ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಅಬ್ಬರಿಸಿದ ಹೂಡಾ, ಸಂಜು: ಭಾರತ vs ಡರ್ಬಿಶೈರ್ ಅಭ್ಯಾಸ ಪಂದ್ಯದಲ್ಲಿ ಗೆದ್ದವರು ಯಾರು?

T20 warm-up Match: Deepak Hoodas half-century leads India past Derbyshire

ಡರ್ಬಿಶೈರ್ ವಿರುದ್ಧ ಭಾರತ ತಂಡ ಟಿ20 ಅಭ್ಯಾಸ ಪಂದ್ಯದಲ್ಲಿ ಆಡುತ್ತಿದ್ದು ಈ ಪಂದ್ಯದಲ್ಲಿ ಭಾರತದ ದೀಪಕ್ ಹೂಡಾ ಹಾಗೂ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಶಾನ್ ಮಸೂದ್ ನೇತೃತ್ವದ ಡರ್ಬಿಶೈರ್ ತಂಡದ ವಿರುದ್ಧ ದಿನೇಶ್ ಕಾರ್ತಿಕ್ ನೇತೃತ್ವದ ಭಾರತ ತಂಡ 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.

ಡರ್ಬಿಶೈರ್ ವಿರುದ್ಧಧ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಿದ್ದ ಭಾರತ ತಂಡ ಕಣಕ್ಕಿಳಿದಿತ್ತು. ಆದರೆ ಪ್ರಮುಖ ಆಟಗಾರರಾದ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಬುವನೇಶ್ವರ್ ಕುಮಾರ್, ಚಾಹಲ್ ಈ ಪಂದ್ಯದಿಂದ ಇಶ್ರಾಂತಿ ಪಡೆದಿದ್ದರು. ಹೀಗಾಗಿ ದಿನೇಶ್ ಕಾರ್ತಿಕ್ ತಂಡನ್ನು ಮುನ್ನಡೆಸಿದ್ದಾರೆ. ಹೆಚ್ಚಾಗಿ ಯುವ ಆಟಗಾರರೇ ತುಂಬಿದ್ದ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಮಿಂಚಿದೆ.

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿ

ಮತ್ತೆ ಗಾಯಕ್ವಾಡ್ ವಿಫಲ; ಸಂಜು, ಹೂಡಾ ಆಸರೆ

ಮತ್ತೆ ಗಾಯಕ್ವಾಡ್ ವಿಫಲ; ಸಂಜು, ಹೂಡಾ ಆಸರೆ

ಇನ್ನು 150 ರನ್‌ಗಳ ಗುರಿಯನ್ನು ಪಡೆದ ಭಾರತ ತಂಡ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರನ್ನು ಶೀಘ್ರವಾಗಿ ಕಳೆದುಕೊಂಡಿತು. ಈ ಮೂಲಕ ತಮ್ಮ ಕಳಪೆ ಪ್ರದರ್ಶನ ಮುಂದುವರಿದಿದ್ದಾರೆ ಗಾಯಕ್ವಾಡ್. ನಂತರ ಜೊತೆಯಾದ ಸಂಜು ಸ್ಯಾಮ್ಸನ್ ಹಾಗೂ ದೀಪ್ ಹೂಡಾ 51 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ ಬೇರ್ಪಟ್ಟ ಬಳಿಕ ಹೂಡಾ ಜೊತೆ ಸೇರಿದ ಸೂರ್ಯಕುಮಾರ್ ಯಾದವ್ ಗೆಲುವಿನ ಸನಿಹಕ್ಕೆ ತಲುಪಿಸಿದರು.

ಸಿಕ್ಕ ಅವಕಾಶ ಭರ್ಜರಿಯಾಗಿ ಬಳಸಿಕೊಳ್ಳುತ್ತಿರುವ ಹೂಡಾ

ಸಿಕ್ಕ ಅವಕಾಶ ಭರ್ಜರಿಯಾಗಿ ಬಳಸಿಕೊಳ್ಳುತ್ತಿರುವ ಹೂಡಾ

ಇನ್ನು ದೀಪಕ್ ಹೂಡಾ ಇತ್ತೀಚೆಗೆ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ನಿಡಿದ ಅದ್ಭುತ ಪ್ರದರ್ಶನದ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡ ದೀಪಕ್ ಹೂಡಾ ಐರ್ಲೆಂಡ್ ವಿರುದ್ಧಧ ಸರಣಿಯಲ್ಲಿ ತಮ್ಮ ಚೊಚ್ಚಲ ಟಿ20 ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಇದೀಗ ಈ ಫಾರ್ಮ್‌ಅನ್ನು ಅಭ್ಯಾಸ ಪಂದ್ಯದಲ್ಲಿಯೂ ಮುಂದುವರಿಸಿದ್ದು ಎಲ್ಲರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಡರ್ಬಿಶೈರ್ ವಿರುದ್ಧದ ಪಂದ್ಯದಲ್ಲಿ 59 ರನ್‌ಗಳಿಸಿದರು ಇವರಿಗೆ ಉತ್ತಮವಾಗಿ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್ 36 ರನ್ ಗಳಿಸಿದ್ದಾರೆ.

ಗಮನಸೆಳೆದ ಯುವ ಬೌಲಿಂಗ್ ಪಡೆ

ಗಮನಸೆಳೆದ ಯುವ ಬೌಲಿಂಗ್ ಪಡೆ

ಇನ್ನು ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗ ಸಂಪೂರ್ಣ ಯುವ ಆಟಗಾರರಿಂದಲೇ ತುಂಬಿತ್ತು ಎಂಬುದು ಗಮನಾರ್ಹ. ಭಾರತದ ಈ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದು ಡರ್ಬಿಶೈರ್ ತಂಡವನ್ನು 150 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅರ್ಷ್‌ದೀಪ್ ಸಿಂಗ್ ಹಾಗೂ ಉಮ್ರಾನ್ ಮಲಿಕ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ ಅಕ್ಷರ್ ಪಟೇಲ್ ಹಾಗೂ ವೆಂಕಟೇಶ್ ಐಯ್ಯರ್ ತಲಾ ಒಂದು ವಿಕೆಟ್ ಸಂಪಾದಿಸಿದ್ದಾರೆ.

ರಿಷಬ್ ಪಂತ್ ದಾಖಲೆಯ ಶತಕ ನೋಡಿ ಡಗೌಟ್ ನಲ್ಲಿ ಕೂತಿದ್ದ ರಾಹುಲ್ ದ್ರಾವಿಡ್ ಹೇಗಾಡಿದ್ರು ನೋಡಿ.. | OneIndia Kannada
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಪ್ಲೇಯಿಂಗ್ XI: ಶಾನ್ ಮಸೂದ್ (ನಾಯಕ), ಲೂಯಿಸ್ ರೀಸ್, ವೇಯ್ನ್ ಮ್ಯಾಡ್ಸೆನ್, ಲೆಯುಸ್ ಡು ಪ್ಲೂಯ್, ಬ್ರೂಕ್ ಅತಿಥಿ (ವಾಕ್), ಮ್ಯಾಟಿ ಮೆಕಿರ್ನಾನ್, ಅಲೆಕ್ಸ್ ಹ್ಯೂಸ್, ಬೆನ್ ಐಚಿಸನ್, ಮಾರ್ಕ್ ವ್ಯಾಟ್, ಜಾರ್ಜ್ ಸ್ಕ್ರಿಮ್‌ಶಾ, ಹಿಲ್ಟನ್ ಕಾರ್ಟ್‌ರೈಟ್
ಬೆಂಚ್: ಹೇಡನ್ ಕೆರ್, ಅಲೆಕ್ಸ್ ಥಾಮ್ಸನ್, ಅನುಜ್ ದಾಲ್, ಸ್ಯಾಮ್ಯುಯೆಲ್ ಕಾನರ್ಸ್, ಹ್ಯಾರಿ ಕ್ಯಾಮ್

ಇಂಡಿಯನ್ಸ್ ಪ್ಲೇಯಿಂಗ್ XI
ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್ (c & wk), ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷ್ದೀಪ್ ಸಿಂಗ್, ಉಮ್ರಾನ್ ಮಲಿಕ್
ಬೆಂಚ್: ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ರಾಹುಲ್ ತ್ರಿಪಾಠಿ

Story first published: Saturday, July 2, 2022, 18:22 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X