ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತ್ರಿಕೋನ ಟಿ20 ಸರಣಿ: ಪಾಕ್ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ, ಪ್ಲೇಯಿಂಗ್ 11

Pakistan vs Banglesh T20

ಟಿ20 ವಿಶ್ವಕಪ್‌ಗೂ ಮುನ್ನ ಆತಿಥೇಯ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಕಿವೀಸ್ ನಾಡಿನಲ್ಲಿ ತ್ರಿಕೋನ ಟಿ20 ಸರಣಿಯಲ್ಲಿ ಭಾಗಿಯಾಗಿವೆ. ಶುಕ್ರವಾರ (ಅ.07) ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಆಯ್ದುಕೊಂಡಿದೆ.

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಪಿಚ್‌ನ ಲಾಭ ಪಡೆಯಲು ಎದುರಾಳಿಗೆ ಬ್ಯಾಟಿಂಗ್ ಆಹ್ವಾನಿಸಿದ್ದು, ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಉತ್ತಮ ಆರಂಭ ಪಡೆದಿದೆ. ಇತ್ತೀಚೆಗಷ್ಟೇ ಪಾಕಿಸ್ತಾನ ಏಳು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಅಂತಿಮ ಪಂದ್ಯ ಸೋತು 3-4ರ ಅಂತರದಲ್ಲಿ ಸರಣಿ ಸೋತಿತ್ತು.

ಬಾಂಗ್ಲಾದೇಶ ಇತ್ತೀಚಿಗೆ ಆಡಿರುವ ಬಹುತೇಕ ಸರಣಿಗಳಲ್ಲಿ ಮುಗ್ಗರಿಸಿದೆ. ವೆಸ್ಟ್‌ ಇಂಡೀಸ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗಳಲ್ಲಿ ತವರಿನಲ್ಲೇ ಮುಖಭಂಗ ಅನುಭವಿಸಿದೆ.

ಪಾಕಿಸ್ತಾನ ಸ್ಕ್ವಾಡ್‌ಗೆ ಮರಳಿರುವ ಶಾಹಿನ್ ಅಫ್ರಿದಿ

ಪಾಕಿಸ್ತಾನ ಸ್ಕ್ವಾಡ್‌ಗೆ ಮರಳಿರುವ ಶಾಹಿನ್ ಅಫ್ರಿದಿ

ಪಾಕಿಸ್ತಾನ ಬ್ಯಾಟಿಂಗ್ ವಿಭಾಗವು ಬಹುತೇಕ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದ್ದು, ಬೌಲಿಂಗ್‌ ಬಲಿಷ್ಠ ಪಡೆಯನ್ನ ಹೊಂದಿದೆ. ಅದ್ರಲ್ಲೂ ಇಂಜ್ಯುರಿಯಿಂದಾಗಿ ಹಲವು ಸಮಯ ಹೊರಗುಳಿದಿದ್ದ ಸ್ಟಾರ್ ಬೌಲರ್‌ ಶಾಹಿನ್ ಅಫ್ರಿದಿ ಪಾಕ್ ತಂಡಕ್ಕೆ ಮರಳಿದ್ದಾರೆ. ಆದ್ರೆ ಅಂತಿಮ ಹನ್ನೊಂದರ ಬಳಗದಲ್ಲಿ ಶಾಹಿನ್ ಸ್ಥಾನ ಪಡೆದಿಲ್ಲ. ಆದ್ರೂ ಹ್ಯಾರಿಸ್ ರೌಫ್, ನಸೀಮ್ ಶಾನಂತಹ ಉತ್ತಮ ಬೌಲಿಂಗ್ ಪಡೆಯನ್ನೇ ಹೊಂದಿದ್ದು, ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್‌ ಅನ್ನು ಈ ಕೆಳಗೆ ಕಾಣಬಹುದು.

ಭಾರತ vs ದ. ಆಫ್ರಿಕಾ: ಸಂಜು ಸ್ಯಾಮ್ಸನ್ ಹೋರಾಟ ವ್ಯರ್ಥ: ಧವನ್ ಪಡೆಗೆ ಸೋಲಿನ ಕಹಿ

ಪಾಕಿಸ್ತಾನ ತಂಡದ ಪ್ಲೇಯಿಂಗ್ 11

ಪಾಕಿಸ್ತಾನ ತಂಡದ ಪ್ಲೇಯಿಂಗ್ 11

ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಶಾನ್ ಮಸೂದ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್, ಶಾನವಾಜ್ ದಹಾನಿ

ಬೆಂಚ್: ಖುಶ್ದಿಲ್ ಶಾ, ನಸೀಮ್ ಶಾ, ಶಾಹೀನ್ ಅಫ್ರಿದಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೇನ್

56-57 ಆಟಗಾರರನ್ನ ಆಡಿಸಿದ್ರಿ, ಆದ್ರೆ ನಿಮಗೆ 1 ಉತ್ತಮ ತಂಡ ರಚಿಸಲು ಸಾಧ್ಯವಾಗ್ಲಿಲ್ಲ: ಟೀಂ ಇಂಡಿಯಾ ವಿರುದ್ಧ ಲತೀಫ್ ವಾಗ್ದಾಳಿ!

ಬಾಂಗ್ಲಾದೇಶ ತಂಡದ ಪ್ಲೇಯಿಂಗ್ 11

ಬಾಂಗ್ಲಾದೇಶ ತಂಡದ ಪ್ಲೇಯಿಂಗ್ 11

ಮೆಹಿದಿ ಹಸನ್ ಮಿರಾಜ್, ಸಬ್ಬಿರ್ ರೆಹಮಾನ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಲಿಟ್ಟನ್ ದಾಸ್, ಯಾಸಿರ್ ಅಲಿ, ನೂರುಲ್ ಹಸನ್(ನಾಯಕ/ವಿಕೆಟ್ ಕೀಪರ್), ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ನಸುಮ್ ಅಹ್ಮದ್

ಬೆಂಚ್: ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಮೊಹಮ್ಮದ್ ಸೈಫುದ್ದೀನ್, ಎಬಾಡೋತ್ ಹೊಸೈನ್

ಟಿ20 ವಿಶ್ವಕಪ್: ಭಾರತ vs ಪಾಕ್ ತಂಡಗಳ ಬ್ಯಾಟಿಂಗ್‌ನಲ್ಲಿನ ವ್ಯತ್ಯಾಸ ತಿಳಿಸಿದ ಸಂಜಯ್ ಬಂಗಾರ್

ತ್ರಿಕೋನ ಸರಣಿ: ಮೂರು ತಂಡಗಳು ತಲಾ ಎರಡು ಬಾರಿ ಮುಖಾಮುಖಿ

ತ್ರಿಕೋನ ಸರಣಿ: ಮೂರು ತಂಡಗಳು ತಲಾ ಎರಡು ಬಾರಿ ಮುಖಾಮುಖಿ

ನ್ಯೂಜಿಲೆಂಡ್‌ನಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ ತ್ರಿಕೋನ ಟಿ20 ಸರಣಿಯು ಅಕ್ಟೋಬರ್ 14ರವರೆಗೆ ನಡೆಯಲಿದೆ. ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಲೀಗ್‌ ಹಂತದಲ್ಲಿ ತಲಾ ಎರಡು ಬಾರಿ ಮುಖಾಮುಖಿಯಾಗಲಿವೆ. ಅಂದ್ರೆ ಪ್ರತಿ ತಂಡವು ನಾಲ್ಕು ಟಿ20 ಪಂದ್ಯವನ್ನು ಆಡಲಿದೆ. ಈ ಹಂತದಲ್ಲಿ ಹೆಚ್ಚು ಅಂಕಗಳಿಸಿದ ಎರಡು ತಂಡಗಳು ಅಕ್ಟೋಬರ್ 14ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಒಂದೇ ಮೈದಾನ ಆತಿಥ್ಯ ವಹಿಸಿದೆ.

Story first published: Friday, October 7, 2022, 8:08 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X