ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಲೀಗ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಪಾಯಕಾರಿ: ಡು ಪ್ಲೆಸಿಸ್

Faf du Plessis says T20 leagues are a threat for international cricket
T20 ಲೀಗ್ ಗಳ ವಿರುದ್ಧ ಕಿಡಿಕಾರಿದ Faf du Plessis | Oneindia Kannada

ಅಬುಧಾಬಿ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಮುಖ ಬ್ಯಾಟ್ಸ್‌ಮನ್‌ ಫಾಫ್ ಡು ಪ್ಲೆಸಿಸ್ ಟಿ20 ಕ್ರಿಕೆಟ್‌ ಲೀಗ್‌ಗಳಿಗೆ ವಿರುದ್ಧ ಹೇಳಿಕೆ ನೀಡಿದ್ದಾರೆ. ಟಿ20 ಲೀಗ್‌ಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಪಾಯ ಬಂದೊದಗಿದೆ ಎಂದು ಡು ಪ್ಲೆಸಿಸ್ ಹೇಳಿದ್ದಾರೆ. ಸದ್ಯ ಡು ಪ್ಲೆಸಿಸ್ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನಲ್ಲಿದ್ದಾರೆ.

'ಸೆನಾ' ರಾಷ್ಟ್ರಗಳಲ್ಲಿ ವಿರಾಟ್ ಕೊಹ್ಲಿಯೇ ಕಿಂಗ್; ಇದು ವಿರಾಟ್ ಕೊಹ್ಲಿ ವಿಶೇಷ ದಾಖಲೆ'ಸೆನಾ' ರಾಷ್ಟ್ರಗಳಲ್ಲಿ ವಿರಾಟ್ ಕೊಹ್ಲಿಯೇ ಕಿಂಗ್; ಇದು ವಿರಾಟ್ ಕೊಹ್ಲಿ ವಿಶೇಷ ದಾಖಲೆ

ಪಾಕಿಸ್ತಾನ್ ಸೂಪರ್ ಲೀಗ್‌ ಸೀಸನ್ 6ರಲ್ಲಿ ಪಾಲ್ಗೊಳ್ಳುತ್ತಿರುವ ಫಾಫ್ ಡು ಪ್ಲೆಸಿಸ್ ಪೇಶ್ವರ್ ಝಲ್ಮಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ನಿಲುಗಡೆಯಾಗಿದ್ದ ಪಿಎಸ್‌ಎಲ್‌ ದುಬೈನಲ್ಲಿ ಆರಂಭಗೊಳ್ಳುವುದಕ್ಕೂ ಮುನ್ನ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡು ಪ್ಲೆಸಿಸ್ ಫ್ರಾಂಚೈಸಿ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಧ್ಯೆ ಸಮತೋಲನ ಬೇಕು ಎಂದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಪಾಯಕಾರಿ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಪಾಯಕಾರಿ

'ಟಿ20 ಕ್ರಿಕೆಟ್‌ ಲೀಗ್‌ಗಳು ಒಂದರ್ಥದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಪಾಯಕಾರಿ. ವರ್ಷದಿಂದ ವರ್ಷಕ್ಕೆ ಫ್ರಾಂಚೈಸಿ ಲೀಗ್‌ಗಳ ಶಕ್ತಿ ಸತತವಾಗಿ ಬೆಳೆಯುತ್ತಲೇ ಇದೆ. ಆರಂಭದಲ್ಲಿ 2 ಪ್ರಮುಖ ಲೀಗ್‌ಗಳಿದ್ದವು. ಈಗ 4, 5, 6, 7 ಲೀಗ್‌ಗಳು ವರ್ಷ ವರ್ಷ ನಡೆಯುತ್ತಿವೆ. ಲೀಗ್‌ಗಳು ಬಲಿಷ್ಠವಾಗುತ್ತಲೇ ಇವೆ,' ಎಂದು ಡು ಪ್ಲೆಸಿಸ್ ಹೇಳಿದ್ದಾರೆ.

ಎರಡರಲ್ಲೂ ಸಮತೋಲನ ಮುಖ್ಯ

ಎರಡರಲ್ಲೂ ಸಮತೋಲನ ಮುಖ್ಯ

'ಫ್ರಾಂಚೈಸಿ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಧ್ಯೆ ಸಮತೋಲನ ಕಾಪಾಡೋದು ಮುಖ್ಯ ಎಂದು ನನಗನ್ನಿಸುತ್ತದೆ. ಫ್ರಾಂಚೈಸಿ ಕ್ರಿಕೆಟ್ಟೇ ಪ್ರಾಮುಖ್ಯತೆ ಪಡೆಯುತ್ತಾ ಹೋದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅದು ಅಪಾಯಕಾರಿ ಆಗಬಲ್ಲದು,' ಎಂದು ಡು ಪ್ಲೆಸಿಸ್ ಅಭಿಪ್ರಾಯಿಸಿದ್ದಾರೆ.

ಪ್ರಮುಖರ ಹೆಸರಿಸಿದ ಡು ಪ್ಲೆಸಿಸ್

ಪ್ರಮುಖರ ಹೆಸರಿಸಿದ ಡು ಪ್ಲೆಸಿಸ್

ಎಂಎಸ್ ಧೋನಿ ಮುಂದಾಳತ್ವದ ಸಿಎಸ್‌ಕೆ ತಂಡಕ್ಕೆ 2021ರ ಆರಂಭಿಕ ಪಂದ್ಯಗಳಲ್ಲಿ ಬಲ ತುಂಬಿದ್ದ ಡು ಪ್ಲೆಸಿಸ್, ವೆಸ್ಟ್‌ ಇಂಡೀಸ್‌ನ ಕ್ರಿಸ್ ಗೇಲ್, ಡ್ವೇನ್ ಬ್ರಾವೋ ಮೊದಲಾದ ಕೆಲ ಆಟಗಾರರನ್ನು ಉಲ್ಲೇಖಿಸಿದ್ದಾರೆ. ಇಂಥ ಪ್ರಮುಖ ಆಟಗಾರರೆಲ್ಲ ಫ್ರಾಂಚೈಸಿ ಲೀಗ್‌ಗಳತ್ತ ಹೆಚ್ಚು ಮುಖ ಮಾಡತೊಡಗಿದರೆ ಅದು ಆಯಾ ರಾಷ್ಟ್ರೀಯ ತಂಡಗಳಿಗೆ ದೊಡ್ಡ ನಷ್ಟ ಅನ್ನಿಸಲಿದೆ ಎಂದು ಪ್ಲೆಸಿಸ್ ಕಳವಳ ವ್ಯಕ್ತಪಡಿಸಿದ್ದಾರೆ.

Story first published: Monday, June 7, 2021, 14:17 [IST]
Other articles published on Jun 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X