ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಕೋಲಸ್ ಆರ್ಭಟ, 10 ಓವರ್ ಪಂದ್ಯವನ್ನು 99 ರನ್‌ನಿಂದ ಗೆದ್ದ ವಾರಿಯರ್ಸ್!

T10 League 2018: Northern Warriors won by 99 runs

ಶಾರ್ಜಾ, ನವೆಂಬರ್ 24: ಬಹುಶಃ ಈ ಪಂದ್ಯ, ಪಂದ್ಯದ ಫಲಿತಾಂಶ ಟಿ20 ಲೀಗ್ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಲಿದೆ. ಟಿ10 ಲೀಗ್‌ನಲ್ಲಿ ತಂಡವೊಂದು ಬಾರಿಸಿದ ರನ್ 183. ಗೆದ್ದ ಅಂತರ ಬರೋಬ್ಬರಿ 99 ರನ್‌ಗಳು. ಪಂದ್ಯ ವೀಕ್ಷಿಸಿದ ಕ್ರಿಕೆಟ್ ಅಭಿಮಾನಿಗಳಿಗಂತೂ ಭರಪೂರ ಮನರಂಜನೆ!

ಕಟ್ಟ ಕಡೆಗೆ ಕಾಡುವ ಪ್ರಶ್ನೆ, ಮಿಥಾಲಿ ರಾಜ್ ಆಡಿಸಲಿಲ್ಲವೇಕೆ?ಕಟ್ಟ ಕಡೆಗೆ ಕಾಡುವ ಪ್ರಶ್ನೆ, ಮಿಥಾಲಿ ರಾಜ್ ಆಡಿಸಲಿಲ್ಲವೇಕೆ?

ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಇಂಥದ್ದೊಂದು ಅಪೂರ್ವ ಕ್ಷಣಕ್ಕೆ ಸಾಕ್ಷಿ ಹೇಳಿತು. ಶುಕ್ರವಾರ (ನವೆಂಬರ್ 23) ನಡೆದ ನಾರ್ತರ್ನ್ ವಾರಿಯರ್ಸ್ ಮತ್ತು ಪಂಜಾಬಿ ಲೆಜೆಂಡ್ಸ್ ನಡುವಿನ ಟಿ10 ಲೀಗ್ 8ನೇ ಪಂದ್ಯದಲ್ಲಿ ಡ್ಯಾರೆನ್ ಸಮಿ ನಾಯಕತ್ವದ ನಾರ್ತರ್ನ್ ವಾರಿಯರ್ಸ್ ಭರ್ಜರಿ 99 ರನ್ ನಿಂದ ಜಯಭೇರಿ ಬಾರಿಸಿತು.

ಸರಣಿ ಗೆಲ್ಲಲು ಒಂದೇ ಗೆಲುವು ಬಾಕಿಯಿದೆ, ಗೆದ್ದೇ ಗೆಲ್ತೇವೆ: ಮೆಕ್‌ಡರ್ಮೊಟ್ಸರಣಿ ಗೆಲ್ಲಲು ಒಂದೇ ಗೆಲುವು ಬಾಕಿಯಿದೆ, ಗೆದ್ದೇ ಗೆಲ್ತೇವೆ: ಮೆಕ್‌ಡರ್ಮೊಟ್

ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದ ಟ್ರಿನಿಡಾಡ್ ಆಟಗಾರ ನಿಕೋಲಸ್ ಪೂರ್ನ್ ಕೇವಲ 25 ಎಸೆತಗಳಿಗೆ 77 ರನ್ ಚಚ್ಚಿ ಕ್ರಿಕೆಟ್ ಪ್ರೇಮಿಗಳ ಮನಸೂರೆ ಗೊಳಿಸಿದರು.

ಲೆಜೆಂಡ್ಸ್‌ಗೆ ಹೀನಾಯ ಸೋಲು

ಲೆಜೆಂಡ್ಸ್‌ಗೆ ಹೀನಾಯ ಸೋಲು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ನಾರ್ತರ್ನ್ ವಾರಿಯರ್ಸ್ ಪರ ಲೆಂಡ್ಲ್ ಸಿಮ್ಮನ್ಸ್ 36, ನಿಕೋಲಸ್ 77, ಆ್ಯಂಡ್ರೆ ರಸೆಲ್ ಅಜೇಯ 38, ರೋಮನ್ ಪೊವೆಲ್ ಅಜೇಯ 21 ರನ್ ಸೇರಿಸಿದ್ದರಿಂದ ವಾರಿಯರ್ಸ್ 10 ಓವರ್‌ಗೆ 2 ವಿಕೆಟ್ ಕಳೆದು 183 ರನ್ ಕಲೆ ಹಾಕಿತ್ತು. ಚೇಸಿಂಗ್‌ಗೆ ಇಳಿದ ಲೆಜೆಂಡ್ಸ್ 10 ಓವರ್‌ಗೆ 7 ವಿಕೆಟ್ ಕಳೆದು 84 ರನ್ ಪೇರಿಸಿ ಹೀನಾಯವಾಗಿ ಸೋತಿತು.

ಹೀರೋ ಆಗಿ ಮೆರೆದ ಪೂರ್ನ್

ಹೀರೋ ಆಗಿ ಮೆರೆದ ಪೂರ್ನ್

ವಾರಿಯರ್ಸ್ ಪರ 25 ಎಸೆತಗಳಿಗೆ 77 ರನ್ ಬಾರಿಸಿದ ನಿಕೋಲಸ್ ಪೂರ್ನ್ ಪಂದ್ಯದ ವೇಳೆ ಹೀರೋ ಆಗಿ ಮೆರೆದರು. ನಿಕೋಲಸ್ ಬ್ಯಾಟ್‌ನಿಂದ ಈ ವೇಳೆ 2 ಬೌಂಡರಿ, ಬರೋಬ್ಬರಿ 10 ಸಿಕ್ಸರ್‌ಗಳು ಸಿಡಿದಿದ್ದವು!

ಮಾರಕ ಬೌಲಿಂಗ್ ದಾಳಿ

ಮಾರಕ ಬೌಲಿಂಗ್ ದಾಳಿ

ಪಂಜಾಬಿ ಲೆಜೆಂಡ್ಸ್ ಪರ ಅನ್ವರ್ ಆಲಿ 18 ರನ್ ಗಳಿಸಿದ್ದೇ ದೊಡ್ಡ ಗಳಿಕೆ. ನಾರ್ತರ್ನ್ ವಾರಿಯರ್ಸ್ ತಂಡದಿಂದ ಮಾರಕ ಬೌಲಿಂಗ್ ದಾಳಿಯೂ ನಡೆಯಿತು. ರವಿ ಬೋಪರ 15 ರನ್ನಿಗೆ 4 ವಿಕೆಟ್ ಕಿತ್ತರೆ, ಕ್ರಿಸ್ ಗ್ರೀನ್, ವಹಾಬ್ ರಿಯಾಜ್, ಹಾರ್ಡ್ಸ್ ವಿಲ್ಜೊಯೆನ್ ತಲಾ ಒಂದು ವಿಕೆಟ್ ಉರುಳಿಸಿ ಎದುರಾಳಿಯನ್ನು ಕಾಡಿದರು.

Story first published: Saturday, November 24, 2018, 11:51 [IST]
Other articles published on Nov 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X