ಆತ ಟಿ20 ವಿಶ್ವಕಪ್‌ಗೆ ಪ್ರಮುಖ ಅಸ್ತ್ರವಾಗಬಹುದು: ಐಪಿಎಲ್ ಹೀರೋ ಬಗ್ಗೆ ವಿವಿಎಸ್ ಲಕ್ಷ್ಮಣ್ ಮಾತು

ಈ ಬಾರಿಯ ಐಪಿಎಲ್ ಸಾಕಷ್ಟು ಯುವ ಆಟಗಾರರನ್ನು ಪರಿಚಯಿಸಿದೆ. ಅದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತನಡದ ಓರ್ವ ವೇಗಿ ಮಾತ್ರ ತನ್ನ ನಿಖರ ದಾಳಿಯ ಮೂಲಕ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ತನ್ನ ಅತ್ಯುನ್ನತ ಪ್ರದರ್ಶನದ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವಲ್ಲಿ ಸಫಲರಾಗಿದ್ದಾರೆ.

ಈ ವೇಗಿಯ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ವಿವಿಎಸ್ ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ. ಆತ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರವಾಗಿ ಮುಖ್ಯ ಅಸ್ತ್ರವಾಗುವ ಸಂಭವವಿದೆ ಎಂದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಪರ ಮಿಂಚಿನ ದಾಳಿ ನಡೆಸಿದ ಆ ಬೌಲರ್ ಬಗ್ಗೆ ವಿವಿಎಸ್ ಲಕ್ಷ್ಮಣ್ ಹೇಳಿದ್ದೇನು? ಆ ವೇಗದ ಬೌಲರ್ ಯಾರು? ಮುಂದೆ ಓದಿ..

ಭಾರತ vs ಆಸ್ಟ್ರೇಲಿಯಾ: ರಿಚರ್ಡ್ಸನ್ ಹೊರಕ್ಕೆ, ಆ್ಯಂಡ್ರ್ಯೂ ಟೈ ಒಳಕ್ಕೆ

ಯಾರು ಆ ಬೌಲರ್

ಯಾರು ಆ ಬೌಲರ್

ವಿವಿಎಸ್ ಲಕ್ಷ್ಮಣ್ ವಿಶ್ವಾಸದ ಮಾತುಗಳನ್ನು ಆಡಿದ ಬೌಲರ್ ಬೇರೆ ಯಾರೂ ಅಲ್ಲ. ಆದು ಟೀಮ್ ಇಂಡಿಯಾಗೆ ಹೊಸದಾಗಿ ಆಯ್ಕೆಯಾಗೊರುವ ಟಿ. ನಟರಾಜನ್. ಐಪಿಎಲ್‌ನಲ್ಲಿ ಸನ್‌ರಯಸರ್ಸ್ ಹೈದರಾಬಾದ್ ಪರವಾಗಿ ನಿಖರ ಹಾಗೂ ನಿಯಂತ್ರಿತ ಬೌಲಿಂಗ್ ದಾಳಿಯ ಮೂಲಕ ಎದುರಾಳಿಗಳನ್ನು ಕಂಗೆಡಿಸುವಲ್ಲಿ ಯಶಸ್ವಿಯಾಗಿದ್ದರು.

ಟೀಮ್ ಇಂಡಿಯಾಗೆ ಆಯ್ಕೆ

ಟೀಮ್ ಇಂಡಿಯಾಗೆ ಆಯ್ಕೆ

ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಐಪಿಎಲ್‌ನಲ್ಲಿ ತೋರಿದ ಪ್ರದರ್ಶನ ಟೀಮ್ ಇಂಡಿಯಾ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಟಿ ನಟರಾಜನ್ ಆಸ್ಟ್ರೆಲಿಯಾ ವಿರುದ್ಧದ ಟಿ20 ಪಂದ್ಯಗಳ ಸರಣಿಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯದಲ್ಲೂ ಮಿಂಚುವ ವಿಶ್ವಾಸಹೊಂದಿದ್ದಾರೆ.

ವಿವಿಎಸ್ ಲಕ್ಷ್ಮಣ್ ಪ್ರಶಂಸೆ

ವಿವಿಎಸ್ ಲಕ್ಷ್ಮಣ್ ಪ್ರಶಂಸೆ

ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ನಟರಾಜನ್ ಬಗ್ಗೆ ಲಕ್ಷ್ಮಣ್ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಡೆತ್ ಓವರ್‌ನಲ್ಲಿ ಟೀಮ್ ಇಂಡಿಯಾಗೆ ಟಿ ನಟರಾಜನ್ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದಿರುವ ಲಕ್ಷ್ಮಣ್ ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ ಅವರನ್ನು ತಮ್ಮ ನಿಖರ ಯಾರ್ಕರ್ ಮೂಲಕ ಕೆಡವಿದ ಸಂದರ್ಭವನ್ನು ಲಕ್ಷ್ಮಣ್ ನೆನಪಿಸಿಕೊಂಡಿದ್ದಾರೆ.

ನಟರಾಜನ್ ಬಳಿ ಇನ್ನೂ ಅಸ್ತ್ರಗಳಿವೆ

ನಟರಾಜನ್ ಬಳಿ ಇನ್ನೂ ಅಸ್ತ್ರಗಳಿವೆ

ಇದೇ ಸಂದರ್ಭದಲ್ಲಿ ವಿವಿಎಸ್ ಲಕ್ಷ್ಮಣ್ ಟಿ ನಟರಾಜನ್ ಬಳಿ ಇನ್ನೂ ಸಾಕಷ್ಟು ಅಸ್ತ್ರಗಳಿವೆ ಎಂದು ಹೇಳಿದ್ದಾರೆ. "ನಟರಾಜನ್ ತಮ್ಮ ನಿಖರವಾದ ಹಾಗೂ ನಿರಂತರ ಯಾರ್ಕರ್‌ಗಳಿಗೆ ಹೆಸರಾಗಿದ್ದಾರೆ. ಆದರೆ ಅದಕ್ಕೆ ಮೀರಿಯೂ ಅವರಲ್ಲಿ ಸಾಕಷ್ಟು ಅಸ್ತ್ರಗಳಿವೆ. ಅದನ್ನು ಅವರು ಐಪಿಎಲ್‌ನಲ್ಲಿ ಬಳಕೆ ಮಾಡಿಲ್ಲ. ತೀಕ್ಷ್ಣವಾದ ಬೌನ್ಸರ್, ನಿಧಾನಗತಿಯ ಬೌಲಿಂಗ್, ಆಫ್ ಕಟ್ಟರ್ ಟಿ ನಟರಾಜನ್ ವರ ಬತ್ತಳಿಕೆಯಲ್ಲದೆ. ಹೊಸ ಚೆಂಡಿನಲ್ಲೂ ವಿಕೆಟ್ ಕಬಳಿಸಬಲ್ಲ ಬೌಲರ್ ನಟರಾಜನ್ ಆಗಿದ್ದಾರೆ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, November 18, 2020, 17:34 [IST]
Other articles published on Nov 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X