ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಸಭೆಯಲ್ಲಿ ಟಿ20 ವಿಶ್ವಕಪ್ ಬಗ್ಗೆ ಮಹತ್ವದ ತೀರ್ಮಾನ: ಅಧಿಕೃತ ಘೋಷಣೆಯೊಂದೇ ಬಾಕಿ

T20 World Cup 2020 To Be Rescheduled By Icc To 2022

ಕೊರೊನಾ ವೈರಸ್‌ನಿಂದಾಗಿ ಈ ಬಾರಿಯ ಟಿ20 ವಿಶ್ವಕಪ್‌ನ ಭವಿಷ್ಯ ನಿರ್ಧರಿಸಲು ಐಸಿಸಿ ನಿರ್ಣಾಯಕ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನು ಐಸಿಸಿ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಟೂರ್ನಿ 2022ರಲ್ಲಿ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗ್ತಿದೆ.

2021ರ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ಆಯೋಜನೆ ಈ ಹಿಂದೆಯೇ ನಿಗದಿಯಾಗಿತ್ತು. ಹಾಗಾಗಿ ಒಂದೇ ವರ್ಷದಲ್ಲಿ ಎರಡು ವಿಶ್ವಕಪ್ ನಡೆಸುವುದು ಸೂಕ್ತವಲ್ಲ ಎಂದು ಐಸಿಸಿ ನಿರ್ಧರಿಸಿದೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಬೇಕಿದ್ದ ವಿಶ್ವಕಪ್ ಇನ್ನೆರಡು ವರ್ಷ ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗುತ್ತಿದೆ.

"10 ವರ್ಷಗಳಿಂದ ಕ್ರಿಕೆಟನ್ನು ಮುಗಿಸುತ್ತಿದ್ದೀರಿ" : ಐಸಿಸಿ ವಿರುದ್ಧ ಶೋಯೆಬ್ ಅಖ್ತರ್ ಗಂಭೀರ ಆರೋಪ

ಇತ್ತೀಚಿನವರೆಗೂ ಟಿ20 ವಿಶ್ವಕಪ್‌ಅನ್ನು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಐಸಿಸಿ ಸಬೆಯಲ್ಲಿ ನಡೆದಿರುವ ಚರ್ಚೆ ಅದಕ್ಕೆ ಪೂರಕವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ವಾಣಿಜ್ಯ ದೃಷ್ಟಿಕೋನದಿಂದಲೂ ಐಸಿಸಿ ಚರ್ಚೆಯನ್ನು ನಡೆಸಿದ್ದು ಆರು ತಿಂಗಳ ಅಂತರದಲ್ಲಿ ಎರಡು ವಿಶ್ವಕಪ್‌ಗಳ ಆಯೋಜನೆಗೆ ನೇರಪ್ರಸಾರಕರು ಬೆಂಬಲಿಸಲಾರರು ಎಂಬ ಆತಂಕವನ್ನು ಐಸಿಸಿ ಹೊಂದಿದೆ.

ಈ ನಿರ್ಧಾರದ ವೇಳಾಪಟ್ಟಿಯ ಪ್ರಕಾರ 2021ರಲ್ಲಿ ಭಾರತ ಟಿ20 ವಿಶ್ವಕಪ್ ಆಯೋಜನೆಯನ್ನು ಮಾಡಲಿದೆ. ಮುಂದೂಡಲ್ಪಟ್ಟ ವಿಶ್ವಕಪ್ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅದಾದ ಬಳಿಕ 2023ರಲ್ಲಿ ಭಾರತ ಮತ್ತೆ ಏಕದಿನ ವಿಶ್ವಕಪ್‌ನ ಆತಿಥ್ಯವನ್ನು ವಹಿಸಿಕೊಳ್ಳಲಿದೆ. ವಾಣಿಜ್ಯ ದೃಷ್ಟಿಕೋನದಿಂದ ಈ ವೇಳಾಪಟ್ಟಿ ಪೂರಕವಾಗಿದೆ. ಮೇ 28 ಐಸಿಸಿ ಸಬೆ ನಡೆಯಲಿದ್ದು ಇದಕ್ಕೆ ಬಿಸಿಸೈ ಅಧ್ಯಕ್ಷ ಸೌರವ್ ಗಂಗೂಲಿ ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ.

'ವಿಜಯ್ ನನ್ನ ಹೆಂಡತಿಯಿದ್ದಂತೆ': ಜೊತೆಯಾಟದ ಕ್ಷಣ ಸ್ಮರಿಸಿದ ಧವನ್!'ವಿಜಯ್ ನನ್ನ ಹೆಂಡತಿಯಿದ್ದಂತೆ': ಜೊತೆಯಾಟದ ಕ್ಷಣ ಸ್ಮರಿಸಿದ ಧವನ್!

ಈ ಬೆಳವಣಿಗೆ ಐಪಿಎಲ್‌ಗೂ ಪೂರಕವಾಗಿದೆ. ಸದ್ಯಕ್ಕೆ ಯಾವುದೇ ಅವಸರದ ನಿರ್ಣಯಕ್ಕೆ ಬಿಸಿಸಿಐ ಅಥವಾ ಪ್ರಸಾರಕರು ಬಂದಿಲ್ಲ. ಆದರೆ ಕೊರೊನ ಆವೈರಸ್‌ನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲೋಕನ ಮಾಡಲಾಗುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಲ್ಲಿ ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಯಲಿದೆ. ಜುಲೈವರೆಗೂ ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ.

Story first published: Wednesday, May 27, 2020, 15:03 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X