ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಮೊದಲ ಪಂದ್ಯ, ಒಮಾನ್ vs ಪಪುವಾ ನ್ಯೂಗಿನಿ, ಟಾಸ್ ವರದಿ, ಆಡುವ ಬಳಗ, Live ಸ್ಕೋರ್

T20 world cup: 1st Match, Oman vs Papua New Guinea, Live score and Playing XI

ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಒಮಾನ್ ಹಾಗೂ ಪಪುವಾ ನ್ಯೂಗಿನಿ ಮುಖಾಮುಖಿಯಾಗುವ ಮೂಲಕ ಟಿ20 ವಿಶ್ವಕಪ್‌ಗೆ ಅಧಿಕೃತವಾಗಿ ಚಾಲನೆ ದೊರೆತಂತಾಗಿದೆ. ಈ ಪ್ರಥಮ ಪಂದ್ಯದಲ್ಲಿ ಆತಿಥೇಯ ಒಮಾನ್ ಟಾಸ್ ಗೆದ್ದಿದ್ದು ಮೊದಲಿಗೆ ಎದುರಾಳಿ ಪಪುವಾ ನ್ಯೂಜಿನಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

ಈ ಎರಡು ತಂಡಗಳು ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗುತ್ತಿವೆ. ಹೀಗಾಗಿ ಯಾವ ತಂಡ ಗೆಲುವಿನಿಂದಿಗೆ ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಅರ್ಹತಾ ಸುತ್ತಿಗೂ ಮುನ್ನ ಈ ಎರಡು ತಂಡಗಳು ಕೂಡ ಎರಡಡೆರಡು ಅಭ್ಯಾಸ ಪಂದ್ಯಗಳಲ್ಲಿ ಆಡಿದ್ದವು.

ಈ ಪಂದ್ಯದಲ್ಲಿ ಆತಿಥೇಯ ಒಮಾನ್ ತಂಡ ಅಮೋಘ ಗೆಲುವು ದಾಖಲಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಪಪುವಾ ನ್ಯೂಗಿನಿ ನಿಗದಿತ 20 ಓವರ್‌ಗಳಲ್ಲಿ ಕೇವಲ 129/9 ರನ್‌ಗಳನ್ನು ಮಾತ್ರವೇ ಗಳಿಸಿತು. ನಾಯಕ ಅಸ್ಸಾದ್ ವಾಲಾ 56 ರನ್‌ಗಳಿಸುವ ಮೂಲಕ ತಂಡಕ್ಕೆ ಆಧಾರವಾದರು. ಉಳಿದಂತೆ ಚಾರ್ಲ್ಸ್ ಅಮಿನಿ 37 ರನ್‌ಗಳಿಸಲು ಶಕ್ತರಾದರು. ಉಳಿದಂತೆ ಯಾವ ಆಟಗಾರರು ಕೂಡ ಪಪುವಾ ನ್ಯೂಗಿನಿ ಪರವಾಗಿ ಉತ್ತಮ ಪ್ರದರ್ಶನ ನೀಡಲು ವಿಫಲವಾದರು.

ಪಪುವಾ ನ್ಯೂಗಿನಿ ನೀಡಿದ 130 ರನ್‌ಗಳನ್ನು ಬೆನ್ನಟ್ಟಿದ ಆತಿಥೆಯ ಒಮಾನ್ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಆರಂಭಿಕ ಆಟಗಾರರಿಬ್ಬರೇ ಈ ಸ್ಕೋರ್ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಆರಂಭಿಕ ಆಟಗಾರರರಾದ ಆಕಿಬ್ ಇಲ್ಯಾಸ್ ಹಾಗೂ ಜತಿಂದರ್ ಸಿಂಗ್ ಕೇವಲ 13.4 ಓವರ್‌ಗಳಲ್ಲಿ ಈ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಅಕಿಬ್ ಇಲ್ಯಾಸ್ 50 ರನ್‌ಗಳಿಸಿದರೆ ಜತಿಂದರ್ ಸಿಂಗ್ ಭರ್ಜರಿ 73 ರನ್‌ಗಳನ್ನು ಬಾರಿಸಿದರು. ಈ ಮೂಲಕ ಪಪುವಾ ನ್ಯೂಜಿನಿ ತಂಡಕ್ಕೆ 10 ವಿಕೆಟ್‌ಗಳ ಅಂತರದ ಭಾರೀ ಸೋಲಿನ ರುಚಿ ತೋರಿಸಿದರು.

ಅರ್ಹತಾ ಸುತ್ತಿನಲ್ಲಿ ಒಟ್ಟಿ 8 ತಂಡಗಳಿದ್ದು ತಲಾ ನಾಲ್ಕು ತಂಡಗಳ ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಎರಡು ಗುಂಪಿನಿಂದಲೂ ತಲಾ ಎರಡರಂತೆ ಒಟ್ಟು ನಾಲ್ಕು ತಂಡಗಳು ಪ್ರಧಾನ ಸುತ್ತಿಗೆ ಪ್ರವೇಶ ಪಡೆಯಲಿದೆ. ಹೀಗಾಗಿ ಪ್ರಧಾನ ಸುತ್ತಿನಲ್ಲಿ ಪಾಲ್ಗೊಳ್ಳುವ ಅರ್ಹತೆ ಸಂಪಾದಿಸಲು ಈ ಎಲ್ಲಾ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಲಿದೆ.

Live ಸ್ಕೋರ್ ಮಾಹಿತಿ:

1
51665

ಒಮಾನ್ ಆಡುವ ಬಳಗ: ಜತೀಂದರ್ ಸಿಂಗ್, ಖಾವರ್ ಅಲಿ, ಅಕಿಬ್ ಇಲ್ಯಾಸ್, ಜೀಶನ್ ಮಕ್ಸೂದ್ (ನಾಯಕ), ಕಶ್ಯಪ್ ಪ್ರಜಾಪತಿ, ನಸೀಮ್ ಖುಷಿ (ವಿಕೆಟ್ ಕೀಪರ್), ಮೊಹಮ್ಮದ್ ನದೀಮ್, ಅಯಾನ್ ಖಾನ್, ಸಂದೀಪ್ ಗೌಡ್, ಕಲೀಮುಲ್ಲಾ, ಬಿಲಾಲ್ ಖಾನ್
ಬೆಂಚ್: ಖುರ್ರಮ್ ನವಾಜ್, ಫಯಾಜ್ ಬಟ್, ಸೂರಜ್ ಕುಮಾರ್, ನೆಸ್ಟರ್ ಧಂಬ, ಸುಫ್ಯಾನ್ ಮೆಹಮೂದ್

ಟೀಮ್ ಇಂಡಿಯಾ ಜೊತೆ ಅಭ್ಯಾಸದಲ್ಲಿ ಕಾಣಿಸಿಕೊಂಡ ಧೋನಿ | Oneindia Kannada

ಪಪುವಾ ನ್ಯೂಗಿನಿ ಆಡುವ ಬಳಗ: ಟೋನಿ ಉರಾ, ಅಸ್ಸಾದ್ ವಾಲಾ (ನಾಯಕ), ಚಾರ್ಲ್ಸ್ ಅಮಿನಿ, ಲೆಗಾ ಸಿಯಾಕಾ, ನಾರ್ಮನ್ ವನುವಾ, ಸೆಸೆ ಬೌ, ಸೈಮನ್ ಆಟೈ, ಕಿಪ್ಲಿನ್ ಡೊರಿಗಾ (ವಿಕೆಟ್ ಕೀಪರ್), ನೊಸೈನ ಪೊಕಾನ, ಡಾಮಿಯನ್ ರವು, ಕಬುವಾ ಮೊರೆ
ಬೆಂಚ್: ಚಾಡ್ ಸೋಪರ್, ಜೇಸನ್ ಕಿಲಾ, ಹಿರಿ ಹಿರಿ, ಗೌಡಿ ಟೋಕಾ

Story first published: Sunday, October 17, 2021, 20:14 [IST]
Other articles published on Oct 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X