ಭಾರತ vs ಪಾಕ್: ಟಾಸ್ ಬೆನ್ನಲ್ಲೇ ನಿರಾಸೆ ಮೂಡಿಸಿದ ಹಾರ್ದಿಕ್ ಹೇಳಿಕೆ; ಭಾರತಕ್ಕಿದು ದೊಡ್ಡ ಹಿನ್ನಡೆ!

ಪ್ರತಿಷ್ಠಿತ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯದಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡುತ್ತಿವೆ. ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಭಾರತ vs ಪಾಕ್: ಬಲಿಷ್ಠ ಭಾರತ ತಂಡ ಪ್ರಕಟ; ಟಾಸ್ ವರದಿ ಮತ್ತು ಲೈವ್‌ ಸ್ಕೋರ್ಭಾರತ vs ಪಾಕ್: ಬಲಿಷ್ಠ ಭಾರತ ತಂಡ ಪ್ರಕಟ; ಟಾಸ್ ವರದಿ ಮತ್ತು ಲೈವ್‌ ಸ್ಕೋರ್

ಹೀಗೆ ಪ್ರತಿಷ್ಠಿತ ಪಂದ್ಯದಲ್ಲಿ ಟಾಸ್ ಸೋತಿರುವ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು ಟಾಸ್ ಮುಗಿದ ನಂತರ ಮಾತನಾಡಿದ ವಿರಾಟ್ ಕೊಹ್ಲಿ "ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬೇಕೆಂಬ ಇಚ್ಛೆ ನಮ್ಮಲ್ಲಿಯೂ ಇತ್ತು ಆದರೆ ಟಾಸ್ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಕಣಕ್ಕಿಳಿಯಲಿರುವ ನಮ್ಮ ತಂಡ ಸಮತೋಲನದಿಂದ ಕೂಡಿದ್ದು ಪಾಕಿಸ್ತಾನ ತಂಡಕ್ಕೆ ಉತ್ತಮ ಟಾರ್ಗೆಟ್ ನೀಡುವ ಭರವಸೆಯಿದೆ. ವಿಶ್ವದಾದ್ಯಂತ ಈ ಪಂದ್ಯವನ್ನು ವೀಕ್ಷಿಸುತ್ತಿದ್ದು, ಅದನ್ನು ನಾವು ಸ್ಫೂರ್ತಿಯಾಗಿ ತೆಗೆದುಕೊಂಡು ಆಟವಾಡಬೇಕಿದೆ. ಪಂದ್ಯಕ್ಕಿರುವ ಈ ಬೆಂಬಲವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೇ ವೃತ್ತಿಪರ ಕ್ರಿಕೆಟಿಗರಾಗಿ ತೆಗೆದುಕೊಂಡು ಉತ್ತಮ ಪ್ರದರ್ಶನ ನೀಡಬೇಕಿದೆ. ಪಿಚ್ ಕೂಡ ತೀರಾ ವಿಭಿನ್ನವಾಗಿದ್ದು, ಪಿಚ್ ಮೇಲೆ ಯಾವುದೇ ಹುಲ್ಲುಗಳಿಲ್ಲ. ಇದೇ ರೀತಿಯ ಪಿಚ್ ಐಪಿಎಲ್ ಸಮಯದಲ್ಲಿಯೂ ನಮಗೆ ಸವಾಲೊಡ್ಡಿತ್ತು, ಆದರೆ ಈ ಬಾರಿ ವಿಶ್ವಕಪ್‌ಗೋಸ್ಕರ ಇಂತಹ ಪಿಚ್‌ನಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್: ನೀಡಿದ್ದು ಕೇವಲ 2 ರನ್, ಪಡೆದದ್ದು 4 ವಿಕೆಟ್!; ಚಾಂಪಿಯನ್ಸ್ ಬೆವರಿಳಿಸಿದ ಇಂಗ್ಲೆಂಡ್ ಬೌಲರ್ಟಿ20 ವಿಶ್ವಕಪ್: ನೀಡಿದ್ದು ಕೇವಲ 2 ರನ್, ಪಡೆದದ್ದು 4 ವಿಕೆಟ್!; ಚಾಂಪಿಯನ್ಸ್ ಬೆವರಿಳಿಸಿದ ಇಂಗ್ಲೆಂಡ್ ಬೌಲರ್

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಪ್ರಕಟವಾಗಿರುವ ಭಾರತ ತಂಡದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ಈ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಹಲವಾರು ದಿನಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಕೂಡ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು, ಟಾಸ್ ಮುಗಿದ ನಂತರ ಪಂದ್ಯದ ಕುರಿತು ನೀಡಿರುವ ಹೇಳಿಕೆ ಇದೀಗ ಎಲ್ಲರಲ್ಲಿಯೂ ಬೇಸರ ಮೂಡಿಸಿದೆ. ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ಪಂದ್ಯದ ಕುರಿತಾಗಿ ಹೇಳಿದ್ದೇನು ಎಂಬುದರ ಮಾಹಿತಿ ಮುಂದಿದೆ ಓದಿ.

ಈ ಪಂದ್ಯದಲ್ಲಿಯೂ ನಾನು ಬೌಲಿಂಗ್ ಮಾಡುವುದಿಲ್ಲ ಎಂದ ಹಾರ್ದಿಕ್

ಈ ಪಂದ್ಯದಲ್ಲಿಯೂ ನಾನು ಬೌಲಿಂಗ್ ಮಾಡುವುದಿಲ್ಲ ಎಂದ ಹಾರ್ದಿಕ್

ಹಾರ್ದಿಕ್ ಪಾಂಡ್ಯ ಹಲವಾರು ದಿನಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹೀಗಾಗಿಯೇ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಪರ ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಅಷ್ಟೇ ಅಲ್ಲದೆ ಆಡಿದ ಯಾವುದೇ ಐಪಿಎಲ್ ಪಂದ್ಯಗದಲ್ಲಿಯೂ ಬೌಲಿಂಗ್ ಮಾಡಲಿಲ್ಲ. ಈ ಕುರಿತಾಗಿಯೇ ಇದೀಗ ಹಾರ್ದಿಕ್ ಪಾಂಡ್ಯ ಪಂದ್ಯದ ಟಾಸ್ ಮುಗಿದ ನಂತರ ಮಾತನಾಡಿದ್ದು ಇಂದಿನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೂಡ ನಾನು ಬೌಲಿಂಗ್ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಹೀಗೆ ಹಾರ್ದಿಕ್ ಪಾಂಡ್ಯ ನೀಡಿದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂಬ ಹೇಳಿಕೆ ಇದೀಗ ಭಾರೀ ನಿರಾಸೆಯನ್ನು ಮೂಡಿಸಿದೆ. ಆಲ್ ರೌಂಡರ್ ಆಟಗಾರನಾಗಿರುವ ಹಾರ್ದಿಕ್ ಪಾಂಡ್ಯರಿಂದ ಬೌಲಿಂಗ್ ವಿಭಾಗಕ್ಕೆ ಯಾವುದೇ ಕೊಡುಗೆ ಸಿಗುವುದಿಲ್ಲ ಎಂದು ತಿಳಿದ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸೆಮಿಫೈನಲ್ ಸನಿಹದಲ್ಲಿ ಬೌಲಿಂಗ್ ಮಾಡುವ ವಿಶ್ವಾಸದಲ್ಲಿದ್ದಾರೆ ಹಾರ್ದಿಕ್

ಸೆಮಿಫೈನಲ್ ಸನಿಹದಲ್ಲಿ ಬೌಲಿಂಗ್ ಮಾಡುವ ವಿಶ್ವಾಸದಲ್ಲಿದ್ದಾರೆ ಹಾರ್ದಿಕ್

ಹೀಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಲು ಅಸಾಧ್ಯ ಎಂಬುದನ್ನು ಬಹಿರಂಗ ಪಡಿಸಿರುವ ಹಾರ್ದಿಕ್ ಪಾಂಡ್ಯ ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತದ ಸನಿಹದ ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಸಹ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಬಹುದು ಎಂಬ ಸಲಹೆಯನ್ನು ತಮ್ಮ ವೈದ್ಯಕೀಯ ತಂಡ ನೀಡಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.

Virat Kohli ಪಾಕಿಸ್ತಾನದ ಪಂದ್ಯ ಮುಗಿದಾದ ನಂತರ Rohit ಬಗ್ಗೆ ಹೇಳಿದ್ದೇನು | Oneindia Kannada
ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದೇನೆ ಎಂದ ಹಾರ್ದಿಕ್ ಪಾಂಡ್ಯ

ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದೇನೆ ಎಂದ ಹಾರ್ದಿಕ್ ಪಾಂಡ್ಯ

ಇನ್ನು ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಇರುವುದರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಮತ್ತು ವ್ಯಂಗ್ಯಗಳು ಕೂಡಾ ವ್ಯಕ್ತವಾಗುತ್ತಿರುವುದರಿಂದ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿರುವುದಾಗಿ ಹೇಳಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, October 24, 2021, 20:06 [IST]
Other articles published on Oct 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X