ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ10 ಕ್ರಿಕೆಟ್ ಲೀಗ್ ಎಲ್ಲಿ? ಯಾವಾಗ? ಸಂಪೂರ್ಣ ಮಾರ್ಗದರ್ಶಿ

T10 League 2018: Heres full schedule, timing, where to watch, teams

ದುಬೈ, ನವೆಂಬರ್ 12: ಯುಎಇಯಲ್ಲಿ ಕಳೆದ ವರ್ಷ ಚೊಚ್ಚಲ ಆವೃತ್ತಿಯ ಟಿ10 ಕ್ರಿಕೆಟ್ ಲೀಗ್​ಶಾರ್ಜಾದಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ನವೆಂಬರ್ 21ರಿಂದ ಡಿಸೆಂಬರ್ 02ರ ತನಕ ನಡೆಯಲಿದೆ. ಇದು ಒಲಿಂಪಿಕ್ಸ್​ನಲ್ಲಿ ಆಡಿಸಲು ಅತ್ಯಂತ ಸೂಕ್ತವಾದ ಕ್ರಿಕೆಟ್ ಪ್ರಕಾರ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿರುವುದರಿಂದ ಕುತೂಹಲ ಇನ್ನಷ್ಟು ಹೆಚ್ಚಿದೆ.

ಟೀಂ ಇಂಡಿಯಾ ಮಾಜಿ ಆಟಗಾರರಾದ ಜಹೀರ್ ಖಾನ್, ಮುನಾಫ್ ಪಟೇಲ್ ಹಾಗೂ ಪ್ರವೀಣ್ ಕುಮಾರ್ ಅವರು ಮುಂಬರುವ ಟಿ10 ಕ್ರಿಕೆಟ್ ಲೀಗ್ ನಲ್ಲಿ ಬಹುಬೇಡಿಕೆಯ ಆಟಗಾರರಾಗಿ ಹೊರ ಹೊಮ್ಮಿದ್ದಾರೆ.

ಟಿ10 ಕ್ರಿಕೆಟ್ ಲೀಗ್ ಗೆ ಜಹೀರ್, ಪ್ರವೀಣ್, ಮುನಾಫ್ಟಿ10 ಕ್ರಿಕೆಟ್ ಲೀಗ್ ಗೆ ಜಹೀರ್, ಪ್ರವೀಣ್, ಮುನಾಫ್

ವಿಶ್ವದ ಮೊಟ್ಟ ಮೊದಲ 10 ಓವರ್ ಗಳ ಅಂತಾರಾಷ್ಟ್ರೀಯ ವೃತ್ತಿಪರರ ಕ್ರಿಕೆಟ್ ಲೀಗ್ ಗೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಮಾನ್ಯತೆ ಸಿಕ್ಕಿದೆ. ಟಿ10 ಲೀಗ್ ಗೆ ಭಾರತದ ಸ್ಟಾರ್ ಆಟಗಾರರನ್ನು ಸೇರಿಸುವುದರಿಂದ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಲಿದೆ. 90ನಿಮಿಷಗಳಲ್ಲಿ ಮುಗಿಯುವ ಈ ಪಂದ್ಯಗಳು 12 ದಿನಗಳ ಕಾಲ ಎಲ್ಲರನ್ನು ರಂಜಿಸಲಿದೆ. ಮೊದಲ ಆವೃತ್ತಿ ನಾಲ್ಕು ದಿನಗಳ ಕಾಲ ಆಯೋಜನೆಗೊಂಡಿತ್ತು ಎಂದ ಟಿ10 ಲೀಗ್ ಚೇರ್ಮನ್ ಶಾಜಿ ಮುಲ್ಕ್ ಹೇಳಿದ್ದಾರೆ.

ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?

ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?

ಬೆಂಗಾಲ್ ಟೈಗರ್ಸ್ ಪರ ಜಹೀರ್ ಆಡಲಿದ್ದರೆ, ಪಂಜಾಬಿ ಲೆಜೆಂಡ್ಸ್ ಪರ ಪ್ರವೀಣ್ ಕುಮಾರ್, ಎಸ್ ಬದರಿನಾಥ್- ಮರಾಠ ಅರೇಬಿಯನ್ಸ್ ಪರ, ರಿತೀಂದರ್ ಸಿಂಗ್ ಸೋಧಿ ಅವರು ಕೇರಳ ಕಿಂಗ್ಸ್ ಪರ, ಪಖ್ತೂನ್ಸ್ ಪರ ಆರ್ ಪಿ ಸಿಂಗ್, ರಜಪೂತ್ಸ್ ಪರ ಮುನಾಫ್ ಪಟೇಲ್ ಆಡಲಿದ್ದಾರೆ. ಇವರಲ್ಲದೆ ಪ್ರವೀಣ್ ತಾಂಬೆ ಅವರು ಕರಾಚಿಯನ್ಸ್ ಪರ, ಅಮಿತೋಜ್ ಸಿಂಗ್ ಅವರು ನಾರ್ದನ್ ವಾರಿಯರ್ಸ್ ಪರ ಆಡಲಿದ್ದಾರೆ.

ಟಿ10 ಲೀಗ್ ನಲ್ಲಿ ಯಾವ ಯಾವ ತಂಡಗಳಿವೆ

ಟಿ10 ಲೀಗ್ ನಲ್ಲಿ ಯಾವ ಯಾವ ತಂಡಗಳಿವೆ

ಟಿ10 ಲೀಗ್ ನಲ್ಲಿ ಯಾವ ಯಾವ ತಂಡಗಳಿವೆ
ಒಟ್ಟು 8 ಫ್ರಾಂಚೈಸಿಗಳು ಕಣದಲ್ಲಿವೆ. ಅವುಗಳೆಂದರೆ
ಕೇರಳ ಕಿಂಗ್ಸ್ (ಭಾರತ),
ಮರಾಠ ಅರೇಬಿಯನ್ಸ್,
ರಜಪೂಟ್ (ಈ ಮುಂಚೆ ಕೊಲಂಬೋ ಲಯನ್ಸ್),
ಪಖ್ತೂನ್ಸ್,
ಬೆಂಗಾಲ್ ಟೈಗರ್ಸ್ (ಬಾಂಗ್ಲಾದೇಶ),
ಪಂಜಾಬ್ ಲೆಜೆಂಡ್ಸ್,
ದಿ ಕರಾಚಿಯನ್ಸ್(ಪಾಕಿಸ್ತಾನ)

90 ನಿಮಿಷದಲ್ಲಿ ಪಂದ್ಯಗಳು ಮುಗಿಯಲಿವೆ

90 ನಿಮಿಷದಲ್ಲಿ ಪಂದ್ಯಗಳು ಮುಗಿಯಲಿವೆ

ಎ ಗುಂಪು : ಕೇರಳ ಕಿಂಗ್ಸ್, ಕರಾಚಿಯನ್ಸ್, ಪಖ್ತೂನ್ಸ್, ರಜಪೂಟ್ಸ್
ಬಿ ಗುಂಪು : ಪಂಜಾಬಿ ಲೆಜೆಂಡ್ಸ್, ಬೆಂಗಾಲ್ ಟೈಗರ್ಸ್, ಮರಾಠ ಅರೆಬಿಯನ್ಸ್, ನಾರ್ದನ್ ವಾರಿಯರ್ಸ್

ಎರಡು ಗುಂಪಿನಲ್ಲಿರುವ 8 ತಂಡಗಳು ತಲಾ ಮೂರು ಪಂದ್ಯಗಳನ್ನಾಡಲಿವೆ. ಟಾಪ್ 4 ತಂಡಗಳು ಎರಡನೇ ಹಂತದಲ್ಲಿ ಪ್ಲೇ ಆಫ್ ನಲ್ಲಿ ಆಡಲಿವೆ. ನಂತರ ಮೊದಲ ಸೆಮಿಫೈನಲ್, ಎಲಿಮಿನೇಟರ್, ಎರಡನೇ ಸೆಮಿಫೈನಲ್ ಹಾಗೂ ಫೈನಲ್.

ಟಿ10 ಪಂದ್ಯ ಕೇವಲ 90 ನಿಮಿಷದಲ್ಲಿ ಮುಗಿದುಹೋಗುತ್ತದೆ. 10 ಓವರ್​ಗಳಲ್ಲಿ 2 ಓವರ್ ಪವರ್​ಪ್ಲೇ ಇರುತ್ತದೆ. ಈ ಬಾರಿ 29 ಪಂದ್ಯಗಳು ನಡೆಯಲಿವೆ.

ಸೋನಿ ನೆಟ್ವರ್ಕ್ ನಲ್ಲಿ ಪಂದ್ಯಗಳು ಪ್ರಸಾರ

ಸೋನಿ ನೆಟ್ವರ್ಕ್ ನಲ್ಲಿ ಪಂದ್ಯಗಳು ಪ್ರಸಾರ

ಸೋನಿ ನೆಟ್ವರ್ಕ್ ಮೂರು ವರ್ಷಗಳ ಕಾಲ ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾಗಳಲ್ಲಿ ಪ್ರಸಾರದ ಹಕ್ಕು ಪಡೆದುಕೊಂಡಿದೆ.

21-Nov-2018: Karachians vs Rajputs, 8:00 PM
21-Nov-2018: Kerala Kings vs Pakhtoons, 10:15 PM

22-Nov-2018: Bengal Tigers vs Northern Warriors, 5:00 PM 22-Nov-2018: Karachians vs Kerala Kings, 7:15 PM
22-Nov-2018: Maratha Arabians vs Northern Warriors, 9:30 PM

23-Nov-2018: Pakhtoons vs Rajputs, 5:00 PM
23-Nov-2018: Bengal Tigers vs Maratha Arabians, 7:15 PM 23-Nov-2018: Northern Warriors vs Punjabi Legends, 9:30 PM

24-Nov-2018: Karachians vs Pakhtoons, 8:00 PM
24-Nov-2018: Bengal Tigers vs Punjabi Legends, 10:15 PM

25-Nov-2018: Kerala Kings vs Rajputs, 8:00 PM
25-Nov-2018: Maratha Warriors vs Punjabi Legends, 10:15 PM

ನವೆಂಬರ್ 26 ರಿಂದ ನವೆಂಬರ್ 30ರ ತನಕದ ವೇಳಾಪಟ್ಟಿ

ನವೆಂಬರ್ 26 ರಿಂದ ನವೆಂಬರ್ 30ರ ತನಕದ ವೇಳಾಪಟ್ಟಿ

26-Nov-2018: Playoffs: A1 vs B2, 8:00 PM
26-Nov-2018: Playoffs: A3 vs B4, 10:15 PM

27-Nov-2018: Playoffs: A2 vs B3, 8:00 PM
27-Nov-2018: Playoffs, A4 vs B1, 10:15 PM

28-Nov-2018: Playoffs, A2 vs B4, 8:00 PM
28-Nov-2018: Playoffs, A1 vs B3, 10:15 PM
29-Nov-2018: Playoffs, A3 vs B1, 5:00 PM

29-Nov-2018: Playoffs, A4 vs B2, 7:15 PM
29-Nov-2018: Playoffs, A1 vs B4, 9:30 PM

30-Nov-2018, Playoffs, A3 vs B2, 5:00 PM
30-Nov-2018, Playoffs, A2 vs B1, 7:15 PM
30-Nov-2018, Playoffs, A4 vs B1, 9:30 PM

ಸೆಮಿಫೈನಲ್ ಹಾಗೂ ಫೈನಲ್ ಯಾವಾಗ

ಸೆಮಿಫೈನಲ್ ಹಾಗೂ ಫೈನಲ್ ಯಾವಾಗ

1-Dec-2018: Semifinal 1: Playoffs 1st Pos vs Playoffs 2nd Pos, 5:00 PM
1-Dec-2018, Eliminator 1, Playoffs 3rd Pos vs Playoffs 4th Pos 7:15 PM
1-Dec-2018, Semifinal 2: Semifinal 1 Runner Up vs Eliminator 1 Winner, 9:30 PM

2-Dec-2018: Third Place: Eliminator 1 Runner Up vs Semifinal 2 Runner Up, 7:15 PM
2-Dec-2018: Final, 9:30 PM

Story first published: Monday, November 12, 2018, 19:56 [IST]
Other articles published on Nov 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X