ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಾಚಿಕೆಗೇಡಿನ ಆಟ': ಪಾಕ್ ವಿರುದ್ಧ ಸಿಕ್ಸರ್ ಬಾರಿಸಿದ ವಾರ್ನರ್‌ ಕುರಿತು ಕಿಡಿಕಾರಿದ ಗಂಭೀರ್!

T20 World Cup 2021: Gautam Gambhir slams David Warner for hitting Mohammed Hafizs two bounce delivery for a six

ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ಫೈನಲ್ ಹಂತಕ್ಕೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಲಗ್ಗೆ ಇಟ್ಟಿವೆ. ಹೌದು, ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಫೈನಲ್ ಪಂದ್ಯಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ನಂತರ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ.

ಟೀಮ್ ಇಂಡಿಯಾ ಒಳಗೇ ಮುಂಬೈ ಗುಂಪಿದೆ, ಕೊಹ್ಲಿ ಆದಷ್ಟು ಬೇಗ ತಂಡವನ್ನೂ ತ್ಯಜಿಸಲಿದ್ದಾರೆ: ಮಾಜಿ ಕ್ರಿಕೆಟಿಗಟೀಮ್ ಇಂಡಿಯಾ ಒಳಗೇ ಮುಂಬೈ ಗುಂಪಿದೆ, ಕೊಹ್ಲಿ ಆದಷ್ಟು ಬೇಗ ತಂಡವನ್ನೂ ತ್ಯಜಿಸಲಿದ್ದಾರೆ: ಮಾಜಿ ಕ್ರಿಕೆಟಿಗ

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನವೆಂಬರ್‌ 11ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಹೀಗೆ ಪಾಕಿಸ್ತಾನ ತಂಡ ನೀಡಿದ 177 ರನ್‌ಗಳ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಆಸ್ಟ್ರೇಲಿಯಾ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸುವುದರ ಮೂಲಕ 5 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಪಂದ್ಯವನ್ನು ಪ್ರವೇಶಿಸಿತು. ಹೀಗೆ ಆಸ್ಟ್ರೇಲಿಯಾ ತಂಡ ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ರನ್ ಚೇಸ್ ಮಾಡಿ ಜಯ ಸಾಧಿಸಿದ್ದಕ್ಕೆ ಕಾರಣ ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟಾಯಿನಿಸ್ ಮತ್ತು ಮ್ಯಾಥ್ಯೂ ವೇಡ್ ಅವರ ಅಬ್ಬರದ ಆಟ. ಅದರಲ್ಲಿಯೂ ಆರಂಭಿಕನಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮತ್ತು ಅಂತಿಮವಾಗಿ ಹ್ಯಾಟ್ರಿಕ್ ಸಿಕ್ಸರ್ ಚಚ್ಚುವುದರ ಮೂಲಕ ಅಬ್ಬರಿಸಿದ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿಲ್ಲ, ತಂಡದಿಂದಲೇ ಆಚೆ ಹಾಕಲಾಗಿದೆ; ಕಾರಣ ಆ ಓರ್ವ ಆಟಗಾರ!

ಹೀಗೆ ಪಾಕಿಸ್ತಾನದ ವಿರುದ್ಧ ಅಬ್ಬರಿಸಿದ ಡೇವಿಡ್ ವಾರ್ನರ್ ಮತ್ತು ಮ್ಯಾಥ್ಯೂ ವೇಡ್ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಕೆಲವರು ಮಾತ್ರ ಮೊಹಮ್ಮದ್ ಹಫೀಜ್ ಎಸೆತಕ್ಕೆ ಡೇವಿಡ್ ವಾರ್ನರ್ ಸಿಕ್ಸರ್ ಬಾರಿಸಿದ್ದರ ಕುರಿತು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಗುಂಪಿಗೆ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಸೇರಿಕೊಂಡಿದ್ದು ಡೇವಿಡ್ ವಾರ್ನರ್ ಕುರಿತಾಗಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವುದರ ಮೂಲಕ ತಮ್ಮ ಆಕ್ರೋಶವನ್ನು ಈ ಕೆಳಕಂಡಂತೆ ಹೊರಹಾಕಿದ್ದಾರೆ..

ವಾರ್ನರ್ ಆ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದು ನಾಚಿಕೆಗೇಡು ಎಂದ ಗೌತಮ್ ಗಂಭೀರ್

ವಾರ್ನರ್ ಆ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದು ನಾಚಿಕೆಗೇಡು ಎಂದ ಗೌತಮ್ ಗಂಭೀರ್

ಆಸ್ಟ್ರೇಲಿಯದ ಬ್ಯಾಟಿಂಗ್ ವೇಳೆ 8ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಎಸೆತವೊಂದನ್ನು ಹಾಕುವಾಗ ನಿಯಂತ್ರಣ ಕಳೆದುಕೊಂಡು ಎರಡರಿಂದ ಮೂರು ಪಿಚ್ ಬೀಳುವಂತಹ ಎಸೆತವನ್ನು ಪಿಚ್‌ನಿಂದ ತೀರ ಹೊರಕ್ಕೆ ಹಾಕಿಬಿಟ್ಟರು. ಹೀಗೆ ನಿಯಂತ್ರಣವನ್ನು ಕಳೆದುಕೊಂಡು ಮೊಹಮ್ಮದ್ ಹಫೀಜ್ ಎಸೆದ ಎಸೆತಕ್ಕೆ ಕಣದಲ್ಲಿದ್ದ ಡೇವಿಡ್ ವಾರ್ನರ್ ಪಿಚ್‌ನಿಂದ ಹೊರಹೋಗುತ್ತಿದ್ದ ಚೆಂಡಿನ ಸಮೀಪಕ್ಕೆ ಬಂದು ಸಿಕ್ಸರ್ ಬಾರಿಸಿದ್ದರು. ಹೀಗೆ ಡೇವಿಡ್ ವಾರ್ನರ್ ಬೌಲರ್ ನಿಯಂತ್ರಣ ಕಳೆದುಕೊಂಡು ಎಸೆದ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದಕ್ಕೆ ಗೌತಮ್ ಗಂಭೀರ್ ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಜರಿದಿದ್ದಾರೆ. "ಡೇವಿಡ್ ವಾರ್ನರ್ ಈ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಕ್ರಿಕೆಟ್ ಆಟದ ಚಿಂತಾಜನಕ ಪರಿಸ್ಥಿತಿಯನ್ನು ತೋರಿಸಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಏನಂತೀರಾ ರವಿಚಂದ್ರನ್ ಅಶ್ವಿನ್" ಎಂದು ಭಾರತದ ಆಟಗಾರ ರವಿಚಂದ್ರನ್ ಅಶ್ವಿನ್ ಅವರನ್ನು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸುವ ಮೂಲಕ ಗೌತಮ್ ಗಂಭೀರ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಕೆಲ ಕ್ರಿಕೆಟ್ ಅಭಿಮಾನಿಗಳಿಂದಲೂ ವ್ಯಕ್ತವಾಗುತ್ತಿದೆ ವಿರೋಧ

ಕೆಲ ಕ್ರಿಕೆಟ್ ಅಭಿಮಾನಿಗಳಿಂದಲೂ ವ್ಯಕ್ತವಾಗುತ್ತಿದೆ ವಿರೋಧ

ಗೌತಮ್ ಗಂಭೀರ್ ಮಾತ್ರವಲ್ಲದೆ ಇನ್ನೂ ಕೆಲ ಕ್ರಿಕೆಟ್ ಅಭಿಮಾನಿಗಳು ಕೂಡ ಡೇವಿಡ್ ವಾರ್ನರ್ ಹೊಡೆತಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೌಲರ್ ನಿಯಂತ್ರಣ ಕಳೆದುಕೊಂಡು ತಪ್ಪಾದ ಎಸೆತವನ್ನು ಎಸೆದಿದ್ದೇನೆ ಎಂದು ತಿಳಿದ ಕೂಡಲೇ ಹಲವಾರು ದಿನಗಳಿಂದ ಕ್ರಿಕೆಟ್ ಆಡುತ್ತಿರುವ, ಸಾಕಷ್ಟು ಅನುಭವಿ ಎಂದು ಕರೆಸಿಕೊಂಡಿರುವ ಡೇವಿಡ್ ವಾರ್ನರ್ ಅವರು ಆ ಎಸೆತಕ್ಕೆ ಬ್ಯಾಟ್ ಬೀಸದೇ ಸುಮ್ಮನೆ ಇರಬೇಕಿತ್ತು. ಆದರೆ ಡೇವಿಡ್ ವಾರ್ನರ್ ಅಂತಹ ತಪ್ಪಾದ ಎಸೆತಕ್ಕೂ ಸಿಕ್ಸರ್ ಬಾರಿಸಿ ಕ್ರೀಡಾ ಸ್ಫೂರ್ತಿಯನ್ನು ಮರೆತುಬಿಟ್ಟಿದ್ದಾರೆ ಎಂದು ಕೆಲ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಡೇವಿಡ್ ವಾರ್ನರ್ ಔಟ್ ಕೂಡ ಹುಟ್ಟುಹಾಕಿದೆ ವಿವಾದ!

ಡೇವಿಡ್ ವಾರ್ನರ್ ಔಟ್ ಕೂಡ ಹುಟ್ಟುಹಾಕಿದೆ ವಿವಾದ!

ಇನ್ನೂ ಇದೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ಕುರಿತಾಗಿ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಹೌದು, 11ನೇ ಓವರ್ ಮಾಡಲು ಬಂದ ಶಬಾದ್ ಖಾನ್ ಎಸೆತಕ್ಕೆ ಡೇವಿಡ್ ವಾರ್ನರ್ ಬ್ಯಾಟ್ ಬೀಸಿದ್ದರು. ಆದರೆ ಸರಿಯಾದ ರೀತಿಯಲ್ಲಿ ಹೊಡೆಯಲು ಡೇವಿಡ್ ವಾರ್ನರ್ ವಿಫಲರಾದ ಕಾರಣ ಚೆಂಡು ವಿಕೆಟ್ ಕೀಪರ್ ಕೈ ಸೇರಿತ್ತು. ಈ ಎಸೆತಕ್ಕೆ ಅಂಪೈರ್ ಕೀಪರ್ ಕ್ಯಾಚ್ ಔಟ್ ಎಂಬ ತೀರ್ಪನ್ನು ನೀಡಿದರು. ಹೀಗೆ ಅಂಪೈರ್ ತೀರ್ಪಿನ ನಂತರ ಡೇವಿಡ್ ವಾರ್ನರ್ ಯಾವುದೇ ಪ್ರತಿಕ್ರಿಯೆ ನೀಡದೆ ಮೈದಾನದಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಆದರೆ ಸತ್ಯಾಂಶವೇನೆಂದರೆ ಡೇವಿಡ್ ವಾರ್ನರ್ ಹೊಡೆಯಲು ಪ್ರಯತ್ನಿಸಿದ್ದ ಎಸೆತದಲ್ಲಿ ಚೆಂಡು ಬ್ಯಾಟಿಗೆ ತಾಕಿರಲಿಲ್ಲ, ಹೀಗಾಗಿ ಡೇವಿಡ್ ವಾರ್ನರ್ ಔಟ್ ಇಲ್ಲದಿದ್ದರೂ ಪೆವಿಲಿಯನ್ ಕಡೆ ನಡೆದರು. ಅಷ್ಟೇ ಅಲ್ಲದೆ ಓರ್ವ ಬ್ಯಾಟ್ಸ್‌ಮನ್‌ಗೆ ಚೆಂಡು ಬ್ಯಾಟಿಗೆ ತಾಕಿದೆಯೋ ಇಲ್ಲವೋ ಎಂಬುದು ಚೆನ್ನಾಗಿ ತಿಳಿದಿರುತ್ತದೆ. ಡೇವಿಡ್ ವಾರ್ನರ್ ಬಾರಿಸಲು ಯತ್ನಿಸಿದಾಗ ಚೆಂಡಿಗೂ ಮತ್ತು ಬ್ಯಾಟಿಗೂ ಅಪಾರವಾದ ಅಂತರವಿತ್ತು. ಈ ವಿಷಯ ಅನುಭವಿ ಬ್ಯಾಟ್ಸ್‌ಮನ್‌ ಆದ ಡೇವಿಡ್ ವಾರ್ನರ್ ಅವರಿಗೆ ತಿಳಿಯದೆ ಹೋಯಿತೇ ಎಂದು ನೆಟ್ಟಿಗರು ಡೇವಿಡ್ ವಾರ್ನರ್ ನಡೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಔಟ್ ಇಲ್ಲದಿದ್ದರೂ ಡೇವಿಡ್ ವಾರ್ನರ್ ಅಂಪೈರ್ ನಿರ್ಣಯವನ್ನು ಒಪ್ಪಿಕೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕುವ ಬದಲು ಡಿ.ಆರ್.ಎಸ್ ನಿಯಮವನ್ನು ಉಪಯೋಗಿಸಿಕೊಳ್ಳಬಹುದಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

David Warner ಹೊಡೆದ 6 ಈಗ ಎಲ್ಲೆಡೆ ವೈರಲ್ | Oneindia Kannada

Story first published: Friday, November 12, 2021, 12:30 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X