ತು.

Story first published: Monday, January 18, 2021, 15:19 [IST]
Other articles published on Jan 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X