ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯ್ಯದ್ ಮುಷ್ತಾಕ್ ಅಲಿ: ಫೈನಲ್‌ನಲ್ಲಿ ಕರ್ನಾಟಕ-ತಮಿಳುನಾಡು ಕಾದಾಟ

Syed Mushtaq Ali Trophy: Tamil Nadu entered to the final

ಸೂರತ್, ನವೆಂಬರ್ 29: ಸೂರತ್‌ನ ಲಾಲ್ ಭಾಯ್ ಕಾಂಟ್ರ್ಯಾಕ್ಟರ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 29) ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್ 2 ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು 7 ವಿಕೆಟ್‌ನಿಂದ ಮಣಿಸಿರುವ ತಮುಳುನಾಡು ಫೈನಲ್‌ಗೆ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಮುಖಾಮುಖಿಯಾಗಲಿವೆ.

ಜಡ್ಡು ಕ್ಯಾಮೆರಾಗೆ ಫೋಸ್ ಕೊಟ್ಟ ವಿಶೇಷ ಗೆಳೆಯ ಯಾರು?ಜಡ್ಡು ಕ್ಯಾಮೆರಾಗೆ ಫೋಸ್ ಕೊಟ್ಟ ವಿಶೇಷ ಗೆಳೆಯ ಯಾರು?

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡ ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿತು. ಅಂಕಿತ್ ಲಾಂಬ 15, ರಾಜೇಶ್ ಬಿಷ್ಣೋಯ್ 23, ಚಂದ್ರಪಾಲ್ ಸಿಂಗ್ 15, ರವಿ ಬಿಷ್ಣೋಯ್ 22 ರನ್‌ ಕೊಡುಗೆಯೊಂದಿಗೆ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 112 ರನ್ ಮಾಡಿತು.

ಮುಷ್ತಾಕ್ ಅಲಿ: ರಾಹುಲ್-ಪಡಿಕ್ಕಲ್-ಅಭಿಮನ್ಯು ಅಬ್ಬರ, ಫೈನಲ್‌ಗೆ ಕರ್ನಾಟಕಮುಷ್ತಾಕ್ ಅಲಿ: ರಾಹುಲ್-ಪಡಿಕ್ಕಲ್-ಅಭಿಮನ್ಯು ಅಬ್ಬರ, ಫೈನಲ್‌ಗೆ ಕರ್ನಾಟಕ

ಚೇಸಿಂಗ್‌ಗೆ ಇಳಿದ ತಮಿಳುನಾಡು, ರವಿಚಂದ್ರನ್ ಅಶ್ವಿನ್ 31, ವಾಷಿಂಗ್ಟನ್ ಸುಂದರ್ 54, ದಿನೇಶ್ ಕಾರ್ತಿಕ್ 17, ಬಾಬಾ ಅಪರಾಜಿತ್ 9 ರನ್‌ನೊಂದಿಗೆ 17.5ನೇ ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 116 ರನ್ ಪೇರಿಸಿತು. ರಾಜಸ್ಥಾನ ಇನ್ನಿಂಗ್ಸ್‌ನಲ್ಲಿ ತಮುಳುನಾಡಿನ ವಿಜಯ್ ಶಂಕರ್ 2 ವಿಕೆಟ್‌ಗಳೊಂದಿಗೆ ಗಮನ ಸೆಳೆದರು.

ಜಾಹೀರಾತು ವಲಯದಲ್ಲೂ ಬಿಗ್‌ಹಿಟ್: ಗಗನಕ್ಕೇರಿದ ರೋಹಿತ್ ಬ್ರ್ಯಾಂಡ್ ವ್ಯಾಲ್ಯೂಜಾಹೀರಾತು ವಲಯದಲ್ಲೂ ಬಿಗ್‌ಹಿಟ್: ಗಗನಕ್ಕೇರಿದ ರೋಹಿತ್ ಬ್ರ್ಯಾಂಡ್ ವ್ಯಾಲ್ಯೂ

ಇಲ್ಲಿಗೆ ಗ್ರೂಪ್ 'ಎ'ಯಲ್ಲಿರುವ ಕರ್ನಾಟಕ 6ರಲ್ಲಿ 5 ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಪ್ರವೇಶಿಸಿದ್ದರೆ, ತಮಿಳುನಾಡು ಕೂಡ 6ರಲ್ಲಿ 5 ಜಯದೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಫೈನಲ್ ಪಂದ್ಯ ಸೂರತ್‌ನ ಇದೇ ಸ್ಟೇಡಿಯಂನಲ್ಲಿ ಭಾನುವಾರ (ಡಿಸೆಂಬರ್ 1) 7 pmಗೆ ನಡೆಯಲಿದೆ.

Story first published: Friday, November 29, 2019, 22:01 [IST]
Other articles published on Nov 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X