ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಕುಸಿದ ಪಾಕ್

ಪ್ರಸಕ್ತ ಸಾಲಿನ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 17ನೇ ಪಂದ್ಯದಲ್ಲಿ ಇಂದು ( ಅಕ್ಟೋಬರ್ 25 ) ಅಫ್ಘಾನಿಸ್ಥಾನ ಮತ್ತು ಸ್ಕಾಟ್ಲೆಂಡ್ ತಂಡಗಳು ಸೆಣಸಾಟ ನಡೆಸಿವೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶಿಸಿರುವ ಸ್ಕಾಟ್ಲೆಂಡ್ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಈ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿದೆ.

ಸಾವಿರಾರು ಕೋಟಿಯ 2 ನೂತನ ಐಪಿಎಲ್ ತಂಡ ಪ್ರಕಟ: ಮತ್ತೆ ಬಂದರು ಆ ಹಳೇ ತಂಡದ ಮಾಲೀಕರು!ಸಾವಿರಾರು ಕೋಟಿಯ 2 ನೂತನ ಐಪಿಎಲ್ ತಂಡ ಪ್ರಕಟ: ಮತ್ತೆ ಬಂದರು ಆ ಹಳೇ ತಂಡದ ಮಾಲೀಕರು!

ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಹೀಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನದ ಪರ ಆರಂಭಿಕ ಆಟಗಾರರಾದ ಹಜರತುಲ್ಲಾ ಝಜೈ 30 ಎಸೆತಗಳಲ್ಲಿ 44 ರನ್ ಮತ್ತು ಮೊಹಮ್ಮದ್ ಶಹಜಾದ್ 15 ಎಸೆತಗಳಲ್ಲಿ 22 ರನ್ ಬಾರಿಸುವ ಮೂಲಕ ಉತ್ತಮ ಆರಂಭವನ್ನು ನೀಡಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್ 37 ಎಸೆತಗಳಲ್ಲಿ 46, ನಜೀಬುಲ್ಲಾ ಜದ್ರಾನ್ 34 ಎಸೆತಗಳಲ್ಲಿ 59 ಮತ್ತು ಮೊಹಮ್ಮದ್ ನಬಿ 4 ಎಸೆತಗಳಲ್ಲಿ ಅಜೇಯ 11 ರನ್ ಕಲೆ ಹಾಕಿದರು. ಈ ಮೂಲಕ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸುವುದರ ಮೂಲಕ ಎದುರಾಳಿ ಸ್ಕಾಟ್ಲೆಂಡ್ ತಂಡಕ್ಕೆ 191 ರನ್‌ಗಳ ಗುರಿಯನ್ನು ನೀಡಿತು.

ಟಿ20 ವಿಶ್ವಕಪ್: ಈ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಬಲಿಷ್ಠ ತಂಡವನ್ನೇ ಕಡೆಗಣಿಸಿದ ಇಯಾನ್ ಚಾಪೆಲ್!ಟಿ20 ವಿಶ್ವಕಪ್: ಈ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಬಲಿಷ್ಠ ತಂಡವನ್ನೇ ಕಡೆಗಣಿಸಿದ ಇಯಾನ್ ಚಾಪೆಲ್!

ಸ್ಕಾಟ್ಲೆಂಡ್ ತಂಡದ ಪರ ಶಫ್ಯಾನ್ ಷರೀಫ್ 2 ವಿಕೆಟ್, ಜೋಶ್ ಡೇವಿ ಮತ್ತು ಮಾರ್ಕ್ ವ್ಯಾಟ್ ತಲಾ ಒಂದೊಂದು ವಿಕೆಟ್ ಪಡೆದರು. ಹೀಗೆ ಅಫ್ಘಾನಿಸ್ತಾನದ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ಎಡವಿದ ಸ್ಕಾಟ್ಲೆಂಡ್ ಬ್ಯಾಟಿಂಗ್‌ನಲ್ಲಿಯೂ ಹೀನಾಯ ಪ್ರದರ್ಶನವನ್ನು ನೀಡಿತು. ಅಫ್ಘಾನಿಸ್ತಾನ ನೀಡಿದ 191 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಸ್ಕಾಟ್ಲೆಂಡ್ 10.2 ಓವರ್‌ಗಳಲ್ಲಿಯೇ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಕೇವಲ 60 ರನ್‌ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಅಫ್ಘಾನಿಸ್ತಾನ ಸ್ಕಾಟ್ಲೆಂಡ್ ವಿರುದ್ಧ 130 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿತು.

ಅಫ್ಘಾನಿಸ್ತಾನ 60 ರನ್‌ಗೆ ಆಲ್ಔಟ್

ಅಫ್ಘಾನಿಸ್ತಾನ 60 ರನ್‌ಗೆ ಆಲ್ಔಟ್

ಸ್ಕಾಟ್ಲೆಂಡ್ ತಂಡದ ಪರ ಜಾರ್ಜ್ ಮುನ್ಸೆ 25, ಕೈಲ್ ಕೋಟ್ಜರ್ 10, ಮ್ಯಾಥ್ಯೂ ಕ್ರಾಸ್ 0, ರಿಚಿ ಬೆರಿಂಗ್ಟನ್ 0, ಕ್ಯಾಲಮ್ ಮ್ಯಾಕ್ಲಿಯೋಡ್ 0, ಮೈಕೆಲ್ ಲೀಸ್ಕ್ 0, ಕ್ರಿಸ್ ಗ್ರೀವ್ಸ್ 12, ಮಾರ್ಕ್ ವ್ಯಾಟ್ 1, ಜೋಶ್ ಡೇವಿ 4, ಸಫ್ಯಾನ್ ಷರೀಫ್ ಅಜೇಯ 3 ಮತ್ತು ಬ್ರಾಡ್ಲಿ ವೀಲ್ 0 ರನ್ ಗಳಿಸುವುದರ ಮೂಲಕ ಕೇವಲ 10.2 ಓವರ್‌ಗಳಲ್ಲಿ 60 ರನ್‌ಗಳಿಗೆ ಆಲ್ ಔಟ್ ಆಯಿತು.

ಅಫ್ಘಾನಿಸ್ತಾನ ಉತ್ತಮ ಬೌಲಿಂಗ್‌

ಅಫ್ಘಾನಿಸ್ತಾನ ಉತ್ತಮ ಬೌಲಿಂಗ್‌

ಇನ್ನು ಸ್ಕಾಟ್ಲೆಂಡ್ ತಂಡವನ್ನು ಇಷ್ಟು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು ಅಫ್ಘಾನಿಸ್ತಾನ ತಂಡದ ಪ್ರಮುಖ ಬೌಲರ್‌ಗಳಾದ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್. ಹೌದು ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಮುಜೀಬ್ ಉರ್ ರೆಹಮಾನ್ 20 ರನ್ ನೀಡಿ 5 ವಿಕೆಟ್ ಪಡೆದರು ಮತ್ತು 2.2 ಓವರ್ ಬೌಲಿಂಗ್ ಮಾಡಿದ ರಶೀದ್ ಖಾನ್ ಕೇವಲ 9 ರನ್ ನೀಡಿ 4 ವಿಕೆಟ್ ಪಡೆಯುವುದರ ಮೂಲಕ ಮಿಂಚಿದರು. ಇನ್ನುಳಿದಂತೆ ತಂಡದ ಮತ್ತೋರ್ವ ಬೌಲರ್‌ ನವೀನ್ ಉಲ್ ಹಕ್ 2 ಓವರ್ ಮಾಡಿ 12 ರನ್ ನೀಡುವುದರ ಮೂಲಕ 1 ವಿಕೆಟ್ ಪಡೆದರು.

Sachin Tendulkar ಅವರು Shami ವಿಚಾರವಾಗಿ ಹೇಳಿದ್ದೇನು | Oneindia Kannada
ಅಂಕಪಟ್ಟಿಯಲ್ಲಿ ಕುಸಿದ ಪಾಕ್

ಅಂಕಪಟ್ಟಿಯಲ್ಲಿ ಕುಸಿದ ಪಾಕ್

ಸ್ಕಾಟ್ಲೆಂಡ್ ವಿರುದ್ಧ 5 ವಿಕೆಟ್ ಗೊಂಚಲು ಪಡೆದು ಉತ್ತಮ ಪ್ರದರ್ಶನವನ್ನು ನೀಡಿದ ಆಫ್ಘಾನಿಸ್ತಾನದ ಮುಜೀಬ್ ಉರ್ ರಹಮಾನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನ ಸೂಪರ್ 12 ಹಂತದ ಗ್ರೂಪ್ 2 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು ಇತ್ತೀಚೆಗಷ್ಟೇ ಭಾರತದ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿಕೊಂಡಿದ್ದ ಪಾಕಿಸ್ತಾನವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎರಡೂ ತಂಡಗಳು ಸಹ ತಲಾ ಒಂದೊಂದು ಪಂದ್ಯವನ್ನಾಡಿ ಗೆಲುವನ್ನು ಸಾಧಿಸಿದ್ದು, ಪಾಕಿಸ್ತಾನ ತಂಡಕ್ಕಿಂತ ಅಫ್ಘಾನಿಸ್ತಾನ ತಂಡದ ನೆಟ್ ರನ್ ರೇಟ್ ಹೆಚ್ಚಾಗಿರುವ ಕಾರಣ ಅಫ್ಘಾನಿಸ್ತಾನ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Monday, October 25, 2021, 22:58 [IST]
Other articles published on Oct 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X