ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾಗಿದೆ ಆ ತಂಡಗಳ ಹೊಡೆತ; ಕಪ್ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು: ಶೇನ್ ವಾರ್ನ್

t20 world cup 2021: India and England are favourites to win this tournament says Shane Warne

ಅಕ್ಟೋಬರ್ 17ರ ಭಾನುವಾರದಿಂದ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಚಾಲನೆ ಪಡೆದುಕೊಂಡಿದ್ದು ಅರ್ಹತಾ ಸುತ್ತಿನ ಪಂದ್ಯಗಳು ಜರುಗುತ್ತಿವೆ. ಇಂದು ( ಅಕ್ಟೋಬರ್ 22 ) ಟೂರ್ನಿಯ ಅರ್ಹತಾ ಸುತ್ತು ಮುಗಿಯಲಿದ್ದು ನಾಳೆಯಿಂದ ( ಅಕ್ಟೋಬರ್ 23 ) ಸೂಪರ್ 12 ಸುತ್ತು ಆರಂಭಗೊಳ್ಳಲಿದೆ.

ಸುಮಾರು 5 ವರ್ಷಗಳ ನಂತರ ಜನಪ್ರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮರಳಿ ಬಂದಿದ್ದು ಸೂಪರ್ 12 ಸುತ್ತು ಸನಿಹವಾಗುತ್ತಿದ್ದಂತೆ ಟೂರ್ನಿಯ ಕುರಿತು ಚರ್ಚೆಗಳು ಹೆಚ್ಚಾಗತೊಡಗಿವೆ. 2016ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಇಲ್ಲಿಯವರೆಗೂ ಯಾವುದೇ ವರ್ಷಗಳಲ್ಲಿಯೂ ಸಹ ಈ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯದೇ ಇರುವ ಕಾರಣದಿಂದಾಗಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮೇಲೆ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮತ್ತು ಕುತೂಹಲ ಉಂಟಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಯಾವುದೇ ತಂಡಗಳನ್ನು ಕೂಡ ಕಡೆಗಣಿಸುವ ಹಾಗಿಲ್ಲ. ಎಲ್ಲಾ ತಂಡಗಳು ಕೂಡ ತಮ್ಮದೇ ಆದಂತಹ ಬಲಿಷ್ಠ ಗುಣಗಳು ಮತ್ತು ಪ್ರತಿಭಾವಂತ ಆಟಗಾರರನ್ನು ಹೊಂದಿವೆ. ಓರ್ವ ಆಟಗಾರ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಬಹುದಾದಂಥ ಚುಟುಕು ಕ್ರಿಕೆಟ್‍ನಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದನ್ನು ನಿಖರವಾಗಿ ಊಹಿಸುವುದು ತೀರಾ ಕಷ್ಟದ ಕೆಲಸ.

ಟಿ20 ವಿಶ್ವಕಪ್: ಪಾಕಿಸ್ತಾನದ ಈ 3 ಅಪಾಯಕಾರಿ ಆಟಗಾರರ ಮೇಲೆ ಭಾರತಕ್ಕೆ ಬೇಕು ಎಚ್ಚರಿಕೆಯ ಕಣ್ಣು!ಟಿ20 ವಿಶ್ವಕಪ್: ಪಾಕಿಸ್ತಾನದ ಈ 3 ಅಪಾಯಕಾರಿ ಆಟಗಾರರ ಮೇಲೆ ಭಾರತಕ್ಕೆ ಬೇಕು ಎಚ್ಚರಿಕೆಯ ಕಣ್ಣು!

ಆದರೆ, ಹಲವಾರು ವರ್ಷಗಳ ಕಾಲ ವಿವಿಧ ಮಾದರಿಯ ಕ್ರಿಕೆಟ್ ಆಡಿರುವ ಅನುಭವವನ್ನು ಹೊಂದಿರುವ ನುರಿತ ಮಾಜಿ ಕ್ರಿಕೆಟಿಗರು ಟೂರ್ನಿಯಲ್ಲಿ ಯಾವ ತಂಡ ಗೆಲ್ಲಲಿದೆ ಮತ್ತು ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬುದರ ಕುರಿತು ತಮ್ಮ ಪಾಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಾಗಿ ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದು, ಇದೀಗ ಆಸ್ಟ್ರೇಲಿಯಾದ ಖ್ಯಾತ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಕೂಡ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಬಹುದಾದಂತಹ ತಂಡಗಳು ಯಾವುವು ಮತ್ತು ಟೂರ್ನಿಯಲ್ಲಿ ಮಿಂಚಬಹುದಾದ ಆಟಗಾರರು ಯಾರು ಎಂಬುದರ ಕುರಿತು ಈ ಕೆಳಕಂಡಂತೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಟ್ರೋಫಿ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು

ಟ್ರೋಫಿ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು

"ನನ್ನ ಪ್ರಕಾರ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಮತ್ತು ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡಗಳು ಟ್ರೋಫಿ ಗೆಲ್ಲಬಹುದಾದ ಬಲಿಷ್ಠ ತಂಡಗಳಾಗಿವೆ. ಇನ್ನು ನ್ಯೂಜಿಲೆಂಡ್ ತಂಡ ಕೂಡ ಐಸಿಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಬಹುದಾದ ತಂಡವಾಗಿದೆ" ಎಂದು ಶೇನ್ ವಾರ್ನ್ ಹೇಳಿದ್ದಾರೆ.

ಆಸ್ಟ್ರೇಲಿಯಾಗೆ ಎದುರಾಗಲಿದೆ ಈ ಸಂಕಷ್ಟ

ಆಸ್ಟ್ರೇಲಿಯಾಗೆ ಎದುರಾಗಲಿದೆ ಈ ಸಂಕಷ್ಟ

ಇನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಬಹುದಾದ ತಂಡ ಎಂದು ಆಸ್ಟ್ರೇಲಿಯಾವನ್ನು ಆರಿಸಿಲ್ಲ. ತಮ್ಮದೇ ದೇಶವನ್ನು ಕೈಬಿಟ್ಟಿರುವ ಶೇನ್ ವಾರ್ನ್ ಇದಕ್ಕೆ ಕಾರಣವನ್ನು ಕೂಡ ನೀಡಿದ್ದಾರೆ. "ಆಸ್ಟ್ರೇಲಿಯಾ ಸೂಪರ್ 12 ಹಂತದಲ್ಲಿ ತನ್ನ ಗುಂಪಿನಲ್ಲಿ ಪಂದ್ಯ ಗೆಲ್ಲುವಂತಹ ತಂಡಗಳನ್ನು ಹೊಂದಿರುವ ಕಾರಣ ಕಡೆಗಣಿಸಲ್ಪಟ್ಟಿದೆ" ಎಂದು ಶೇನ್ ವಾರ್ನ್ ಹೇಳಿದ್ದಾರೆ. ಸೂಪರ್ 12 ಹಂತದ ಗ್ರೂಪ್ 1ರಲ್ಲಿ ಸ್ಥಾನ ಪಡೆದುಕೊಂಡಿರುವ ಆಸ್ಟ್ರೇಲಿಯಾ ತನ್ನ ಗುಂಪಿನಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಸೌತ್ ಆಫ್ರಿಕಾ ತಂಡಗಳನ್ನು ಹೊಂದಿದೆ.

India vs Pakistan ಪಂದ್ಯಕ್ಕೆ ಆಟಗಾರರಲ್ಲಿ Ticket ಬೇಡಿಕೆ | Oneindia Kannada
ಈ ಇಬ್ಬರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ

ಈ ಇಬ್ಬರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ

ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಬಲ್ಲರು ಎಂಬುದನ್ನು ಊಹಿಸಿರುವ ಶೇನ್ ವಾರ್ನ್ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಇಂಗ್ಲೆಂಡ್ ತಂಡದ ಇಯಾನ್ ಮಾರ್ಗನ್ ಹೆಸರನ್ನು ತೆಗೆದುಕೊಂಡಿದ್ದಾರೆ. "ಡೇವಿಡ್ ವಾರ್ನರ್ ಮತ್ತು ಇಯಾನ್ ಮಾರ್ಗನ್ ಅವರ ಇತ್ತೀಚಿನ ಪ್ರದರ್ಶನದ ಆಧಾರದ ಮೇಲೆ ಅವರನ್ನು ಕಡೆಗಣಿಸಬೇಡಿ. ಈ ಇಬ್ಬರಲ್ಲಿ ಯಾರಾದರೊಬ್ಬರು ಮ್ಯಾನ್ ಆಫ್ ದಿ ಟೂರ್ನಮೆಂಟ್ ಆದರೂ ಯಾವುದೇ ಅಚ್ಚರಿ ಪಡಬೇಕಿಲ್ಲ" ಎಂದು ಶೇನ್ ವಾರ್ನ್ ಡೇವಿಡ್ ವಾರ್ನರ್ ಮತ್ತು ಇಯಾನ್ ಮಾರ್ಗನ್ ಪ್ರದರ್ಶನದ ಕುರಿತು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Story first published: Friday, October 22, 2021, 16:31 [IST]
Other articles published on Oct 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X