ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಫೈನಲ್‌ ಪ್ರವೇಶಿಸಲಿರುವ ತಂಡಗಳನ್ನು ಹೆಸರಿಸಿದ ಬೆನ್ ಸ್ಟೋಕ್ಸ್

T20 World Cup 2021: England and Pakistan will enter final says Ben Stokes

2019ರ ಏಕದಿನ ವಿಶ್ವಕಪ್ ಮತ್ತು ಕಳೆದ ಬಾರಿಯ ಆ್ಯಷಸ್ ಟೂರ್ನಿಗಳಲ್ಲಿ ಇಂಗ್ಲೆಂಡ್ ತಂಡದ ಹೀರೋ ಆಗಿ ಮಿಂಚಿದ್ದ ಬೆನ್ ಸ್ಟೋಕ್ಸ್ ಕೆಲ ದಿನಗಳ ಹಿಂದಷ್ಟೆ ಒಂದಷ್ಟು ಸಮಯದವರೆಗೆ ತಾತ್ಕಾಲಿಕವಾಗಿ ಕ್ರಿಕೆಟ್‌ನಿಂದ ದೂರ ಉಳಿಯುವ ನಿರ್ಧಾರವನ್ನು ಕೈಗೊಂಡಿದ್ದರು. ಹೌದು, ಬೆನ್ ಸ್ಟೋಕ್ಸ್ ಹೀಗೆ ತಾತ್ಕಾಲಿಕವಾಗಿ ಕ್ರಿಕೆಟ್‍ನಿಂದ ದೂರ ಉಳಿದಿರುವ ಕಾರಣ ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಆತ ಪಾಲ್ಗೊಂಡಿಲ್ಲ.

ಆಯ್ಕೆಗಾರರು ಪಾಂಡ್ಯನನ್ನು ಮನೆಗೆ ಕಳುಹಿಸಲು ಮುಂದಾದಾಗ ತಡೆದು ತಂಡದಲ್ಲಿ ಉಳಿಸಿಕೊಂಡಿದ್ದು ಆ ಒಬ್ಬ ವ್ಯಕ್ತಿ!ಆಯ್ಕೆಗಾರರು ಪಾಂಡ್ಯನನ್ನು ಮನೆಗೆ ಕಳುಹಿಸಲು ಮುಂದಾದಾಗ ತಡೆದು ತಂಡದಲ್ಲಿ ಉಳಿಸಿಕೊಂಡಿದ್ದು ಆ ಒಬ್ಬ ವ್ಯಕ್ತಿ!

ಹೀಗೆ ಹಲವಾರು ದಿನಗಳಿಂದ ಕ್ರಿಕೆಟ್ ವಿಚಾರವಾಗಿ ದೂರ ಉಳಿದಿದ್ದ ಬೆನ್ ಸ್ಟೋಕ್ಸ್ ಇತ್ತೀಚಿಗಷ್ಟೆ ಮುಂಬರಲಿರುವ ಆ್ಯಶಸ್ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯಿಂದಾಗಿ ಚರ್ಚೆಗೊಳಗಾಗಿದ್ದರು. ಅಷ್ಟೆ ಅಲ್ಲದೆ ಇದೇ ವರ್ಷ ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಈ ಪಂದ್ಯವನ್ನು ಕೂಡ ಮುಂಬರಲಿರುವ ವರ್ಷದ ಜುಲೈ ತಿಂಗಳಲ್ಲಿ ನಡೆಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ತೀರ್ಮಾನಿಸಿದ್ದು ಈ ಪಂದ್ಯಕ್ಕೂ ಕೂಡ ಬೆನ್ ಸ್ಟೋಕ್ಸ್ ಲಭ್ಯರಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಹೀಗೆ ಮತ್ತೆ ಕ್ರಿಕೆಟ್ ಕಡೆಗೆ ಮರಳುವುದರ ಕುರಿತಾಗಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ಬೆನ್ ಸ್ಟೋಕ್ಸ್ ಇದೀಗ ಪ್ರಸ್ತುತ ನಡೆಯುತ್ತಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತಾಗಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಹೌದು, ಅಕ್ಟೋಬರ್ 29ರಂದು ನಡೆದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಮುಗಿದ ಬಳಿಕ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ "ಇಂಗ್ಲೆಂಡ್ vs ಪಾಕಿಸ್ತಾನ ಫೈನಲ್?" ಎಂದು ಬರೆದುಕೊಳ್ಳುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ತಲುಪಲಿವೆ ಎಂಬುದನ್ನು ಊಹಿಸಿದ್ದಾರೆ.

ಟಿ20 ವಿಶ್ವಕಪ್: ವೆಸ್ಟ್ ಇಂಡೀಸ್ ವಿರುದ್ಧ ಸೋತು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದ ಬಾಂಗ್ಲಾದೇಶಟಿ20 ವಿಶ್ವಕಪ್: ವೆಸ್ಟ್ ಇಂಡೀಸ್ ವಿರುದ್ಧ ಸೋತು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದ ಬಾಂಗ್ಲಾದೇಶ

ಪಾಕಿಸ್ತಾನ ಹ್ಯಾಟ್ರಿಕ್ ಗೆಲುವು

ಪಾಕಿಸ್ತಾನ ಹ್ಯಾಟ್ರಿಕ್ ಗೆಲುವು

ಹೌದು , ಅಕ್ಟೋಬರ್ 29ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 24ನೇ ಪಂದ್ಯ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಇತ್ತ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ನೀಡಿದ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿತು. 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದ ಪಾಕಿಸ್ತಾನ 5 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವನ್ನು ಪಡೆದುಕೊಂಡಿತು.

ಅಸಿಫ್ ಅಲಿ ಮಿಂಚು

ಅಸಿಫ್ ಅಲಿ ಮಿಂಚು

ಪಾಕಿಸ್ತಾನದ ಪರ ನಾಯಕ ಬಾಬರ್ ಅಜಮ್ 47 ಎಸೆತಗಳಲ್ಲಿ 51, ಫಾಕರ್ ಜಮಾನ್ 25 ಎಸೆತಗಳಲ್ಲಿ 30 ರನ್ ಬಾರಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಅಂತಿಮ ಹಂತದಲ್ಲಿ ಪಂದ್ಯ ಅಫ್ಘಾನಿಸ್ತಾನದ ಪರ ಇದ್ದ ಸಂದರ್ಭದಲ್ಲಿ ಅಸಿಫ್ ಅಲಿ ಒಂದೇ ಓವರ್‌ನಲ್ಲಿ 4 ಸಿಕ್ಸರ್ ಬಾರಿಸುವುದರ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. 7 ಎಸೆತಗಳನ್ನು ಎದುರಿಸಿದ ಅಸಿಫ್ ಅಲಿ ಅಜೇಯ 25 ರನ್ ಬಾರಿಸುವುದರ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹೀಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಆಸಿಫ್ ಅಲಿ ಕುರಿತು ಕೂಡ ಬೆನ್ ಸ್ಟೋಕ್ಸ್ ಟ್ವೀಟ್ ಮಾಡಿದ್ದು "ಅಸಿಫ್ ಅಲಿ ಎಂಬ ಹೆಸರನ್ನು ನೆನಪಿಟ್ಟುಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.

ಪಾಕ್ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತ

ಪಾಕ್ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತ

ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಗ್ರೂಪ್ 1ರಲ್ಲಿ ಇಂಗ್ಲೆಂಡ್ 2 ಪಂದ್ಯಗಳನ್ನಾಡಿ ಎರಡರಲ್ಲಿಯೂ ಜಯ ಸಾಧಿಸುವುದರ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರೆ, ಅತ್ತ ಗ್ರೂಪ್‌ 2ನಲ್ಲಿ ಪಾಕಿಸ್ತಾನ 3 ಪಂದ್ಯಗಳನ್ನಾಡಿ ಮೂರರಲ್ಲಿಯೂ ಜಯ ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗೆ ಟೂರ್ನಿಯಲ್ಲಿ ಇದುವರೆಗೂ ಸೋಲನ್ನೇ ಕಂಡಿರದ ಈ ಎರಡೂ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

Story first published: Saturday, October 30, 2021, 15:44 [IST]
Other articles published on Oct 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X