ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈಗ ವಿಶ್ವ ಕ್ರಿಕೆಟ್‍ನಲ್ಲಿ ಅವರದ್ದೇ ಹವಾ, ಈ ಸಲ ಟಿ20 ವಿಶ್ವಕಪ್ ಅವರದ್ದೇ ಎಂದ ಸೌರವ್ ಗಂಗೂಲಿ

T20 World Cup 2021 Final: Sourav Ganguly backing New Zealand in winning the trophy

ಚುಟುಕು ಕ್ರಿಕೆಟ್ ಮಹಾ ಸಮರ ಎಂದೇ ಖ್ಯಾತಿಯನ್ನು ಪಡೆದಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಈ ಬಾರಿಯ ಆವೃತ್ತಿಯು ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು ಫೈನಲ್ ಪಂದ್ಯ ಇಂದು ( ನವೆಂಬರ್‌ 14) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ.

'ನಾಚಿಕೆಗೇಡಿನ ಆಟ': ಪಾಕ್ ವಿರುದ್ಧ ಸಿಕ್ಸರ್ ಬಾರಿಸಿದ ವಾರ್ನರ್‌ ಕುರಿತು ಕಿಡಿಕಾರಿದ ಗಂಭೀರ್!'ನಾಚಿಕೆಗೇಡಿನ ಆಟ': ಪಾಕ್ ವಿರುದ್ಧ ಸಿಕ್ಸರ್ ಬಾರಿಸಿದ ವಾರ್ನರ್‌ ಕುರಿತು ಕಿಡಿಕಾರಿದ ಗಂಭೀರ್!

ಈ ಫೈನಲ್ ಸೆಣಸಾಟದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಮತ್ತು ಆ್ಯರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿಯುತ್ತಿವೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರು ಸೆಮಿಫೈನಲ್ ಹಂತ ಪ್ರವೇಶಿಸಬಹುದಾದ ತಂಡಗಳನ್ನು ಊಹಿಸಿದ್ದರು. ಹೀಗೆ ಸೆಮಿಫೈನಲ್ ಪ್ರವೇಶಿಸಬಹುದಾದ ತಂಡಗಳನ್ನು ಊಹಿಸಿದ್ದವರಲ್ಲಿ ಬಹುತೇಕರು ಆಸ್ಟ್ರೇಲಿಯಾ ತಂಡವನ್ನು ಕೈಬಿಟ್ಟಿದ್ದರು.

ನೀವು ಈ ತಪ್ಪನ್ನು ಮಾಡಿದರೆ ನ್ಯೂಜಿಲೆಂಡ್‌ ವಿರುದ್ಧ ಗೆಲುವು ಕಷ್ಟ; ರೋಹಿತ್ ಪಡೆಗೆ ಎಚ್ಚರಿಸಿದ ಸೆಹ್ವಾಗ್ನೀವು ಈ ತಪ್ಪನ್ನು ಮಾಡಿದರೆ ನ್ಯೂಜಿಲೆಂಡ್‌ ವಿರುದ್ಧ ಗೆಲುವು ಕಷ್ಟ; ರೋಹಿತ್ ಪಡೆಗೆ ಎಚ್ಚರಿಸಿದ ಸೆಹ್ವಾಗ್

ಆದರೆ ಆಸ್ಟ್ರೇಲಿಯಾ ತಂಡ ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅತ್ಯುತ್ತಮ ನೆಟ್ ರನ್ ರೇಟ್ ಸಾಧಿಸುವುದರ ಮೂಲಕ ಸೆಮಿಫೈನಲ್ ಸುತ್ತಿಗೆ ಯಶಸ್ವಿಯಾಗಿ ಪ್ರವೇಶವನ್ನು ಪಡೆದುಕೊಂಡಿತು. ನಂತರ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಾಡಿದ ಆಸ್ಟ್ರೇಲಿಯಾ ಸೋಲನ್ನೇ ಕಾಣದಿದ್ದ ಪಾಕಿಸ್ತಾನ ತಂಡಕ್ಕೆ ಸೋಲುಣಿಸುವುದರ ಮೂಲಕ ಇದೀಗ ಫೈನಲ್ ಹಂತಕ್ಕೆ ಬಂದು ತಲುಪಿದೆ. ಅತ್ತ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಇದೇ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು ಮತ್ತು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಬಹುದಾದ ತಂಡಗಳಲ್ಲೊಂದು ಎನಿಸಿಕೊಂಡಿತ್ತು.

ಮ್ಯಾಥ್ಯೂ ವೇಡ್ ಕ್ಯಾಚ್ ಬಿಟ್ಟು ಪಾಕಿಸ್ತಾನದ ಸೋಲಿಗೆ ಕಾರಣನಾದ ಹಸನ್ ಅಲಿಗೆ ಬಂದ ಗತಿ ಇದು!ಮ್ಯಾಥ್ಯೂ ವೇಡ್ ಕ್ಯಾಚ್ ಬಿಟ್ಟು ಪಾಕಿಸ್ತಾನದ ಸೋಲಿಗೆ ಕಾರಣನಾದ ಹಸನ್ ಅಲಿಗೆ ಬಂದ ಗತಿ ಇದು!

ಹೀಗೆ ಆರಂಭದಿಂದಲೂ ನಿರೀಕ್ಷೆಯನ್ನು ಹುಟ್ಟುಹಾಕಿ ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಗಳಿಸುವುದರ ಮೂಲಕ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ. ಹೀಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳೆರಡೂ ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಫೈನಲ್ ಹಂತಕ್ಕೆ ತಲುಪಿದ್ದು, ಈ 2 ತಂಡಗಳ ಪೈಕಿ ಯಾವ ತಂಡ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂಬ ಊಹೆ ಮತ್ತು ಲೆಕ್ಕಾಚಾರಗಳು ನಡೆಯುತ್ತಿವೆ. ಈ ಕುರಿತಾಗಿ ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಮಾತನಾಡಿದ್ದು ಈ ಬಾರಿ ಟ್ರೋಫಿ ಎತ್ತಿ ಹಿಡಿಯಲಿರುವ ತಂಡದ ಕುರಿತು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ನ್ಯೂಜಿಲೆಂಡ್ ಟ್ರೋಫಿ ಎತ್ತಿಹಿಡಿಯಲಿದೆ ಎಂದ ಗಂಗೂಲಿ

ನ್ಯೂಜಿಲೆಂಡ್ ಟ್ರೋಫಿ ಎತ್ತಿಹಿಡಿಯಲಿದೆ ಎಂದ ಗಂಗೂಲಿ

"ವಿಶ್ವ ಕ್ರಿಕೆಟ್‍ನಲ್ಲಿ ಸದ್ಯ ನ್ಯೂಜಿಲೆಂಡ್‌ನ ಸಮಯ ನಡೆಯುತ್ತಿದೆ ಎಂದು ಭಾವಿಸುತ್ತೇನೆ. ಆಸ್ಟ್ರೇಲಿಯಾ ಇತ್ತೀಚಿನ ದಿನಗಳಲ್ಲಿ ಕಠಿಣ ಸಮಯವನ್ನು ಎದುರಿಸಿದ್ದು ಇತ್ತೀಚಿಗೆ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ನ್ಯೂಜಿಲೆಂಡ್ ನಾವು ಟಿವಿಯಲ್ಲಿ ನೋಡುವುದಕ್ಕಿಂತ ಹೆಚ್ಚು ಬಲಿಷ್ಠವಾಗಿದೆ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದ ಸೌರವ್ ಗಂಗೂಲಿ ಇತ್ತೀಚಿನ ಕೆಲ ತಿಂಗಳುಗಳ ಹಿಂದಷ್ಟೇ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಇದು ಚಿಕ್ಕ ದೇಶವಾದರೂ ಸಾಕಷ್ಟು ಬಲಿಷ್ಠವಾಗಿದೆ. ಇದು ಖಂಡಿತವಾಗಿಯೂ ನ್ಯೂಜಿಲೆಂಡ್‌ನ ಸಮಯವಾಗಿದೆ ಎಂದು ಭಾವಿಸುತ್ತೇನೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಗೆದ್ದು ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂದು ಊಹಿಸಿದ್ದಾರೆ.

ಇದೇ ಟೀಮ್ ಇಂಡಿಯಾ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂದು ಸೌರವ್ ಗಂಗೂಲಿ

ಇದೇ ಟೀಮ್ ಇಂಡಿಯಾ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂದು ಸೌರವ್ ಗಂಗೂಲಿ

ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ಎಡವಿ ಲೀಗ್ ಹಂತದಿಂದಲೇ ಟೂರ್ನಿಯಿಂದ ಹೊರಬಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ ಟೀಮ್ ಇಂಡಿಯಾ ಒಂದೆರಡು ಪಂದ್ಯಗಳಲ್ಲಿ ಮಂಕಾಗಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಇದೇ ತಂಡ ಮುಂದಿನ ದಿನಗಳಲ್ಲಿ ಐಸಿಸಿ ಟ್ರೋಫಿಗಳನ್ನು ಗೆಲ್ಲುವುದರ ಮೂಲಕ ಯಶಸ್ಸಿನ ಹಾದಿಗೆ ಮರಳಲಿದೆ ಎಂದು ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವತ್ತ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕಣ್ಣು

ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವತ್ತ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕಣ್ಣು

ಸಾಕಷ್ಟು ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಇದುವರೆಗೂ ಯಾವುದೇ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಚಾಂಪಿಯನ್ಸ್ ಆಗಿ ಹೊರಹೊಮ್ಮಿಲ್ಲ. ಅತ್ತ ನ್ಯೂಜಿಲೆಂಡ್ ಕೂಡ ಇದುವರೆಗೂ ಯಾವುದೇ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನೂ ಗೆದ್ದಿಲ್ಲ. ಹೀಗಾಗಿ ಈ ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಮೂಲಕ ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್ ಎತ್ತಿ ಹಿಡಿಯುವ ತವಕದಲ್ಲಿವೆ.

ದ್ರಾವಿಡ್ ಕೊಡೋ ಟಾರ್ಚರ್ ನ್ನು ಗಂಗೂಲಿ ಬಳಿ ಹೇಳಿಕೊಂಡ ದ್ರಾವಿಡ್ ಮಗ | Oneindia Kannada

Story first published: Sunday, November 14, 2021, 12:17 [IST]
Other articles published on Nov 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X