ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರನ್ನು ಪ್ರಕಟಿಸಿದ ಐಸಿಸಿ; ಭಾರತೀಯರೇ ಇಲ್ಲ!

T20 World Cup 2021: ICC announces best XI of the tournament, No Indian player included

ಕಳೆದೊಂದು ತಿಂಗಳಿನಿಂದ ಯುಎಇಯಲ್ಲಿ ನಡೆಯುತ್ತಿದ್ದ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ನವೆಂಬರ್ 14ರ ಭಾನುವಾರದಂದು ನಡೆದ ಫೈನಲ್ ಪಂದ್ಯದ ಮೂಲಕ ಅಧಿಕೃತವಾಗಿ ತೆರೆಬಿದ್ದಿದೆ. ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್‍ಗಳ ಅಮೋಘ ಜಯವನ್ನು ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಗುಂಪು ಬೇಡ; ಟಿ20 ವಿಶ್ವಕಪ್‌ನಲ್ಲಾದ ತಪ್ಪು ಮತ್ತೆ ಆಗದಿರಲು ಮಾಸ್ಟರ್‌ಪ್ಲಾನ್ ಹಾಕಿದ ಕೋಚ್ ದ್ರಾವಿಡ್ಗುಂಪು ಬೇಡ; ಟಿ20 ವಿಶ್ವಕಪ್‌ನಲ್ಲಾದ ತಪ್ಪು ಮತ್ತೆ ಆಗದಿರಲು ಮಾಸ್ಟರ್‌ಪ್ಲಾನ್ ಹಾಕಿದ ಕೋಚ್ ದ್ರಾವಿಡ್

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನ ಟೂರ್ನಿಯಲ್ಲಿ ಯಾವ ತಂಡಗಳು ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿವೆ ಮತ್ತು ಫೈನಲ್ ಸುತ್ತಿಗೆ ಯಾವ ತಂಡಗಳು ಲಗ್ಗೆ ಇಡಬಹುದು ಹಾಗೂ ಟ್ರೋಫಿಯನ್ನು ಯಾವ ತಂಡ ಎತ್ತಿ ಹಿಡಿಯಬಹುದು ಎನ್ನುವುದರ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರೀಡಾ ಪಂಡಿತರು ತಮ್ಮ ತಮ್ಮ ಊಹೆಗಳನ್ನು ಹೇಳತೊಡಗಿದ್ದರು. ಹೀಗೆ ಈ ಬಾರಿ ಉತ್ತಮ ಪ್ರದರ್ಶನವನ್ನು ನೀಡಲಿರುವ ಮತ್ತು ಟ್ರೋಫಿ ಎತ್ತಿ ಹಿಡಿಯಲಿರುವ ತಂಡಗಳನ್ನು ಊಹಿಸಿದ್ದವರ ಪೈಕಿ ಬಹುತೇಕರು ಆಸ್ಟ್ರೇಲಿಯಾ ತಂಡವನ್ನು ಗಣನೆಗೆ ತೆಗೆದುಕೊಂಡೇ ಇರಲಿಲ್ಲ.

ಹೀಗೆ ಟೂರ್ನಿ ಆರಂಭವಾಗುವ ಮುನ್ನ ದೊಡ್ಡ ಮಟ್ಟದಲ್ಲಿ ಕಡೆಗಣಿಸಲ್ಪಟ್ಟಿದ್ದ ಆಸ್ಟ್ರೇಲಿಯಾ ಈ ಬಾರಿಯ ಟೂರ್ನಿಯ ಸೂಪರ್ 12 ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿದ್ದ ಕಾರಣ ಸೆಮಿಫೈನಲ್ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ಇದುವರೆಗೂ ಸೋಲನ್ನೇ ಕಾಣದಿದ್ದ ಪಾಕಿಸ್ತಾನ ತಂಡಕ್ಕೆ ಟೂರ್ನಿಯಲ್ಲಿ ಚೊಚ್ಚಲ ಸೋಲಿನ ರುಚಿಯನ್ನು ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯದಲ್ಲಿ ತೋರಿಸಿತು. ಹೀಗೆ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಆಸ್ಟ್ರೇಲಿಯಾ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೂಡ ಭರ್ಜರಿ ಜಯಗಳಿಸಿ ಟ್ರೋಫಿಗೆ ಮುತ್ತಿಕ್ಕಿದೆ.

ಭಾರತ vs ನ್ಯೂಜಿಲೆಂಡ್‌: ಮೊದಲನೇ ಟಿ20 ಪಂದ್ಯಕ್ಕಾಗಿ ಜೈಪುರಕ್ಕೆ ಬಂದ ದ್ರಾವಿಡ್, ರೋಹಿತ್ ಶರ್ಮಾಭಾರತ vs ನ್ಯೂಜಿಲೆಂಡ್‌: ಮೊದಲನೇ ಟಿ20 ಪಂದ್ಯಕ್ಕಾಗಿ ಜೈಪುರಕ್ಕೆ ಬಂದ ದ್ರಾವಿಡ್, ರೋಹಿತ್ ಶರ್ಮಾ

ಇನ್ನು ಐಸಿಸಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರ ತಂಡವನ್ನು ರಚಿಸಿದ್ದು, ಈ ತಂಡದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಹೀಗೆ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ಪ್ರಕಟಿಸಿರುವ ಪ್ರಕಾರ ಉತ್ತಮ ಪ್ರದರ್ಶನ ನೀಡಿರುವ 11 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ..

ಐಸಿಸಿ ಪ್ರಕಟಿಸಿರುವ 11 ಅತ್ಯುತ್ತಮ ಆಟಗಾರರ ತಂಡ ಹೀಗಿದೆ

ಐಸಿಸಿ ಪ್ರಕಟಿಸಿರುವ 11 ಅತ್ಯುತ್ತಮ ಆಟಗಾರರ ತಂಡ ಹೀಗಿದೆ

ಐಸಿಸಿ ಪ್ರಕಾರ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ

ಡೇವಿಡ್ ವಾರ್ನರ್ - ಆಸ್ಟ್ರೇಲಿಯಾ (289 ರನ್), ಜೋಸ್ ಬಟ್ಲರ್ ( ವಿಕೆಟ್ ಕೀಪರ್‌) - ಇಂಗ್ಲೆಂಡ್ (269 ರನ್), ಬಾಬರ್ ಅಜಮ್ ( ನಾಯಕ ) - ಪಾಕಿಸ್ತಾನ (303 ರನ್), ಚರಿತ ಅಸಲಂಕಾ -ಶ್ರೀಲಂಕಾ ( 231 ರನ್ ), ಏಡನ್ ಮಾರ್ಕ್ರಮ್ - ದಕ್ಷಿಣ ಆಫ್ರಿಕಾ ( 162 ರನ್ ), ಮೊಯಿನ್ ಅಲಿ - ಇಂಗ್ಲೆಂಡ್ ( 92 ರನ್‌ ಮತ್ತು 7 ವಿಕೆಟ್), ವನಿಂದು ಹಸರಂಗ - ಶ್ರೀಲಂಕಾ ( 16 ವಿಕೆಟ್ ), ಆ್ಯಡಮ್ ಜಂಪಾ - ಆಸ್ಟ್ರೇಲಿಯಾ ( 13 ವಿಕೆಟ್ ), ಜೋಶ್ ಹೇಜಲ್ ವುಡ್ - ಆಸ್ಟ್ರೇಲಿಯಾ ( 11 ವಿಕೆಟ್‌ ), ಟ್ರೆಂಟ್ ಬೌಲ್ಟ್ - ನ್ಯೂಜಿಲೆಂಡ್‌ ( 13 ವಿಕೆಟ್ ), ಅನ್ರಿಚ್ ನಾರ್ಕಿಯಾ - ದಕ್ಷಿಣ ಆಫ್ರಿಕಾ ( 9 ವಿಕೆಟ್)

ಬಾಬರ್ ಅಜಮ್ ಉತ್ತಮ ನಾಯಕ

ಬಾಬರ್ ಅಜಮ್ ಉತ್ತಮ ನಾಯಕ

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿನ ಎಲ್ಲಾ ಪಂದ್ಯಗಳನ್ನು ಗೆದ್ದ ಏಕೈಕ ತಂಡ ಪಾಕಿಸ್ತಾನ. ಹೀಗೆ ಟೂರ್ನಿಯಲ್ಲಿ ತನ್ನ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಬಾಬರ್ ಅಜಮ್ 303 ರನ್‌ಗಳನ್ನು ಕೂಡ ಕಲೆ ಹಾಕಿದರು. ಅಷ್ಟೇ ಅಲ್ಲದೆ ವಿಶ್ವಕಪ್ ಇತಿಹಾಸದಲ್ಲಿಯೇ ಭಾರತ ತಂಡವನ್ನು ಸೋಲಿಸಿದ ಮೊದಲನೇ ಪಾಕಿಸ್ತಾನ ನಾಯಕ ಎಂಬ ಸಾಧನೆಯನ್ನು ಕೂಡ ಬಾಬರ್ ಅಜಮ್ ಮಾಡಿದರು. ಇನ್ನು ಭಾರತ ವಿರುದ್ಧದ ಅಜೇಯ 68 ರನ್ ಮತ್ತು ಇನ್ನುಳಿದ 3 ಅರ್ಧಶತಕಗಳ ನೆರವಿನಿಂದ ಬಾಬರ್ ಅಜಮ್ ಪಾಕಿಸ್ತಾನ ತಂಡವನ್ನು ಸೆಮಿಫೈನಲ್ ಹಂತಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಹೀಗೆ ಬ್ಯಾಟಿಂಗ್ ಮತ್ತು ನಾಯಕತ್ವವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಬಾಬರ್ ಅಜಮ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅತ್ಯುತ್ತಮ ನಾಯಕ ಎಂದು ಐಸಿಸಿ ಆಯ್ಕೆ ಮಾಡಿದೆ.

ಟೀಮ್ ಇಂಡಿಯಾದ ಒಬ್ಬರು ಕೂಡ ಅತ್ಯುತ್ತಮ ತಂಡಕ್ಕೆ ಆಯ್ಕೆಯಾಗಲೇ ಇಲ್ಲ

ಟೀಮ್ ಇಂಡಿಯಾದ ಒಬ್ಬರು ಕೂಡ ಅತ್ಯುತ್ತಮ ತಂಡಕ್ಕೆ ಆಯ್ಕೆಯಾಗಲೇ ಇಲ್ಲ

ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸೆಮಿಫೈನಲ್ ಹಂತವನ್ನು ಪ್ರವೇಶಿಸದೇ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು. ಹೀಗೆ ಟೂರ್ನಿಯಿಂದ ಹೊರಬಿದ್ದ ಟೀಮ್ ಇಂಡಿಯಾದ ಆಟಗಾರರಲ್ಲಿ ಯಾರೂ ಸಹ ಐಸಿಸಿ ಪ್ರಕಟಿಸಿರುವ ಅತ್ಯುತ್ತಮ ಆಟಗಾರರನ್ನೊಳಗೊಂಡ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳದೇ ಇರುವುದು ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ ಬೇಸರದ ಸಂಗತಿಯಾಗಿದೆ.

Hardik Pandya ಅವರ 5 ಕೋಟಿ ಕೈಗಡಿಯಾರ ಈಗ ಎಲ್ಲಿದೆ | Oneindia Kannada

Story first published: Monday, November 15, 2021, 18:31 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X