ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: ಕಾರಣ ತಿಳಿಸಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ಕೊಹ್ಲಿ!

T20 World Cup 2021: KL Rahul and Rohit Sharma will open and Ill bat at number 3 in the tournament says Virat Kohli

ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಿನಗಳಿಂದ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಗೆ ಕಾರಣವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತ್ಯವಾಗಿದ್ದು, ಸದ್ಯ ಇದೀಗ ಎಲ್ಲರ ಚಿತ್ತ ಯುಎಇಯಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯತ್ತ ನೆಟ್ಟಿದೆ. ಇನ್ನು ಟೂರ್ನಿಗೆ ಕಳೆದ ಭಾನುವಾರದಿಂದ ಆರಂಭವಾಗಿರುವ ಅರ್ಹತಾ ಸುತ್ತಿನ ಪಂದ್ಯಗಳಿಂದ ಚಾಲನೆ ದೊರೆತಿದ್ದು ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23, ಶನಿವಾರದಿಂದ ಆರಂಭಗೊಳ್ಳಲಿವೆ.

ಐಪಿಎಲ್ 2021: ಟೂರ್ನಿಯಲ್ಲಿ ಅತಿ ಕೆಟ್ಟ ಪ್ರದರ್ಶನ ನೀಡಿದ 11 ಆಟಗಾರರು ಇವರೇ ನೋಡಿ!ಐಪಿಎಲ್ 2021: ಟೂರ್ನಿಯಲ್ಲಿ ಅತಿ ಕೆಟ್ಟ ಪ್ರದರ್ಶನ ನೀಡಿದ 11 ಆಟಗಾರರು ಇವರೇ ನೋಡಿ!

ಸೂಪರ್ 12 ಹಂತದ ಪಂದ್ಯಗಳು ಆರಂಭವಾಗುವ ಮುನ್ನ ಕೆಲ ಅಭ್ಯಾಸ ಪಂದ್ಯಗಳು ನಡೆಯಲಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಲಿದೆ. ಈ ಅಭ್ಯಾಸ ಪಂದ್ಯಗಳ ಪೈಕಿ ಮೊದಲನೇ ಪಂದ್ಯವು ಇಂದು ( ಅಕ್ಟೋಬರ್ 18 ) ದುಬೈನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸುತ್ತಿವೆ. ಹಾಗೂ ಭಾರತದ ಪಾಲಿನ ಎರಡನೇ ಅಭ್ಯಾಸ ಪಂದ್ಯವು ಅಕ್ಟೋಬರ್ 20, ಬುಧವಾರದಂದು ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ ತಂಡವು ಎದುರಾಳಿಯಾಗಲಿದೆ.

ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!

ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಅಭ್ಯಾಸ ಪಂದ್ಯ ಸದ್ಯ ದುಬೈನ ಐಸಿಸಿ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯತ್ತಿದೆ. ಈ ಪಂದ್ಯದ ಟಾಸ್ ಸಮಯದಲ್ಲಿ ಪಂದ್ಯದ ಕುರಿತು ಹಾಗೂ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ ತಂಡದ ಕುರಿತು ವಿಶೇಷವಾಗಿ ಮಾತನಾಡಿದ ವಿರಾಟ್ ಕೊಹ್ಲಿ ಈ ಹಿಂದೆ ತಾವು ರೋಹಿತ್ ಶರ್ಮಾ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದೇನೆ ಎಂದು ಘೋಷಿಸಿದ್ದ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹೌದು, ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತಾನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿಲ್ಲ ಎಂಬ ವಿಷಯವನ್ನು ಅಭ್ಯಾಸ ಪಂದ್ಯಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಈ ಹಿಂದೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಿಸಿ ಇದೀಗ ಟ್ವೆಂಟಿ ವಿಶ್ವಕಪ್ ಟೂರ್ನಿಯ ಆರಂಭದ ಹಂತದಲ್ಲಿ ಈ ರೀತಿಯ ನಿರ್ಧಾರವನ್ನು ಕೈಗೊಳ್ಳಲು ಕಾರಣವೇನೆಂಬುದನ್ನು ಕೂಡ ಬಿಚ್ಚಿಟ್ಟಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.

ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಆರಂಭಿಕ ಆಟಗಾರರು

ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಆರಂಭಿಕ ಆಟಗಾರರು

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ಮಾತನಾಡಿದ್ದ ವಿರಾಟ್ ಕೊಹ್ಲಿ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮತ್ತು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳಲ್ಲಿ ಸ್ವತಃ ತಾವೇ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಘೋಷಣೆಯನ್ನು ಮಾಡಿದ್ದರು. ಆದರೆ ಇದೀಗ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದ ಟಾಸ್ ಮುಗಿದ ನಂತರ ಈ ಕುರಿತಾಗಿ ಮಾತನಾಡಿರುವ ವಿರಾಟ್ ಕೊಹ್ಲಿ ತಾನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದು ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

ಕೆಎಲ್ ರಾಹುಲ್‌ಗಿಂತ ಮೇಲಿನ ಕ್ರಮಾಂಕದಲ್ಲಿ ಆಡುವುದು ಕಷ್ಟ

ಕೆಎಲ್ ರಾಹುಲ್‌ಗಿಂತ ಮೇಲಿನ ಕ್ರಮಾಂಕದಲ್ಲಿ ಆಡುವುದು ಕಷ್ಟ

ಇನ್ನು ತಾವು ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದಿರುವುದರ ಕುರಿತು ಕಾರಣವನ್ನು ಕೂಡ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. 'ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವ ಮುನ್ನ ಇದ್ದ ಸನ್ನಿವೇಶಗಳೇ ಬೇರೆ, ಪ್ರಸ್ತುತ ಇರುವ ಸನ್ನಿವೇಶಗಳೇ ಬೇರೆ. ಐಪಿಎಲ್ ನಂತರ ಕೆಎಲ್ ರಾಹುಲ್‌ಗಿಂತ ಮೇಲಿನ ಕ್ರಮಾಂಕದಲ್ಲಿ ಆಡುವುದು ಸರಿಯಾದ ನಿರ್ಧಾರವಲ್ಲ ಮತ್ತು ಕಷ್ಟ. ಇನ್ನು ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ಉತ್ತಮ ಆರಂಭ ನೀಡುವ ಗುಣಗಳನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರು ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದು ನಾನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದೇನೆ' ಎಂದು ವಿರಾಟ್ ಕೊಹ್ಲಿ ತಿಳಿಸಿದರು.

ತನ್ನ ಸ್ಥಾನವನ್ನು KL ರಾಹುಲ್ ಗೆ ದಾನ ಮಾಡಿದ ವಿರಾಟ್ | Oneindia Kannada
ಕೆಎಲ್ ರಾಹುಲ್ ಐಪಿಎಲ್ ಫಾರ್ಮ್ ಕೊಹ್ಲಿ ನಿರ್ಧಾರವನ್ನೇ ಬದಲಿಸಿತು!

ಕೆಎಲ್ ರಾಹುಲ್ ಐಪಿಎಲ್ ಫಾರ್ಮ್ ಕೊಹ್ಲಿ ನಿರ್ಧಾರವನ್ನೇ ಬದಲಿಸಿತು!

ಇನ್ನು ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ 13 ಪಂದ್ಯಗಳನ್ನಾಡಿ 626 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧ ಶತಕಗಳು ಕೂಡ ಸೇರಿದ್ದು, ಅಜೇಯ 98 ರನ್ ಕೆಎಲ್ ರಾಹುಲ್ ಟೂರ್ನಿಯಲ್ಲಿ ಬಾರಿಸಿರುವ ಅಧಿಕ ರನ್ ಆಗಿದೆ. ಹೀಗೆ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ನೀಡಿದ ಉತ್ತಮ ಪ್ರದರ್ಶನದಿಂದ ವಿರಾಟ್ ಕೊಹ್ಲಿ ಆರಂಭಿಕ ಆಟಗಾರನ ಸ್ಥಾನವನ್ನು ಕೆ ಎಲ್ ರಾಹುಲ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

Story first published: Monday, October 18, 2021, 21:15 [IST]
Other articles published on Oct 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X