ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ವಿರುದ್ಧ ಸೋಲು, ಈಗ ಪ್ರಮುಖ ಆಟಗಾರ ತಂಡದಿಂದ ಔಟ್; ಭಾರತಕ್ಕೆ ಎದುರಾಗಿದೆ ಮತ್ತೊಂದು ಸಂಕಷ್ಟ!

T20 World Cup 2021: Hardik Pandya likely to be unavailable for the match against NewZealand
ಶಮಿ‌ ಪರ ನಿಂತ ಟೀಂ ಇಂಡಿಯಾ ಕ್ರಿಕೆಟಿಗರು:ಯಾಕೆ ಗೊತ್ತಾ? | Oneindia Kannada

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ತನ್ನ ಮೊದಲನೇ ಪಂದ್ಯವನ್ನು ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೋಲುವುದರ ಮೂಲಕ ಟೂರ್ನಿಯಲ್ಲಿ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ನಡೆದಿದ್ದ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ಟೀಮ್ ಇಂಡಿಯಾ ಈ ಬಾರಿಯೂ ಕೂಡ ಪಾಕಿಸ್ತಾನ ತಂಡಕ್ಕೆ ಸೋಲುಣಿಸುವುದರ ಮೂಲಕ ಜಯ ಸಾಧಿಸಲಿದೆ ಎಂಬ ಭರವಸೆ ಮೂಡಿಸಿತ್ತು. ಆದರೆ ಪಾಕಿಸ್ತಾನ ಆಟಗಾರರ ದಿಟ್ಟ ಪ್ರದರ್ಶನದ ಎದುರು ಟೀಮ್ ಇಂಡಿಯಾ ಸೋಲಿಗೆ ಶರಣಾಯಿತು.

ಭಾರತ vs ಪಾಕ್: ಭಾರತ vs ಪಾಕ್: "ಪಾಕಿಸ್ತಾನ ಗೆಲ್ಲಬೇಕೆಂದರೆ ಈ ಒಬ್ಬ ಆಟಗಾರನನ್ನು ತಂಡದಿಂದ ಹೊರಗಿಡಲೇಬೇಕು!"

ಹೌದು, ಅಕ್ಟೋಬರ್ 24ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಮತ್ತು ಭಾರತ ತಂಡಗಳ ನಡುವಿನ ಸೆಣಸಾಟದಲ್ಲಿ ಟಾಸ್ ಸೋತ ವಿರಾಟ್ ಕೊಹ್ಲಿ ಪಡೆ ಮೊದಲು ಬ್ಯಾಟಿಂಗ್ ಆರಂಭಿಸಿತು, ಭಾರತದ ಪರ ಆರಂಭಿಕ ಆಟಗಾರರು ಎಡವಿದ ನಂತರ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಆಸರೆಯಾದರು. ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾವುದೇ ಆಟಗಾರರು ಕೂಡ ದೊಡ್ಡ ಆಟವನ್ನು ಆಡುವಲ್ಲಿ ಯಶಸ್ವಿಯಾಗಲಿಲ್ಲ. ಒಟ್ಟಾರೆ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 152 ರನ್‌ಗಳ ಗುರಿಯನ್ನು ನೀಡಿತು.

ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ

ಇನ್ನು ಪಾಕಿಸ್ತಾನದ ವಿರುದ್ಧ ಭಾರತದ ಬೌಲಿಂಗ್ ಪಡೆ ಉತ್ತಮ ಪ್ರದರ್ಶನವನ್ನು ನೀಡಿ ಈ ಮೊತ್ತವನ್ನು ಬಾರಿಸಲು ಬಿಡದೇ ಪಂದ್ಯವನ್ನು ಜಯಗಳಿಸಲಿದೆ ಎಂದು ಊಹಿಸಲಾಗಿತ್ತು. ಆದರೆ ಪಾಕಿಸ್ತಾನದ ಆರಂಭಿಕ ಆಟಗಾರರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಈ ಎಲ್ಲಾ ಊಹೆಗಳನ್ನು ತಲೆಕೆಳಗಾಗಿ ಮಾಡಿ ಇತಿಹಾಸವನ್ನೇ ಬದಲಿಸಿ ಪಾಕಿಸ್ತಾನ ತಂಡಕ್ಕಿದ್ದ ಕಳಂಕವನ್ನು ದೂರ ಮಾಡಿದ್ದಾರೆ. ಪಾಕಿಸ್ತಾನ 17.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 152 ರನ್ ಗಳಿಸುವುದರ ಮೂಲಕ ಭಾರತದ ವಿರುದ್ಧ ಭರ್ಜರಿ 10 ವಿಕೆಟ್‍ಗಳ ಜಯವನ್ನು ಸಾಧಿಸಿತು.

ಹೀಗೆ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯವೊಂದರಲ್ಲಿ ಪಾಕಿಸ್ತಾನ ವಿರುದ್ಧ ಸೋತ ಟೀಮ್ ಇಂಡಿಯಾಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು ತಂಡದ ಪ್ರಮುಖ ಆಲ್ ರೌಂಡರ್ ಮುಂದಿನ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗುತ್ತಿದೆ. ಅದರ ವಿವರ ಮುಂದೆ ಇದೆ..

ಪಾಕ್ ವಿರುದ್ಧದ ಪಂದ್ಯದ ವೇಳೆ ಮತ್ತೆ ಗಾಯಕ್ಕೊಳಗಾದ ಹಾರ್ದಿಕ್ ಪಾಂಡ್ಯ

ಪಾಕ್ ವಿರುದ್ಧದ ಪಂದ್ಯದ ವೇಳೆ ಮತ್ತೆ ಗಾಯಕ್ಕೊಳಗಾದ ಹಾರ್ದಿಕ್ ಪಾಂಡ್ಯ

ಕಳೆದ ಹಲವಾರು ತಿಂಗಳುಗಳಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಗೆ ಒಳಗಾಗಿದ್ದು, ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನವನ್ನು ನೀಡಿದ್ದರು. ಅಷ್ಟು ಮಾತ್ರವಲ್ಲದೇ ಟೂರ್ನಿಯ ಯಾವುದೇ ಪಂದ್ಯದಲ್ಲಿಯೂ ಕೂಡ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿರಲಿಲ್ಲ. ಹೀಗೆ ಗಾಯದ ಸಮಸ್ಯೆಯ ಜೊತೆಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 8 ಎಸೆತಗಳಿಗೆ 11 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಷ್ಟೇ ಅಲ್ಲದೆ ಈ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಭುಜಕ್ಕೆ ಚೆಂಡು ಬಲವಾಗಿ ತಾಕಿದ್ದು ಪಂದ್ಯದ ನಡುವೆಯೇ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಭಾರತದ ಪರ ಫೀಲ್ಡಿಂಗ್ ಮಾಡದ ಹಾರ್ದಿಕ್ ಪಾಂಡ್ಯಾ ಬದಲಾಗಿ ಇಶಾನ್ ಕಿಶನ್ ಕಣಕ್ಕಿಳಿದಿದ್ದರು. ಸದ್ಯ ತೀವ್ರ ಭುಜದ ಗಾಯಕ್ಕೆ ಒಳಗಾಗಿರುವ ಹಾರ್ದಿಕ್ ಪಾಂಡ್ಯ ಮುಂದಿನ ನ್ಯೂಜಿಲೆಂಡ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗುತ್ತಿದೆ.

ಪಾಕ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂದು ಮೊದಲೇ ತಿಳಿಸಿದ್ದ ಹಾರ್ದಿಕ್ ಪಾಂಡ್ಯ

ಪಾಕ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂದು ಮೊದಲೇ ತಿಳಿಸಿದ್ದ ಹಾರ್ದಿಕ್ ಪಾಂಡ್ಯ


ಇನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಈ ಪಂದ್ಯದ ಟಾಸ್ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ತಾನು ಬೌಲಿಂಗ್ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದರು. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ತಾನು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು ಸೆಮಿಫೈನಲ್ ಸನಿಹದಲ್ಲಿ ಬೌಲಿಂಗ್ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಇದೀಗ ಮತ್ತೆ ಗಾಯಕ್ಕೊಳಗಾಗಿರುವ ಹಾರ್ದಿಕ್ ಪಾಂಡ್ಯ ಪುನಃ ಚೇತರಿಸಿಕೊಳ್ಳುವುದು ತೀರಾ ಕಷ್ಟದ ಕೆಲಸವಾಗಿದ್ದು ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯಾ ಕಡೆಯಿಂದ ಟೀಮ್ ಇಂಡಿಯಾಗೆ ದೊಡ್ಡ ಮಟ್ಟದ ಕೊಡುಗೆಯನ್ನು ನಿರೀಕ್ಷಿಸುವ ಹಾಗಿಲ್ಲ.

ಹಾರ್ದಿಕ್ ಪಾಂಡ್ಯಾ ಬದಲು ಶಾರ್ದೂಲ್ ಠಾಕೂರ್ ಇದ್ದರೂ ಭಾರತಕ್ಕೆ ತಪ್ಪಿದ್ದಲ್ಲ ತೊಂದರೆ

ಹಾರ್ದಿಕ್ ಪಾಂಡ್ಯಾ ಬದಲು ಶಾರ್ದೂಲ್ ಠಾಕೂರ್ ಇದ್ದರೂ ಭಾರತಕ್ಕೆ ತಪ್ಪಿದ್ದಲ್ಲ ತೊಂದರೆ


ಹಾರ್ದಿಕ್ ಪಾಂಡ್ಯಾ ಬದಲಾಗಿ ಮುಂದಿನ ಪಂದ್ಯಗಳಲ್ಲಿ ಶಾರ್ದೂಲ್ ಠಾಕೂರ್ ಪಂದ್ಯವನ್ನಾಡಲು ಲಭ್ಯರಿದ್ದಾರೆ. ಆದರೆ ಆಯ್ಕೆ ಇದ್ದರೂ ಸಹ ಟೀಮ್ ಇಂಡಿಯಾ ನಿಟ್ಟುಸಿರು ಬಿಡುವ ಹಾಗಿಲ್ಲ. ಹೌದು, ಶಾರ್ದೂಲ್ ಠಾಕೂರ್ ಫಿನಿಶಿಂಗ್ ಸ್ಥಾನದಲ್ಲಿ ಇದುವರೆಗೂ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದೆ ಇರುವುದು ಸದ್ಯ ಟೀಮ್ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದ್ದು ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಂಡರೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಬಹುದೇ ಹೊರತು ಬ್ಯಾಟಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್ ಹಾರ್ದಿಕ್ ಪಾಂಡ್ಯಾ ರೀತಿಯ ದೊಡ್ಡ ರನ್ ಕೊಡುಗೆ ನೀಡಲಿದ್ದಾರೆ ಎಂಬುದನ್ನು ನಿರೀಕ್ಷಿಸುವುದು ತೀರಾ ಕಷ್ಟ.

Story first published: Monday, October 25, 2021, 19:54 [IST]
Other articles published on Oct 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X