ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ10 ಲೀಗ್ ಮೂಲಕ ಕ್ರಿಕೆಟ್ ಗೆ ಮರಳಿದ ಸೆಹ್ವಾಗ್

By Mahesh

ದುಬೈ, ಡಿಸೆಂಬರ್ 14: ವಿಶ್ವ ಕ್ರಿಕೆಟ್ ನ ಒಂದು ಕಾಲದ ಸ್ಫೋಟಕ ಬ್ಯಾಟ್ಸ್ ಮನ್ ಮತ್ತೊಂದು ಚುಟುಕು ಕ್ರಿಕೆಟ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಟಿ10 ಕ್ರಿಕೆಟ್ ಲೀಗ್ ಮೂಲಕ ವೀರೇಂದ್ರ ಸೆಹ್ವಾಗ್, ಶಾಹಿದ್ ಅಫ್ರಿದಿ ಮತ್ತೆ ಬ್ಯಾಟ್ ಬೀಸುತ್ತಿದ್ದಾರೆ.

ಚೊಚ್ಚಲ ಆವೃತ್ತಿಯ ಟಿ10 ಕ್ರಿಕೆಟ್ ಲೀಗ್​ಗೆ ಗುರುವಾರ ಶಾರ್ಜಾದಲ್ಲಿ ಚಾಲನೆ ಸಿಗಲಿದೆ. ಇದು ಒಲಿಂಪಿಕ್ಸ್​ನಲ್ಲಿ ಆಡಿಸಲು ಅತ್ಯಂತ ಸೂಕ್ತವಾದ ಕ್ರಿಕೆಟ್ ಪ್ರಕಾರ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿರುವುದರಿಂದ ಕುತೂಹಲ ಇನ್ನಷ್ಟು ಹೆಚ್ಚಿದೆ.

T10 League 2017: Virender Sehwag returns to cricket

ಯಾರೆಲ್ಲ ಆಡುತ್ತಿದ್ದಾರೆ: ಟಿ10 ಆಡಲು ಮುಂದಾದ ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕರ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವಿಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ, ಮೊಹಮದ್ ಆಮಿರ್, ಅಲೆಕ್ಸ್ ಹೇಲ್ಸ್, ಕಿರಾನ್ ಪೊಲ್ಲಾರ್ಡ್, ಡೇವಿಡ್ ಮಿಲ್ಲರ್, ಡರೇನ್ ಸಾಮಿ ಟೂರ್ನಿಯಲ್ಲಿ ಆಡಲಿರುವ ಇತರ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರು.

ಟೂರ್ನಿಯ ಮೊದಲ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್-ಕೇರಳ ಕಿಂಗ್ಸ್ ಮುಖಾಮುಖಿಯಾಗಲಿವೆ. ದಿನದ 2ನೇ ಪಂದ್ಯದಲ್ಲಿ ಮರಾಠ ಅರೇಬಿಯನ್ಸ್-ಪಾಕ್​ತೂನ್ಸ್ ಸೆಣಸಲಿವೆ.

ವಿಶ್ವದಾಖಲೆಯ 228 ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಿಕೊಂಡ ಹೆಗ್ಗಳಿಕೆಯ ಶಾರ್ಜಾ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಡಿ. 17ರಂದು ಫೈನಲ್ ಪಂದ್ಯ ನಡೆಯಲಿದೆ.

ಆರು ತಂಡಗಳು: ಭಾರತ ಉಪಖಂಡದ ಒಟ್ಟು 6 ಫ್ರಾಂಚೈಸಿಗಳು ಕಣದಲ್ಲಿವೆ. ಅವುಗಳೆಂದರೆ ಮರಾಠ ಅರೇಬಿಯನ್ಸ್, ಕೇರಳ ಕಿಂಗ್ಸ್ (ಭಾರತ), ಪಾಕ್​ತೂನ್ಸ್, ಪಂಜಾಬಿ ಲೆಜೆಂಡ್ಸ್ (ಪಾಕಿಸ್ತಾನ), ಕೊಲಂಬೊ ಲಯನ್ಸ್ (ಶ್ರೀಲಂಕಾ), ಬೆಂಗಾಲ್ ಟೈಗರ್ಸ್ (ಬಾಂಗ್ಲಾದೇಶ).

ಟಿ10 ಕ್ರಿಕೆಟ್ : ಟಿ10 ಪಂದ್ಯ ಕೇವಲ 90 ನಿಮಿಷದಲ್ಲಿ ಮುಗಿದುಹೋಗುತ್ತದೆ. 10 ಓವರ್​ಗಳಲ್ಲಿ 2 ಓವರ್ ಪವರ್​ಪ್ಲೇ ಇರುತ್ತದೆ. ಅಂದ ಹಾಗೆ, 39 ವರ್ಷ ವಯಸ್ಸಿನ ಸೆಹ್ವಾಗ್ ಮರಾಠ ತಂಡದಲ್ಲಿದ್ದಾರೆ. ಈ ತಂಡಕ್ಕೆ ವಾಸೀಂ ಅಕ್ರಂ ಕೋಚ್. ಬಾಲಿವುಡ್ ನಟ ಸೊಹೈಲ್ ಖಾನ್ ಸಹ ಮಾಲೀಕತ್ವ ಈ ತಂಡಕ್ಕಿದೆ. 2014ರಲ್ಲಿ ಕನ್ನಡಕ ಧರಿಸಿ ಐಪಿಎಲ್ ಆಡಿದ್ದ ಸೆಹ್ವಾಗ್ ನಂತರ ಹರ್ಯಾಣ ಪರ ಬ್ಯಾಟ್ ಬೀಸಿದ್ದರು. ನಂತರ ಕ್ರಿಕೆಟ್ ಕಾಮೆಂಟ್ರಿ ಮಾಡುತ್ತಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X