ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ಮೂರು ತಂಡಗಳ ಮುಂದೆ ಆಸ್ಟ್ರೇಲಿಯಾ ಗೆಲ್ಲುವುದು ಕಷ್ಟ; ಟ್ರೋಫಿ ಗೆಲ್ಲುವ ತಂಡವನ್ನು ಹೆಸರಿಸಿದ ಬ್ರೆಟ್‌ಲೀ

T20 World Cup 2021: Australia can win the trophy in this tournament says Brett Lee

2016ರಿಂದ ಇಲ್ಲಿಯವರೆಗೂ ಯಾವ ವರ್ಷದಲ್ಲಿಯೂ ನಡೆಯದೇ ಇರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯು ಈ ಬಾರಿ ನಡೆಯುತ್ತಿದ್ದು ಮರಳಿ ಬಂದಿದೆ. ಹೌದು, ಕಡೆಯದಾಗಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆದದ್ದು 2016ರಲ್ಲಿ. ಇದಾದ ನಂತರ ಯಾವುದೇ ವರ್ಷದಲ್ಲಿಯೂ ಕೂಡ ಈ ಟೂರ್ನಿ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆ ಮತ್ತು ಕುತೂಹಲಗಳು ಉಂಟಾಗಿವೆ. 2016ರಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸುವುದರ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಭಾರತಕ್ಕೆ ಸತತ ಜಯ; ಪಾಕಿಸ್ತಾನಕ್ಕೆ ಶುರು ಈ ತ್ರಿಮೂರ್ತಿಗಳ ಭಯ!ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಭಾರತಕ್ಕೆ ಸತತ ಜಯ; ಪಾಕಿಸ್ತಾನಕ್ಕೆ ಶುರು ಈ ತ್ರಿಮೂರ್ತಿಗಳ ಭಯ!

ಹೀಗೆ 5 ವರ್ಷಗಳ ಬಳಿಕ ಮರಳಿ ಬಂದಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪಂಡಿತರು ಮತ್ತು ಹಲವಾರು ಮಾಜಿ ಕ್ರಿಕೆಟಿಗರು ಚರ್ಚೆಗಳನ್ನು ನಡೆಸುತ್ತಿದ್ದು, ಯಾವ ತಂಡ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡ ಗೆಲುವನ್ನು ಸಾಧಿಸಲಿದೆ ಎಂಬುದನ್ನು ಊಹಿಸಿದ್ದು ಇದೀಗ ಈ ಸಾಲಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಕೂಡ ಸೇರಿಕೊಂಡಿದ್ದಾರೆ.

ಇನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಇದುವರೆಗೂ ಯಾವುದೇ ವರ್ಷವೂ ಸಹ ಟ್ರೋಫಿಯನ್ನು ಗೆಲ್ಲಲಾಗದೇ ಇರುವ ಆಸ್ಟ್ರೇಲಿಯಾ ತಂಡದ ಕುರಿತಾಗಿ ವಿಶೇಷವಾಗಿ ಮಾತನಾಡಿರುವ ಬ್ರೆಟ್ ಲೀ ಈ ಕೆಳಕಂಡಂತೆ ತಮ್ಮ ಅಭಿಪ್ರಾಯ ಮತ್ತು ಊಹೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಬಾರಿ ಯಾರು ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ ಗೆಲ್ಲಲಿದ್ದಾರೆ?

ಈ ಬಾರಿ ಯಾರು ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ ಗೆಲ್ಲಲಿದ್ದಾರೆ?


ಎಲ್ಲಾ ಮಾದರಿಯ ಕ್ರಿಕೆಟ್‍ನ ಐಸಿಸಿ ಟೂರ್ನಿಗಳಲ್ಲಿ ಸಫಲತೆಯನ್ನು ಕಂಡಿರುವ ಆಸ್ಟ್ರೇಲಿಯಾ ಟಿ ಟ್ವೆಂಟಿ ಮಾದರಿಯಲ್ಲಿ ಮಾತ್ರ ಇದುವರೆಗೂ ಐಸಿಸಿ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಈ ಬಾರಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸುವ ಹಸಿವನ್ನು ಹೊಂದಿದೆ ಎಂದು ಬ್ರೆಟ್ ಲೀ ತಿಳಿಸಿದ್ದಾರೆ. ಹೀಗಾಗಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಟ್ರೋಫಿ ಗೆಲ್ಲುವ ತಂಡವಾಗಿದೆ ಎಂದು ಬ್ರೆಟ್ ಲೀ ತಿಳಿಸಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿರುವ ಬ್ರೆಟ್ ಲೀ ಆಸ್ಟ್ರೇಲಿಯಾ ಈ ಬಾರಿ ಟ್ರೋಫಿಯನ್ನು ಗೆಲ್ಲುವುದು ಖಂಡಿತವಾಗಿಯೂ ಸುಲಭವಲ್ಲ, ಅದರಲ್ಲಿಯೂ ಬಲಿಷ್ಠ ತಂಡಗಳಾದ ಭಾರತ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಇರುವಾಗ ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿಯುವುದು ತೀರಾ ಕಷ್ಟದ ಕೆಲಸ ಎಂದು ಸಹ ಬ್ರೆಟ್ ಲೀ ಹೇಳಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಮಿಂಚಲಿದ್ದಾರೆ

ಈ ಬಾರಿಯ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಮಿಂಚಲಿದ್ದಾರೆ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಟೂರ್ನಿಯ ಮಧ್ಯದಲ್ಲಿಯೇ ಹೊರಬಿದ್ದ ಡೇವಿಡ್ ವಾರ್ನರ್ ಹೆಚ್ಚಿನ ಪಂದ್ಯಗಳಲ್ಲಿ ಭಾಗವಹಿಸಿಲ್ಲ. ಈ ಕುರಿತಾಗಿ ಮಾತನಾಡಿರುವ ಬ್ರೆಟ್ ಲೀ ಐಪಿಎಲ್ ಟೂರ್ನಿಯಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡದೇ ಇರುವ ಡೇವಿಡ್ ವಾರ್ನರ್ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ ವುಡ್ ಮತ್ತು ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ಪರ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಬ್ರೆಟ್ ಲೀ ಹೊಂದಿದ್ದಾರೆ.

ರಿಷಬ್ ಪಂತ್ ಗೆ ಧೋನಿಯಿಂದ ಸಖತ್ ಕ್ಲಾಸ್:ವಿಡಿಯೋ ವೈರಲ್ | Oneindia Kannada
ಆಸ್ಟ್ರೇಲಿಯಾ ಇದುವರೆಗೂ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆದ್ದಿಲ್ಲ

ಆಸ್ಟ್ರೇಲಿಯಾ ಇದುವರೆಗೂ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆದ್ದಿಲ್ಲ


ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಇದುವರೆಗೂ ಒಮ್ಮೆಯೂ ಕೂಡ ಆಸ್ಟ್ರೇಲಿಯ ಟ್ರೋಫಿಯನ್ನು ಗೆದ್ದಿಲ್ಲ. 2010ನೇ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿತ್ತು ಹಾಗೂ ಈ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡ ಫೈನಲ್ ಪಂದ್ಯದಲ್ಲಿ ಸೋತು ಟ್ರೋಫಿಯನ್ನು ಗೆಲ್ಲುವ ಅವಕಾಶವನ್ನು ಕೈ ತಪ್ಪಿಸಿಕೊಂಡಿತ್ತು. ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಆವೃತ್ತಿಯಲ್ಲಿಯೂ ಸಹ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸುವಲ್ಲಿ ಸಫಲತೆಯನ್ನು ಕಂಡಿಲ್ಲ. ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯ ತನ್ನ ಮೊದಲನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವಿನ ಈ ಪಂದ್ಯ ಅಕ್ಟೋಬರ್ 23ರ ಶನಿವಾರದಂದು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Story first published: Thursday, October 21, 2021, 17:52 [IST]
Other articles published on Oct 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X