T20 World Cup 2022: 14 ಜನರ ತಂಡದೊಂದಿಗೆ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರಯಾಣ

ರೋಹಿತ್ ಶರ್ಮಾ ಮತ್ತು ತಂಡ ಗುರುವಾರ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಆದರೆ ಭಾರತ ತಂಡದಲ್ಲಿ 15 ಆಟಗಾರರಿಲ್ಲ. ಟಿ20 ವಿಶ್ವಕಪ್‌ನಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿರುವುದರಿಂದ, ಬಿಸಿಸಿಐ ಇನ್ನೂ ಬದಲಿ ಆಟಗಾರನನ್ನು ಹೆಸರಿಸಿಲ್ಲ. ಮೀಸಲು ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದುಮ ಸರಣಿ ಮುಕ್ತಾಯವಾದ ನಂತರ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ.

IND vs SA 2022: ಐಪಿಎಲ್‌ ಹರಾಜಿನ ಬಗ್ಗೆ ಯೋಚಿಸುತ್ತಿಲ್ಲ ಎಂದ ದಕ್ಷಿಣ ಆಫ್ರಿಕಾ ಬ್ಯಾಟರ್IND vs SA 2022: ಐಪಿಎಲ್‌ ಹರಾಜಿನ ಬಗ್ಗೆ ಯೋಚಿಸುತ್ತಿಲ್ಲ ಎಂದ ದಕ್ಷಿಣ ಆಫ್ರಿಕಾ ಬ್ಯಾಟರ್

ಮೀಸಲು ಆಟಗಾರರು ಇಲ್ಲದಿದ್ದರೂ, ಟೀಂ ಇಂಡಿಯಾ ನೆಟ್‌ ಬೌಲರ್ ಗಳ ಜೊತೆ ಪ್ರಯಾಣ ಮಾಡಲಿದೆ. ಪರ್ತ್‌ನ ಡಬ್ಲ್ಯೂಎಸಿಎ ಶಿಬಿರದಲ್ಲಿ ಟೀಂ ಇಂಡಿಯಾ ನೆಟ್‌ ಬೌಲರ್ ಗಳ ಜೊತೆ ಅಭ್ಯಾಸ ಮಾಡಲಿದೆ.

ಹಿರಿಯ ವೇಗಿ ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಅವರು ಈ ವಾರ ತಮ್ಮ ಫಿಟ್ನೆಸ್ ಪರೀಕ್ಷೆಗಾಗಿ ಎನ್‌ಸಿಎಗೆ ಹಾಜರಾಗಲಿದ್ದಾರೆ, ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿದೆ. ಉಳಿದಂತೆ ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹರ್ ನಡುವೆ ತಂಡಕ್ಕೆ ಸೇರಲು ಪೈಪೋಟಿ ಇದೆ. ಭಾರತದ ಬೌಲಿಂಗ್ ಕಳವಳಕಾರಿಯಾಗಿದೆ ಎಂದು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಿದೆ

ಆಸ್ಟ್ರೇಲಿಯಾ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಿದೆ

"ಬಹಳಷ್ಟು ಆಟಗಾರರು ಆಸ್ಟ್ರೇಲಿಯಾಕ್ಕೆ ಹೋಗಿಲ್ಲ. ಅದಕ್ಕಾಗಿಯೇ ನಾವು ಅಲ್ಲಿಗೆ ಬೇಗನೆ ಹೋಗುತ್ತಿದ್ದೇವೆ ಮತ್ತು ನಾವು ಅಲ್ಲಿ ಏನು ಮಾಡುತ್ತೇವೆ ಎಂಬುದನ್ನು ನೋಡಲು ಪರ್ತ್‌ನಲ್ಲಿ ಬೌನ್ಸಿ ಪಿಚ್‌ಗಳಲ್ಲಿ ಆಡುತ್ತೇವೆ. ಕೇವಲ 7-8 ಆಟಗಾರರು ಮಾತ್ರ ಆಸ್ಟ್ರೇಲಿಯಾದಲ್ಲಿ ಈ ಮೊದಲು ಆಡಿದ್ದಾರೆ. ನಾವು ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಒಂದೆರಡು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿದ್ದೇವೆ ಜೊತೆಗೆ ಎರಡು ಐಸಿಸಿ ಅಭ್ಯಾಸ ಪಂದ್ಯಗಳಿವೆ" ಎಂದು ರೋಹಿತ್ ಶರ್ಮಾ ಹೇಳಿದರು.

ಅಕ್ಟೋಬರ್ 17 ಮತ್ತು 19 ರಂದು ಟೀಂ ಇಂಡಿಯಾ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ.

ಬೌಲಿಂಗ್ ವಿಭಾಗದ ಸಮಸ್ಯೆ

ಬೌಲಿಂಗ್ ವಿಭಾಗದ ಸಮಸ್ಯೆ

ಪ್ರಮುಖ ಆಟಗಾರರು ಗಾಯಗೊಂಡಿರುವುದು ಟೀಂ ಇಂಡಿಯಾವನ್ನು ಮಾತ್ರ ಕಾಡುತ್ತಿಲ್ಲ. ಭಾರತ ತಂಡದ ಭಾರತ ಅಂತಿಮ ಓವರ್ ಬೌಲಿಂಗ್ ಸಂಕಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತವು ಕೊನೆಯ ಐದು ಓವರ್‌ಗಳಲ್ಲಿ 73 ರನ್‌ಗಳನ್ನು ಬಿಟ್ಟುಕೊಟ್ಟಿತು. ಇದು ಭಾರತ ಬೌಲಿಂಗ್‌ನ ದೌರ್ಬಲ್ಯವನ್ನು ಎತ್ತಿ ತೋರಿಸಿದೆ.

ಬುಮ್ರಾ ಬದಲಿಗೆ ಯಾರಿಗೆ ಅವಕಾಶ

ಬುಮ್ರಾ ಬದಲಿಗೆ ಯಾರಿಗೆ ಅವಕಾಶ

ಭಾರತಕ್ಕೆ ದೀಪಕ್ ಚಹಾರ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಮೂರು ಆಯ್ಕೆಗಳಿವೆ. ಐಪಿಎಲ್ ನಂತರ ಮೊಹಮ್ಮದ್ ಶಮಿ ಯಾವುದೇ ಪಂದ್ಯವನ್ನಾಡಿಲ್ಲ, ಆದ್ದರಿಂದ ದೀಪಕ್ ಚಹಾರ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ದೀಪಕ್ ಚಾಹರ್ ಅಥವಾ ಮೊಹಮ್ಮದ್ ಶಮಿ 15ರ ಸದಸ್ಯರ ಬಳಗದಲ್ಲಿ ಅವಕಾಶ ಪಡೆದರೆ, ಮೊಹಮ್ಮದ್ ಸಿರಾಜ್ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅವಕಾಶವಿದೆ.

 ಅ. 15ರಂದು ಬದಲಿ ಆಟಗಾರನ ಆಯ್ಕೆ

ಅ. 15ರಂದು ಬದಲಿ ಆಟಗಾರನ ಆಯ್ಕೆ

"ನಾವು ನೋಡುತ್ತೇವೆ. ನಮಗೆ ಅಕ್ಟೋಬರ್ 15 ರವರೆಗೆ ಸಮಯವಿದೆ. ಶಮಿ ನಿಸ್ಸಂಶಯವಾಗಿ ಸ್ಟ್ಯಾಂಡ್‌ಬೈಸ್‌ನಲ್ಲಿರುವ ವ್ಯಕ್ತಿ. ದುರದೃಷ್ಟವಶಾತ್, ಅವರು ಈ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಆ ದೃಷ್ಟಿಕೋನದಿಂದ ಇದು ಸೂಕ್ತವಾಗಿದೆ, ಆದರೆ ಅವರು ಈ ಸಮಯದಲ್ಲಿ ಎನ್‌ಸಿಎ ಯಲ್ಲಿದ್ದಾರೆ. ಅವರು ಹೇಗೆ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು 14-15 ದಿನಗಳ ಕೋವಿಡ್‌ನ ನಂತರ ಅವರ ಸ್ಥಿತಿ ಏನು ಎಂಬ ವರದಿಗಳನ್ನು ನಾವು ಪಡೆಯಬೇಕಾಗಿದೆ. ಎಲ್ಲವನ್ನೂ ಪರಿಶೀಲಿಸಿದ ನಂತರ ನಾವು ನಿರ್ಧಾರ ಮಾಡುತ್ತೇವೆ." ಎಂದು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ರೋಹಿತ್ ಶರ್ಮಾ ಮತ್ತು ತಂಡ ಶನಿವಾರದಂದು ಪರ್ತ್‌ನ ಡಬ್ಲ್ಯೂಎಸಿಎ (WACA) ನಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸುತ್ತಾರೆ. ಭಾರತವು ಅಕ್ಟೋಬರ್ 12 ರಂದು ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ನಂತರ ಬ್ರಿಸ್ಬೇನ್‌ನ ಗಬ್ಬಾಕ್ಕೆ ತೆರಳಲಿದೆ. ಅಕ್ಟೋಬರ್ 11 ರಂದು ಏಕದಿನ ಸರಣಿ ಮುಗಿದ ನಂತರ ಮೀಸಲು ಆಟಗಾರರು ಅವರನ್ನು ಸೇರಿಕೊಳ್ಳುತ್ತಾರೆ.

ಭಾರತ ಟಿ20 ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್. ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.

ನೆಟ್ ಬೌಲರ್‌ಗಳು: ಉಮ್ರಾನ್ ಮಲಿಕ್, ಚೇತನ್ ಸಕರಿಯಾ, ಕುಲದೀಪ್ ಸೇನ್

For Quick Alerts
ALLOW NOTIFICATIONS
For Daily Alerts
Story first published: Wednesday, October 5, 2022, 21:58 [IST]
Other articles published on Oct 5, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X