ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್

T20 world cup: 2 big players excluded from New Zealand team for upcoming event

ಟಿ20 ವಿಶ್ವಕಪ್‌ಗೆ ದಿನಗಣನೆ ಶುರುವಾಗಿದೆ. ಇನ್ನು ಎರಡು ತಿಂಗಳಲ್ಲಿ ವಿಶ್ವಕ್ರಕೆಟ್‌ನ ಮತ್ತೊಂದು ಹಬ್ಬ ಆರಂಭವಾಗಲಿದೆ. ಈ ಮಹತ್ವದ ಕ್ರಿಕೆಟ್ ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಎಲ್ಲಾ ತಂಡಗಳು ಕೂಡ ಈಗ ಭರದಿಂದ ಸಿದ್ಧತೆಯನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಯುಎಇನಲ್ಲಿ ಆಯೋಜನೆಯಾಗಿರುವ ಈ ಬಾರಿಯ ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ತನ್ನ 15 ಸದಸ್ಯರ ಬಳಗವನ್ನು ಪ್ರಕಟಿಸಿದೆ. ಈ ತಂಡದಿಂದ ದಿಗ್ಗಜ ಆಟಗಾರನಿಗೆ ನ್ಯೂಜಿಲೆಂಡ್ ತಂಡ ಕೊಕ್ ನೀಡಿದ್ದು ಮತ್ತೋರ್ವ ಪ್ರಮುಖ ಆಲ್‌ರೌಂಡರ್ ಕೂಡ ತಂಡದಿಂದ ಹೊರಬಿದ್ದಿದ್ದಾರೆ.

ಹೌದು, ನ್ಯೂಜಿಲೆಂಡ್‌ನ ವಿಶ್ವಕಪ್‌ನ ತಂಡದಿಂದ ಹೊರಬಿದ್ದಿರುವ ದಿಗ್ಗಜ ಆಟಗಾರ ಬೇರೆ ಯಾರೈ ಅಲ್ಲ ಅದು ರಾಸ್ ಟೇಲರ್. ನ್ಯೂಜಿಲೆಂಡ್ ಪರವಾಗಿ ಅನೇಕ ದಾಖಳೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿರುವ ಟೇಲರ್ ನ್ಯೂಜಿಲೆಂಡ್ ತಂಡದ ಪರವಾಗಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ದಾಖಲೆಯನ್ನು ಕೂಡ ಹೊಂದಿದ್ದಾರೆ. ಆದರೆ ಅವರು ಮುಂಬರುವ ಟಿ20 ವಿಶ್ವಕಪ್‌ನ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಟಿ20 ಕ್ರಿಕೆಟ್‌ನಲ್ಲಿ ಟಾಸ್ ಟೇಲರ್ ಮತ್ತೆ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವುದು ಅನುಮಾನವೆನಿಸಿದೆ.

ರಾಸ್ ಟೇಲರ್ ಹೊರತುಪಡಿಸಿ ಮತ್ತೋರ್ವ ಪ್ರಮುಖ ಆಟಗಾರ ಕೂಡ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ವಿಫಲವಾಗಿದ್ದಾರೆ. ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಕೂಡ ಈ ಮಹತ್ವದ ಟೂರ್ನಿಗಾಗಿ ಹೆಸರಿಸಲಾದ 15 ಆಟಗಾರರ ತಂಡಕ್ಕೆ ಆಯ್ಕೆಯಾಗಿಲ್ಲ.

ಚುಟುಕು ವಿಶ್ವಕಪ್‌ಗಾಗಿ ಆಯ್ಕೆ ಮಾಡಿರುವ ಈ ತಂಡದಲ್ಲಿ ನ್ಯೂಜಿಲೆಂಡ್ ತಂಡ ಅತ್ಯಂತ ಬಲಿಷ್ಠವಾದ ವೇಗದ ಬೌಲಿಂಗ್ ಪಡೆಯನ್ನು ಹೊಂದಿರುವುದನ್ನು ಕಾಣಬಹುದಾಗಿದೆ. ಟ್ರೆಂಟ್ ಬೋಲ್ಟ್, ಟಿಮ್ ಸೌಥಿ, ಲೂಕಿ ಫರ್ಗ್ಯೂಸನ್, ಕೈಲ್ ಜಾಮಿಸನ್ ಹಾಗೂ ಆಲ್‌ರೌಂಡರ್‌ಗಳಾದ ಡೇರ್ಲ್ ಮಿಚೆಲ್ ಹಾಗೂ ಜಿಮ್ಮಿ ನೀಶಮ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಈ ಆಯ್ಕೆಯಿಂದಾಗಿ ಮೀಡಿಯಂ ಪೇಸ್ ಆಲ್‌ರೌಂಡರ್ ಕಾಲಿ ಡಿ ಗ್ರ್ಯಾಂಡ್‌ಹೋಮ್ ಹಾಗೂ ವೇಗಿ ಹಮೀಶ್ ಬೆನ್ನೆಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ.

ಇನ್ನು ನ್ಯೂಜಿಲೆಂಡ್ ತಂಡದ ಸ್ಪಿನ್ ವಿಭಾಗದಲ್ಲಿ ಇಶ್ ಸೋಧಿಗೆ ಟಾಡ್ ಆಶ್ಲೆ ಜೊತೆಯಾಗಿದ್ದಾರೆ. ಯುಎಇ ಹಾಗೂ ಒಮಾನ್‌ನಲ್ಲಿ ಈ ಬಾರಿಯ ಟಿ20 ವಿಶ್ವಕಪ್ ನಡೆಯುತ್ತಿರುವ ಕಾರಣ ಸ್ಪಿನ್ನರ್‌ಗಳ ಮಾತ್ರವೂ ಮಹತ್ವವಾಗಿರುವ ಕಾರಣ ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ.

ಇನ್ನು ಬ್ಯಾಟಿಂಗ್ ಲೈನಪ್‌ನಲ್ಲಿ ವಿಕೆಟ್ ಕೀಪರ್ ಹಾಗೂ ಆರಂಭಿಕನಾಗಿ ಕಾಣಿಸಿಕೊಳ್ಳಲಿದ್ದಾರೆ ಇವರಿಗೆ ಮಾರ್ಟಿನ್ ಗಪ್ಟಿಲ್ ಸಾಥ್ ನೀಡಲಿದ್ದಾರೆ. ಉಳಿದಂತೆ ಡೆವೋನ್ ಕಾನ್ವೆ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ ಆರಂಭದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಹಾಗೂ ಅದೇ ತಿಂಗಳಾಂತ್ಯದಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿ ಹಾಗೂ ಏಕದಿನ ಸರಣಿಗೂ ನ್ಯೂಜಿಲೆಂಡ್ ತಂಡವನ್ನು ಹೆಸರಿಸಲಾಗಿದೆ. ಇನ್ನು ಈ ಪ್ರವಾಸದ ವೇಳೆ ಐಪಿಎಲ್ ನಡೆಯಲಿರುವ ಕಾರಣ ಐಪಿಎಲ್‌ನಲ್ಲಿ ಭಾಗವಹಿಸುವ ಕೇನ್ ವಿಲಿಯಮ್ಸನ್, ಸೀಫರ್ಟ್, ಟ್ರೆಂಟ್ ಬೌಲ್ಟ್, ಕೇಲ್ ಜೇಮೀಸನ್, ನೀಶಮ್, ಸ್ಯಾಂಟ್ನರ್, ಫರ್ಗುಸನ್ ಮತ್ತು ಮಿಲ್ನೆ ಅವರನ್ನು ಬಿಡುಗಡೆಗೊಳಿಸಲಾಗುತ್ತದೆ. ಹೀಗಾಗಿ ಕ್ವಾರಂಟೈನ್ ವರ್ಕ್‌ಲೋಡ್ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಒಟ್ಟು 32 ಆಟಗಾರರ ತಂಡ ಈ ಪ್ರವಾಸಕ್ಕೆ ತೆರಳಲಿದೆ

ನೀರಜ್ ಚೋಪ್ರಾ ಮತ್ತು ಅದಿತಿ ಅಶೋಕ್ ಗೆ KSRTC ಇಂದ ಬಂಪರ್ ಗಿಫ್ಟ್ | Oneindia Kannada

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ನ್ಯೂಜಿಲೆಂಡ್ ತಂಡದ ಸ್ಕ್ವಾಡ್ ಇಲ್ಲಿದೆ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೋಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗ್ಯೂಸನ್, ಮಾರ್ಟಿನ್ ಗಪ್ಟಿಲ್, ಕೇಲ್ ಜೇಮೀಸನ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಟಿಫರ್ಟ್ (ವಿಕೆಟ್ ಕೀಪರ್) , ಆಡಮ್ ಮಿಲ್ನೆ(ಮೀಸಲು ಆಟಗಾರ)

Story first published: Tuesday, August 10, 2021, 9:51 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X